ಡಿಸೆಂಬರ್ 8 ರಂದು ಸೇನಾ ಕಾಲೇಜಿನ ಕಾರ್ಯ ಕ್ರಮವೊಂದಕ್ಕೆ ತೆರಳಿತ್ತಿದ್ದ ದೇಶದ ಮೊದಲ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ( CDS ) ಜನರಲ್ ಬಿಪಿನ್ ರಾವತ್’ರವರ ಹೆಲಿಕಾಪ್ಟರ್ ಪತನಗೊಂಡ 24 ಗಂಟೆಯ ಒಳಗೆ ಬ್ಲಾಕ್ ಬಾಕ್ಸ್ ಸೇನಾ ಸಿಬ್ಬಂದಿಗಳಿಗೆ ದೊರೆತಿದೆ.
ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೂನೂರಿನಲ್ಲಿ ಪತನಗೊಂಡ MI17V5 ಹೆಲಿಕಾಪ್ಟರ್’ನಲ್ಲಿದ್ದ ಜನರಲ್ ಬಿಪಿನ್ ರಾವತ್’ರವರ ಮತ್ತು ಸಹಚರರ ಸಾವಿನ ಕೊನೆಕ್ಷಣದ ಚಟುವಟಿಕೆಗಳ ರಹಸ್ಯಗಳನ್ನು ಬಿಚ್ಚಿಡಲಿದೆ ಈ ಬ್ಲಾಕ್ ಬಾಕ್ಸ್.
ಈ ಬ್ಲಾಕ್ ಬಾಕ್ಸನ್ನು ಸೇನಾ ಕೇಂದ್ರಕ್ಕೆ ವರ್ಗಾವಣೆ ಮಾಡಲಾಗಿದ್ದರೂ ಸಹ ಅದನ್ನು ರಷ್ಯಾ ನೀಡಿರುವ ಯಂತ್ರದಲ್ಲಿ ಮಿಲ್ಕಿಂಗ್ ಪ್ರೋಸಸ್ ಮೂಲಕ ಅದರಲ್ಲಿದ್ದ ಮಾಹಿತಿಗಳನ್ನು ಹೊರತೆಗೆಯಲು ಇನ್ನೂ ಕಾಲಾವಕಾಶ ಬೇಕಾಗಿದೆ.
ಒಂದು ವೇಳೆ ಈ ” ಬ್ಲಾಕ್ ಬಾಕ್ಸ್ ” ಡ್ಯಾಮೇಜ್ ಆಗಿದ್ದರೆ ಅದನ್ನು ಮಿಲ್ಕಿಂಗ್ ಮಾಡಲು ರಷ್ಯಾ ಅಥವಾ ಇನ್ನಿತರ ವಿದೇಶಕ್ಕೆ ಕಳುಹಿಸಬೇಕಾಗುತ್ತದೆ.
ಏನಿದು ” ಬ್ಲಾಕ್ ಬಾಕ್ಸ್ ” ?
ಹೆಲಿಕಾಪ್ಟರ್ ಆಗಲಿ ಅಥವಾ ಇನ್ಯಾವುದೇ ವಿಮಾನವಾಗಲಿ ಅದರಲ್ಲಿ ಈ ಬ್ಲಾಕ್ ಬಾಕ್ಸ್ ಎನ್ನುವ ಚಿಕ್ಕ ಯಂತ್ರ ಇದ್ದೇ ಇರುತ್ತದೆ.
ಈ ಯಂತ್ರದ ಕೆಲಸ ಏನೆಂದರೆ ವಿಮಾನದಲ್ಲಿನ ಇಂಧನದ ಕ್ಷಮತೆ,ರೆಕ್ಕೆಗಳು ತಿರುಗುವ ವೇಗ ಮತ್ತು ದಿಕ್ಕು,ವಿಮಾನ ನೆಲದಿಂದ ಹಾರುತ್ತಿರುವ ಎತ್ತರ ಮತ್ತು ವೇಗ,ವಿಮಾನದ ಕೊನೆ ಕ್ಷಣದ ವರೆಗಿನ ಹವಮಾನ,ಪ್ರಯಾಣಿಕರು ಮತ್ತು ಪೈಲಟ್’ಗಳ ಧ್ವನಿಗಳು ಮತ್ತು ಇನ್ನಿತರ ಮುಖ್ಯವಾದ ಮಾಹಿತಿಗಳನ್ನು ದಾಖಲು ಮಾಡಿಕೊಂಡಿರುತ್ತದೆ.
ಇದು ಕಿತ್ತಳೆ ಬಣ್ಣದಲ್ಲಿದ್ದು
ಇದನ್ನು ಅತ್ಯತ್ತಮ ಗುಣಮಟ್ಟದ ಲೋಹದಿಂದ ಮಾಡಿರುವ ಕಾರಣ ಇದನ್ನು ಬ್ಲಾಕ್ ಬಾಕ್ಸ್ ಎನ್ನುತ್ತಾರೆ.
ಇದು ಒಂದು ವೇಳೆ ಸಮುದ್ರ ಅಥವಾ ನೀರಿನಲ್ಲಿ ಬಿದ್ದರೆ ಮುಂದಿನ ಒಂದು ತಿಂಗಳವರೆಗಿನವರೆಗೂ ಕೂಡ ಕೆಲಸ ಮಾಡುವಷ್ಟು ಸಾಮರ್ಥ್ಯವಿರುವ ಬ್ಯಾಟರಿಯನ್ನು ಇದಕ್ಕೆ ಅಳವಡಿಸಿರುತ್ತಾರೆ.
ಏನೇ ಆಗಲಿ ಮೂರೂ ಸೇನಾ ಪಡೆಗಳಿಗೂ ಏಕೈಕ ದಂಡನಾಯಕರಾಗಿದ್ದಂತಹ ಜನರಲ್ ಬಿಪಿನ್ ರಾವತ್’ರವರ ಸಾವಿನ ರಹಸ್ಯ ಆದಷ್ಟು ಬೇಗ ಬರಲಿ ಮತ್ತು ಅವರ ಆತ್ಮಕ್ಕೆ ಚಿರಶಾಂತಿ ಲಭಿಸಲಿ ಎಂಬುದು
” ನಮ್ಮ ತುಮಕೂರು ” ಪತ್ರಿಕೆಯ ಆಶಯ.
ವರದಿ: ವೆಂಕಟೇಶ ಜೆ.ಎಸ್ ( ವಿಕ್ಕಿ ) ಮಾಯಸಂದ್ರ
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700