ಪತ್ನಿಯು ವಾಟ್ಸಾಪ್ ಸ್ಟೇಟಸ್ ನಲ್ಲಿ ಗಂಡನನ್ನು ಕೊಂದವರಿಗೆ ಬಹುಮಾನ ಘೋಷಣೆ ಮಾಡಿದ ವಿಚಿತ್ರ ಘಟನೆ ಆಗ್ರಾದ ಬಹ್ ಜಿಲ್ಲೆಯಲ್ಲಿ ವರದಿಯಾಗಿದೆ. ಪತಿಯು ಪತ್ನಿಯ ಸ್ಟೇಟಸ್ ನೋಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಎನ್ನಲಾಗಿದೆ. ಈ ಹಿಂದೆ ಪತ್ನಿಯ ಸ್ನೇಹಿತರೊಬ್ಬರು ಬೆದರಿಕೆ ಹಾಕಿದ್ದರು ಎಂದು ಪತಿ ದೂರಿನಲ್ಲಿ ಆರೋಪಿಸಿದ್ದಾರೆ.
ಮಹಿಳೆ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಬಹ್ ಪೊಲೀಸ್ ಠಾಣೆಯ ಉಸ್ತುವಾರಿ ಶ್ಯಾಮ್ ಸಿಂಗ್ ಹೇಳಿದ್ದಾರೆ. ಮಧ್ಯಪ್ರದೇಶದ ಭಿಂಡ್ ನ ಹಳ್ಳಿಯೊಂದರ ಮಹಿಳೆಯನ್ನು ವಿವಾಹವಾಗಿದ್ದ ಆತ. ಸ್ವಲ್ಪ ಸಮಯದ ನಂತರ, ಅವರ ನಡುವೆ ಜಗಳ ಮತ್ತು ಭಿನ್ನಾಭಿಪ್ರಾಯಗಳು ಕಾಣಿಸಿಕೊಂಡಿದ್ದು, ಐದು ತಿಂಗಳ ಕಾಲ ಅತೃಪ್ತಿಕರ ದಾಂಪತ್ಯದ ನಂತರ, ಡಿಸೆಂಬರ್ 2022 ರಲ್ಲಿ, ಮಹಿಳೆ ಬಹ್ ನಲ್ಲಿರುವ ತನ್ನ ಗಂಡನ ಮನೆಯನ್ನು ತೊರೆದು ತನ್ನ ಹೆತ್ತವರ ಮನೆಗೆ ಹಿಂದಿರುಗಿದ್ದಳು.
ದೂರಿನ ಪ್ರಕಾರ ಮಹಿಳೆ ಭಿಂಡ್ ನ ಪೊಲೀಸ್ ಠಾಣೆಯಲ್ಲಿ ಜೀವನಾಂಶ ದಾವೆ ಹೂಡಿದ್ದಾರೆ ಎನ್ನಲಾಗಿದೆ. ‘ಪತಿಯನ್ನು ಕೊಂದವರಿಗೆ ₹ 50,000 ಬಹುಮಾನ ನೀಡಲಾಗುವುದು’ ಎಂದು ಪತ್ನಿಯ ಸ್ಟೇಟಸ್ ನಲ್ಲಿ ಬರೆಯಲಾಗಿದೆ ಎಂದು ದಾಖಲಾದ ದೂರಿನಲ್ಲಿ ಪತಿ ಉಲ್ಲೇಖಿಸಿದ್ದಾರೆ. ನೆರೆಯ ಮನೆಯಲ್ಲಿ ವಾಸಿಸುವ ಬಾಡಿಗೆದಾರನೊಂದಿಗೆ ತನ್ನ ಹೆಂಡತಿ ಅಕ್ರಮ ಸಂಬಂಧವನ್ನು ಹೊಂದಿದ್ದಾಳೆ ಎಂದು ಪತಿ ಆರೋಪಿಸಿದ್ದು, ಆಕೆಯ ಪ್ರಿಯಕರ ಕೂಡ ದೂರವಾಣಿ ಕರೆ ಮೂಲಕ ನನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296