ಬೆಂಗಳೂರು: ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ನಾರಿಯರು ಸೀರೆಯುಟ್ಟು ರಸ್ತೆಗಿಳಿದ ದೃಶ್ಯ ಕಂಡು ಬಂತು.ಮಾತ್ರವಲ್ಲ ಬರೋಬ್ಬರಿ ಎರಡು ಕಿಮೀ ರನ್ನಿಂಗ್ ನ್ನು ಮಾಡಿದ್ದು ವಿಶೇಷವಾಗಿತ್ತು.
ಆರೋಗ್ಯದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಸಾವಿರಾರು ನಾರಿಯರು ರಸ್ತೆಗಿಳಿದರು. ರಸ್ತೆಯುದ್ದಕ್ಕೂ ‘ನಾರಿ ಶಕ್ತಿ ಮಹಾಶಕ್ತಿ’ ಎಂದು ಘೋಷಣೆ ಕೂಗುತ್ತಲೇ ರನ್ನಿಂಗ್ ಮಾಡಿದ ಮಹಿಳೆಯರು, ನಗರದ ವೆಗಾ ಸಿಟಿ ಮಾಲ್‌ನಿಂದ ಸುಮಾರು ಎರಡು ಕಿಮೀವರೆಗೆ ಹೋಗಿ ಪುನಃ ವೆಗಾ ಸಿಟಿ ಮಾಲ್‌ಗೆ ತಲುಪಿದ್ದಾರೆ. ಬಣ್ಣ ಬಣ್ಣದ ಸೀರೆಯುಟ್ಟು ಕಪ್ಪು ಕನ್ನಡಕ ಧರಿಸಿ ನಾರಿಯರು ಸಕತ್ ಸ್ಟೆಪ್ ಹಾಕಿದ್ರು. ಪತ್ನಿಯರ ಡ್ಯಾನ್ಸ್ ಕಂಡು ಪತಿಯರು ಕೂಡ ಸಖತ್ ಎಂಜಾಯ್ ಮಾಡಿದರು.
ನಾರಿಯರನ್ನ ನೋಡುವುದಕ್ಕೆಂದೇ ರಸ್ತೆಯುದ್ಧಕ್ಕೂ ಪುರುಷರು ನಿಂತಿರುವುದು ಕಂಡುಬಂತು. ಸಾಗರ್ ಆಸ್ಪತ್ರೆಯಿಂದ ಆಯೋಜನೆ ಮಾಡಲಾಗಿದ್ದ ಕಾರ್ಯಕ್ರಮ ಕೊನೆಗೂ ಯಶಸ್ವಿಯಾಗಿ ಮೂಡಿ ಬಂತು. ಈ ಕಾರ್ಯಕ್ರಮದಲ್ಲಿ 18ನೇ ವಯಸ್ಸಿನಿಂದ 80ರ ಇಳಿವಯಸ್ಸಿನ ಮಹಿಳೆಯರು ಕೂಡ ಉತ್ಸಾಹದಿಂದ ಭಾಗಿಯಾಗಿದ್ದು ವಿಶೇಷ. ಹೆಂಡತಿಯರು ಓಡುವುದು ನೋಡಲು ಗಂಡಂದಿರು ಪಂಚೆಯುಟ್ಟು ಹಿಂದೆಯೇ ಬಂದಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


