ಕಿರುತೆರೆಯ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10 ಶುರುವಾಗಲು ಕೌಂಟ್ ಡೌನ್ ಶುರುವಾಗುತ್ತಿದ್ದಂತಯೇ, ಯಾರೆಲ್ಲಾ ಬಿಗ್ ಬಾಸ್ ಸೀಸನ್ 10 ಗೆ ಎಂಟ್ರಿ ಕೊಡುತ್ತಾರೆ ಎಂದು ಒಂದಿಷ್ಟು ಹೆಸರುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಅದರಲ್ಲಿ ಅದ್ವಿತಿ ಶೆಟ್ಟಿ ಗೆ ಕೂಡ ಆಫರ್ ಸಿಕ್ಕಿದೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ನಟಿ ಅದ್ವಿತಿ ಶೆಟ್ಟಿ ಯವರು, “ಬಿಗ್ ಬಾಸ್ ಮನೆಗೆ ಬರಲು ಆಫರ್ ಸಿಕ್ಕಿದ್ದು ನಿಜ. ಆದರೆ ನಾನು ಶೋನಲ್ಲಿ ಭಾಗಿಯಾಗ್ತಿಲ್ಲ. ಇತ್ತೀಚಿಗೆ ನನ್ನ ತಂದೆ ಅಗಲಿದರು. ಆ ನೋವಿನಿಂದ ಹೊರಬರಲು ಮಾನಸಿಕವಾಗಿ ಸಮಯಬೇಕಿದೆ. ಈ ನಡುವೆ ಫಿಟ್ ನೆಸ್ ಕಡೆ ಕೂಡ ನಾನು ಗಮನ ನೀಡಿಲ್ಲ. ಬಿಗ್ ಬಾಸ್ ಶೋ ಬಗ್ಗೆ ಗೌರವಿದೆ. ಆ ಗೌರವಕ್ಕಾದರೂ ಸರಿಯಾದ ಪೂರ್ವ ತಯಾರಿ ಮಾಡಬೇಕು” ಎಂದು ನಟಿ ಸ್ವತಃ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಾನಸಿಕವಾಗಿ ಮತ್ತು ಫಿಟ್ ನೆಸ್ ನಿಂದಾಗಿ ತಯಾರಾಗದ ಕಾರಣ ಬಿಗ್ ಬಾಸ್‌ಗೆ ಹೋಗಲು ತಯಾರಿಲ್ಲ. ತಯಾರಿ ಇಲ್ಲದೇ ಹೋಗಬಾರದು. ಬಿಗ್ ಬಾಸ್ ಗೆ ನಾನು ಹೋಗುತ್ತೀನಿ ಎನ್ನುವ ಸುಳ್ಳು ಸುದ್ದಿ ಹರಿದಾಡುತ್ತಿದೆ ಎಂದು ತಿಳಿಸಿದ್ದಾರೆ. ಅವರು ನಟಿಸಿರುವ ಚಿತ್ರ ‘ಧೀರ ಸಾಮ್ರಾಟ್’, ‘ಶುಗರ್ ಫ್ಯಾಕ್ಟರಿ’ ರಿಲೀಸ್ ಗೆ ರೆಡಿಯಾಗಿರುವ ಕಾರಣ ಚಿತ್ರತಂಡದ ಜೊತೆ ಸೇರಿ ಪ್ರಚಾರದ ಕಡೆ ಗಮನ ಹರಿಸಬೇಕಿದೆ ಎಂದು ಅದ್ವಿತಿ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.


