ಮದುವೆಯ ಎಲ್ಲಾ ವಿಧಿ ವಿಧಾನಗಳು ಶಾಸ್ತ್ರೋಕ್ತವಾಗಿ ನೆರವೇರಿದ್ದವು ಆದರೆ, ವಧು ತಾಳಿ ಕಟ್ಟಿಸಿಕೊಳ್ಳಲು ನಿರಾಕರಿಸಿದರಿಂದ ಮದುವೆ ಮುರಿದುಬಿದ್ದ ಘಟನೆ ತುಮಕೂರಿನಲ್ಲಿ ನಡೆದಿದೆ.
ಹುಡುಗಿ ಜೊತೆ ಮದುವೆ ಸಂಬಂದ ಮುಂದುವರೆಸಲು ನಿರಾಕರಿಸಿದ ವರ ಹಾಗೂ ಕುಟುಂಬಸ್ಥರು ಪೊಲೀಸರ ಸಮ್ಮುಖದಲ್ಲಿ ರಾಜೀ ಸಂಧಾನಕ್ಕೆ ಮುಂದಾಗಿದ್ದಾರೆ. ಅಲ್ಲದೆ ಒಂದು ಲಕ್ಷ ಹಣ ವರನ ಕಡೆಯವರಿಗೆ ನೀಡಲು ಒಪ್ಪಿದ ವಧುವಿನ ತಂದೆ. ಮದುವೆಗೆ ನೀಡಿದ ಚಿನ್ನಾಭರಣ ವಾಪಸ್ ಕೊಟ್ಟಿದ್ದಾರೆ.
ಇನ್ನು ಕೋಳಾಲ ಪೊಲೀಸ ಠಾಣೆಯ ಸಬ್ ಇನ್ಸ್ಪೆಕ್ಟರ್ ಅವರ ಸಮ್ಮುಖದಲ್ಲಿ ರಾಜೀ ಸಂಧಾನ ನಡೆದಿದೆ. ಈ ವೇಳೆ ಮದುವೆ ಖರ್ಚು ಎಂದು ವರನ ಕಡೆಯವರು ಒಂದು ಲಕ್ಷ ರೂಪಾಯಿ ಪಡೆದಿದ್ದಾರೆ.
ಮದುವೆ ಮುರಿದು ಬಿದ್ದ ನಂತರ ತಮ್ಮ ತಮ್ಮ ಮನೆಗಳತ್ತ ಸಂಬಂಧಿಕರು ಹೊರಟು ಹೋಗಿದ್ದಾರೆ. ತನ್ನ ಮಾವನ ಮಗನ ಜೊತೆ ವಧು ಪ್ರೀತಿಸುತ್ತಿದ್ದಳು ಹೀಗಾಗಿ ಆಕೆ ಮದುವೆಗೆ ನಿರಾಕರಿಸಿರುವುದು ಬೆಳಕಿಗೆ ಬಂದಿದೆ.
ವಧುವಿನ ಪ್ರಿಯಕರ ನಿನ್ನೆ ರಾತ್ರಿಯಿಂದಲೇ ಕಲ್ಯಾಣ ಮಂಟಪದಲ್ಲಿ ಕಾಣಿಸಿಕೊಂಡಿದ್ದನು. ಪ್ರಿಯಕರನನ್ನು ಕಂಡು ವಧು ಮದುವೆಗೆ ನಿರಾಕರಿಸಿದ್ದಳು. ತಾಳಿ ಕಟ್ಟಿಸಿಕೊಳ್ಳುವ ವೇಳೆ ವಧುವಿನ ನಿರ್ಧಾರವನ್ನು ಕೇಳಿ ವರನ ಕಡೆಯವರು ದಂಗಾಗಿ ಹೋಗಿದ್ದಾರೆ. ನಂತರ ಪೊಲೀಸರ ಮಧ್ಯಪ್ರವೇಶದಿಂದ ಪರಿಸ್ಥಿತಿ ತಿಳಿಯಾಯಿತು.