ಕೊರಟಗೆರೆ: ಗ್ರಾಮ ಪಂಚಾಯತಿಯ ಲೆಕ್ಕಾಚಾರಗಳಲ್ಲಿ ಪತ್ನಿಯ ಬದಲಿಗೆ ಪತಿಯ ರಾಯಭಾರ. ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಪತ್ನಿ ಆಯ್ಕೆಯಾಗಿದ್ದರೆ ಆಡಳಿತ ಮಾಡುವುದು ಮಾತ್ರ ಪತಿದೇವ ಅಂತೆ… ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಅಕ್ಕಿರಾಂಪುರ ಗ್ರಾಮ ಪಂಚಾಯಿತಿಯಲ್ಲಿ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ.
ಗ್ರಾಮ ಪಂಚಾಯತಿ ಕರ ವಸೂಲಿಗರ ಕೂಡ ಅಧ್ಯಕ್ಷರ ಸಂಬಂಧಿ ಮಾಡುತ್ತಿದ್ದಾರೆ, ಕಂದಾಯ ವಸೂಲಿ ಹಣದಲ್ಲಿ ದುರ್ಬಳಕೆ. ಮಾಡಲಾಗುತ್ತಿದೆ. ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ಹಾಗೂ ಕಂಪ್ಯೂಟರ್ ಆಪರೇಟರ್ ಅಮಾನತು ಗೊಳಿಸಿದರು ಸಹ ಸಂಬಳ ನೀಡುತ್ತಿದ್ದಾರೆ. 2021 ರಿಂದ 2024ರ ವರೆಗೆ ವಸೂಲಿ ಮಾಡಿದ ಹಣ ಬ್ಯಾಂಕಿಗೆ ಹೋಗುತ್ತಿಲ್ಲ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ.
ಸಾರ್ವಜನಿಕರಿಂದ ಕರ ವಸೂಲಿ ಮಾಡಿದ ಹಣವನ್ನ ನೇರವಾಗಿ ಬ್ಯಾಂಕಿಗೆ ಕಟ್ಟದೆ ಮನ ಬಂದಂತೆ ಬಳಕೆ ಮಾಡಲಾಗಿದೆ. ಇದೀಗ ಲೆಕ್ಕ ಕೇಳಿದರೆ, ಲೆಕ್ಕದ ಪುಸ್ತಕ ಇಲ್ಲಾ ಎಂದು ಪಿ ಡಿ ಓ ರವಿಕುಮಾರ್ ಹೇಳುತ್ತಿದ್ದಾರಂತೆ, ಅಧ್ಯಕ್ಷರು ಹಾಗೂ ಪಿಡಿಒ ಬಳಿ ಗ್ರಾಮ ಪಂಚಾಯಿತಿಯ ಖರ್ಚಿನ ಲೆಕ್ಕವನ್ನು ಸದಸ್ಯರು ಕೇಳಿದ ವೇಳೆ ಎರಡು ವರ್ಷದ ಲೆಕ್ಕ ಮಂಗಮಾಯವಾಗಿರೋದು ತಿಳಿದು ಬಂದಿದೆ.
ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಕರ್ತವ್ಯ ಹಾಗೂ ಹಣಕಾಸಿನ ವಿಚಾರದಲ್ಲಿ ಲೋಪವೆಸಗಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಲೆಕ್ಕ ಕೇಳಿದ್ರೆ, ಎರಡು ವರ್ಷದ ಬಿಲ್ಲುಗಳ ಪುಸ್ತಕವೇ ಕಳೆದು ಹೋಗಿದೆ ಎಂದು ಉಡಾಫೆ ಉತ್ತರ ಹೇಳುತ್ತಾರೆ ಎಂದು ಸದಸ್ಯರು ಆರೋಪಿಸಿದ್ದಾರೆ.
ಈ ಬಗ್ಗೆ ತುಮಕೂರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಸದಸ್ಯರು ಪತ್ರ ಬರೆದು ಮಾಹಿತಿ ನೀಡಿದ್ದಾರೆ. ಆದರೆ ಇದರಿಂದ ಏನೂ ಪ್ರಯೋಜನವಾಗಿಲ್ಲ ಎಂದು ಸದಸ್ಯರು ಬೇಸರ ವ್ಯಕ್ತಪಡಿಸಿದ್ದಾರೆ.
ಆದ್ದರಿಂದ ದಯಮಾಡಿ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮವನ್ನು ತೆಗೆದುಕೊಂಡು ಗ್ರಾಮ ಪಂಚಾಯಿತಿ ಸದಸ್ಯರಿಗೆ ಸಾರ್ವಜನಿಕರ ಕೆಲಸಗಳನ್ನು ಮಾಡಲು ಅನುವು ಮಾಡಿಕೊಡಬೇಕು ಎಂದು ಕೇಳಿಕೊಳ್ಳುತ್ತೇವೆ ಎಂದು ಸದಸ್ಯರು ಬೇಸರ ವ್ಯಕ್ತಪಡಿಸಿದರು.
ವರದಿ : ಮಂಜುಸ್ವಾಮಿ ಎಂ.ಎನ್. ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA