ತಿರುವನಂತಪುರಂ: ಕೇರಳ ಸಿಎಂ ವಿಜಯನ್ ಅವರು ಪ್ರಯಾಣಿಸುತ್ತಿದ್ದ ವಾಹನ ಸೇರಿದಂತೆ ಬೆಂಗಾವಲು ವಾಹನಗಳು ಸರಣಿ ಅಪಘಾತ ಸಂಭವಿಸಿದ ಘಟನೆ ಸೋಮವಾರ ಸಂಜೆ ನಡೆದಿದೆ.
ಕೊಟ್ಟಾಯಂಗೆ ಭೇಟಿ ನೀಡಿ ರಾಜ್ಯ ರಾಜಧಾನಿಗೆ ವಾಪಸ್ಸಾಗುವ ವೇಳೆ ತಿರುವನಂತಪುರಂ ಬಳಿ ಮಹಿಳೆಯೊಬ್ಬರು ದ್ವಿಚಕ್ರ ವಾಹನದಲ್ಲಿ ಏಕಾಏಕಿ ಅಡ್ಡ ಬಂದಿದ್ದಾರೆ. ಈ ವೇಳೆ ಬೆಂಗಾವಲು ಪಡೆ ವಾಹನ ಬ್ರೇಕ್ ಹಾಕಿದ್ದು, ಈ ವೇಳೆ ಹಿಂದೆ ಇದ್ದ ಇತರ ಬೆಂಗಾವಲು ಪಡೆಗಳ ವಾಹನಗಳು ಒಂದರ ಹಿಂದೆ ಒಂದು ಪರಸ್ಪರ ಡಿಕ್ಕಿ ಹೊಡೆದಿದೆ.
ಘಟನೆಯ ಬಳಿಕ ಬೇರೆ ವಾಹನದಲ್ಲಿ ಕೇರಳ ಸಿಎಂ ವಿಜಯನ್ ಅವರನ್ನು ಕಳುಹಿಸಲಾಗಿದೆ. ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q