ಶನಿವಾರ ಹಮಾಸ್ ಉಗ್ರರು ಇಸ್ರೇಲ್ ಮೇಲೆ ದಾಳಿ ನಡೆಸಿರುವುದು ಗೊತ್ತೇ ಇದೆ. ಇಸ್ರೇಲ್ ನಲ್ಲಿ ಇವರು ನಡೆಸಿದ ದೌರ್ಜನ್ಯಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಹಮಾಸ್ ಭಯೋತ್ಪಾದಕರು ಗಾಜಾ ಬಳಿಯ ಕಿಬ್ಬತ್ ಗೆ ನುಗ್ಗಿ 100 ಜನರನ್ನು ಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಇಬ್ಬರು ಮಹಿಳೆಯರು ಜೀವ ಭಯದಿಂದ ಕಾರಿನ ಹಿಂದೆ ಅಡಗಿಕೊಂಡಿದ್ದು, ಅವರನ್ನು ಭಯೋತ್ಪಾದಕರು ನಿರ್ದಯವಾಗಿ ಗುಂಡಿಕ್ಕಿ ಕೊಂದಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.


