ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ಭಾಷಣದಲ್ಲಿ ಬಳಸಿದ ಪದಗಳ ಬಗ್ಗೆ ವಿಪಕ್ಷ ನಾಯಕ ಆರ್. ಅಶೋಕ್ ಆಕ್ಷೇಪ ವ್ಯಕ್ತಪಡಿಸಿದರು. ಸದನದಲ್ಲಿ ಬಜೆಟ್ ಭಾಷಣದ ಮೇಲಿನ ಚರ್ಚೆ ವೇಳೆ ಮಾತನಾಡಿ, ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದ ವಿರುದ್ಧ ಬಜೆಟ್ ಆರಂಭದಲ್ಲಿ “ಸವಾಲು” ಪದ ಬಳಕೆ ಯಾಕೆ? ಮಾಡಿದರು ಎಂದು ಆಕ್ಷೇಪಣೆ ವ್ಯಕ್ತಪಡಿಸಿದರು.
ಬಜೆಟ್ ಆರಂಭದಲ್ಲಿಯೇ ಕೇಂದ್ರದ ವಿರುದ್ಧ ಆರೋಪಿಸುತ್ತಾ, ಒಟ್ಟಾರೆ ಬಜೆಟ್ ಭಾಷಣದಲ್ಲಿ 41 ಬಾರಿ ಕೇಂದ್ರವನ್ನು ಬೈದರು. ಆರಂಭದಲ್ಲಿಯೇ ಮೋದಿ ಸರ್ಕಾರವನ್ನು ಟೀಕಿಸಿದ್ದರಿಂದ ವಾಕ್ ಔಟ್ ಮಾಡಿ ಹೋರಾಟ ಮಾಡಬೇಕಾಯಿತು ಎಂದು ಸ್ಪಷ್ಟನೆ ನೀಡಿದರು.
ಕರ್ನಾಟಕ ಸಂಸ್ಕ್ರತಿ ಮರೆತು ಸಿದ್ದರಾಮಯ್ಯ ಮಾತನಾಡುವುದು ಸರಿಯಲ್ಲ. ನಮ್ಮತನವನ್ನು ನಾವು ಸಂಸ್ಕೃತಿಯ ಮೂಲಕ ಶ್ರೀಮಂತ ಮಾಡಿಕೊಂಡಿದ್ದೇವೆ. ಇದನ್ನು ಅನಗತ್ಯವಾಗಿ ಮಾತನಾಡಿ ನಾಡಿಗೆ ಕೆಟ್ಟ ಹೆಸರು ತರುವುದು ಬೇಡ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


