ಬೆಳಗಾವಿ: ಮಗಳ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿದ ತಂದೆಯನ್ನು ಆತನ ಪತ್ನಿಯೇ ಬರ್ಬರವಾಗಿ ಹತ್ಯೆ ಮಾಡಿ ತುಂಡಾಗಿ ಕತ್ತರಿಸಿ ಪಕ್ಕದ ಜಮೀನಿಗೆ ಎಸೆದ ಭೀಕರ ಘಟನೆ ಚಿಕ್ಕೋಡಿ ತಾಲೂಕಿನ ಉಮ್ರಾಣಿ ಗ್ರಾಮದಲ್ಲಿ ನಡೆದಿದೆ.
ಶ್ರೀಮಂತ ಇಟ್ನಾಳೆ ಹತ್ಯೆಗೀಡಾದ ವ್ಯಕ್ತಿಯಾಗಿದ್ದಾನೆ. ಹತ್ಯೆಯ ನಂತರ ಪೊಲೀಸರಿಗೆ ಹೆದರಿದ ಪತ್ನಿ ಸಾವಿತ್ರಿ ಶವವನ್ನು ಕತ್ತರಿಸಿ ಚಿಕ್ಕ ಡ್ರಮ್ ನಲ್ಲಿ ತುಂಬಿ ಸಾಗಿಸಿ ಪಕ್ಕದ ಗದ್ದೆಗೆ ಎಸೆದಿದ್ದಳು. ಕೊಲೆ ಮಾಡಲು ಬಳಸಿದ್ದ ವಸ್ತು ತೊಳೆದು ತಗಡಿನ ಶೆಡ್ಡಿನಲ್ಲಿ ಬಿಸಾಡಿ ನಂತರ ಗಂಡನ ಮೊಬೈಲ್ ಫೋನನ್ನು ಕೂಡ ಸ್ವಿಚ್ ಆಫ್ ಮಾಡಿ,ಮಗಳಿಗೆ ನಡೆದ ವಿಚಾರವನ್ನು ಯಾರ ಬಳಿಯೂ ಹೇಳದಂತೆ ತಿಳಿಸಿದ್ದಾರೆ.
ಮೃತ ಶ್ರೀಮಂತ ಇಟ್ನಾಳೆ ಪರ ಪುರುಷರ ಜೊತೆಗೆ ಮಲಗುವಂತೆ ಪತ್ನಿಯನ್ನು ಪೀಡಿಸುತ್ತಿದ್ದ. ಈ ವಿಚಾರಕ್ಕೆ ಸದಾ ಜಗಳ ನಡೆಯುತ್ತಿತ್ತು. ಹಣ ಕೊಡು, ಬೈಕ್ ಕೊಡಿಸು ಎಂದು ಪೀಡಿಸುತ್ತಿದ್ದನಂತೆ. ಇದೆಲ್ಲವನ್ನೂ ಸಹಿಸಿದ್ದ ಪತ್ನಿ, ತನ್ನ ಮಗಳ ಮೇಲೆಯೇ ಬಲಾತ್ಕಾರಕ್ಕೆ ಯತ್ನಿಸಿದಾಗ ಸಹಿಸದೇ ಬರ್ಬರವಾಗಿ ಹತ್ಯೆ ಮಾಡಿದ್ದಾಳೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx