ಬೆಂಗಳೂರು: ಜಿನ ಭಜನೆ ಇದೊಂದು ಪುರಾತನವಾದ ಸಂಸ್ಕೃತಿಯಾಗಿದ್ದು, ಈ ಪರಂಪರೆಯನ್ನು ಉಳಿಸಿ ,ಬೆಳೆಸಿ, ಮುಂದಿನ ಪೀಳಿಗೆಗೆ ಕೊಂಡಯುವ ಕೆಲಸವಾಗಿದೆ ಎಂದು ಭಾರತೀಯ ಜೈನ ಮಿಲನ್ ರಾಷ್ಟ್ರೀಯ ಮಹಿಳಾ ಘಟಕದ ಉಪಾಧ್ಯಕ್ಷರು ಹಾಗೂ ಬೆಂಗಳೂರು ತ್ಯಾಗಿ ಸೇವಾ ಸಮಿತಿ ಅಧ್ಯಕ್ಷರಾದ ಅನಿತಾ ಸುರೇಂದ್ರ ಕುಮಾರ್ ತಿಳಿಸಿದರು.
ಅವರಿಂದು ಭಾರತೀಯ ಜೈನ್ ಮಿಲನ ವಲಯ–೮ ರ ಜಿನ ಭಜನಾ ಸೀಸನ್–8 ರ ಫೈನಲ್ ಅಂಗವಾಗಿ ನೃತ್ಯ ಪ್ರದರ್ಶನ ದೊಂದಿಗೆ ಮೆರವಣಿಗೆಗೆ ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಡುತ್ತಾ, ಜಿನ ಭಜನೆ ಇದೊಂದು ಪುರಾತನವಾದ ಪರಂಪರೆ ಇದು ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿದೆ, ಇದು ಎಲ್ಲರ ಆಶೀರ್ವಾದದಿಂದ ಸ್ಪರ್ಧೆಯ ಸಂಸ್ಕೃತಿ ,ಸಂಸ್ಕಾರಗಳನ್ನು ಉಳಿಸಲು ಸಾಧ್ಯವಾಗಿದೆ ಇದಕ್ಕೆ ದಿಲೀಪ್ ಸುರಾನರವರ ಸೇವೆ ಹಾಗೂ ಕರ್ನಾಟಕ ಜೈನ ಅಸೋಸಿಯೇಷನ್ ಸಹಕಾರ ಸ್ಮರಿಸಿದರು.
ಜಿನ ಭಜನೆ ವರ್ಷದಿಂದ ವರ್ಷಕ್ಕೆ ಸುಧಾರಣೆ ಕಾಣುತ್ತಿದೆ , ಅನುತೀರ್ಣರಾದವರನ್ನ ಪ್ರೋತ್ಸಾಹಿಸ ಲಾಗುತ್ತಿದೆ, ಸ್ವಯಂ ಭೂ ಸ್ತೋತ್ರ, 24 ತೀರ್ಥಂಕರರ ಸ್ತೋತ್ರ ದೇವರಿಗೆ ಅರ್ಪಿತವಾಗುತ್ತಿದೆ ಎಂದರು.
ಈ ಹಿಂದೆ ಸ್ಪರ್ಧೆಗೆ ಬಂದವರು ತೀರ್ಪುಗಾರರಾಗಿರುವುದು ಸಂತಸದ ವಿಷಯ. ಸ್ವಯಂ ಭೂಸ್ತೋತ್ರ ಆಚರಣೆಗೆ ತರುವ ಪ್ರಯತ್ನ ಯಶಸ್ವಿಯಾಗಿ ಮುನ್ನಡೆದಿದೆ. ನಮ್ಮ ಸಂಸ್ಕೃತಿಯಲ್ಲಿ ಸಂಗೀತಕ್ಕೆ ಮಹತ್ವದ ಸ್ಥಾನವಿದೆ ಎಂದರು. ಸಂಗೀತದಿಂದ ಸಂಸ್ಕೃತಿ ಪ್ರಚಲಿತವಾಗಲಿದೆ. ಮಕ್ಕಳು ಮೊಬೈಲ್ ಬಿಟ್ಟು ಜಿನ ಸಂಸ್ಕೃತಿಗೆ ಬರುತ್ತಿರುವುದು ಸಂತಸದ ವಿಷಯ, ಇದು ಪರಂಪರೆ ಉಳಿಸುವ ಕೆಲಸವಾಗಿದೆ ಎಂದರು.
ಈ ಹಿಂದೆ ಜಿನಭಜನೆಗೆ ಮಹತ್ವ ವಿತ್ತು, ಕಾಲ ನಂತರದಲ್ಲಿ ಅನ್ಯ ಸಂಸ್ಕೃತಿಯ ದಾಳಿಯಿಂದ ನಶಿಸಿದ್ದು, ಈಗ ಜಿನಭಜನ ಸಂಸ್ಕೃತಿ ಮರುಕಳಿಸಿದೆ , ಇದು ದೇಶದಲ್ಲಿನ ಕೆಟ್ಟ ಕೊಬ್ಬಿನ ಅಂಶ ತೊಡೆದು ಉತ್ತಮ ಆರೋಗ್ಯ, ಮಾನಸಿಕ ಅಂಶ ರೂಪಿಸಲಿದೆ ಎಂದ ಅವರು ,ಈ ಬಗ್ಗೆ ಸಂಶೋಧನೆಗಳು ಉತ್ತಮ ಫಲಿತಾಂಶ ನೀಡುವೆ ಎಂದರು .
ಇದೇ ಸಂದರ್ಭದಲ್ಲಿ ಉಜಿರೆಯ ಸೋನಿವರ್ಮ ಕಲಾ ವೈಭವ ತಂಡದ ಸದಸ್ಯರುಗಳನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಕಾರ್ಯಧ್ಯಕ್ಷರಾದ ಧರ್ಮಸ್ಥಳ ಸುರೇಂದ್ರ ಕುಮಾರ್, ಶ್ರದ್ಧಾ ಅಮಿತ್, ಕಾಲ ವೈಭವ ತಂಡದ ಸೋನಿವರ್ಮ, ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಕಾರ್ಯಧ್ಯಕ್ಷರಾಧಾ ಧರ್ಮಸ್ಥಳ ಸುರೇಂದ್ರ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು .
ಈ ಸಂದರ್ಭದಲ್ಲಿ ಕಲಾ ವೈಭವ ತಂಡದ ಸೋನಿ ವರ್ಮ, ಶ್ರದ್ಧಾ ಅಮಿತ್, ವಿಲಾಸ್ ಪಾಸಣ್ಣನವರ್, ಶೀಲಾ ಅನಂತರಾಜು , ಹುಬ್ಬಳ್ಳಿ ಜೈನ ಮಹಿಳಾ ಸಮಾಜದ ತ್ರಿಶಾಲ ಮಾಲಗುತ್ತಿ,ಭಾರತೀಯ ಜೈನ್ ಮಿಲನ್ ವಲಯ ಎಂಟರ ಸುದರ್ಶನ್ ಜೈನ್, ಸೋಮಶೇಖರ ಶೆಟ್ಟಿ ,ಸುಭಾಷ್ ಚಂದ್ರ ಜೈನ್ ,ಜೀವoದರ್ ಕುಮಾರ್ , ಶ್ಯಾಮಲಾ ಧರಣಿಂದ್ರಿಯ್ಯಾ, ಪ್ರಶಾಂತ್ ಉಪಾಧ್ಯಾಯ, ಅಶೋಕ್ ಬಾಳೆಕಾಯಿ, ಸುಮತಿ ಕುಮಾರ್ ಎಚ್ .ಪಿ.,ಭರತ್ ರಾಜ್ ಹಜಾರೆ, ಯಶೋಧರ ಹೆಗಡೆ ,ಪೂರ್ಣಿಮಾ ಅಶೋಕ್ ಕುಮಾರ್, ಮಹಾವೀರ್ ಶಹಪುರ, ಸಿ.ಎಸ್ .ನಾಗರಾಜ್ , ಚಂದ್ರಪ್ರಕಾಶ್, ಕೆ ಯುವರಾಜ್ ಬಂಡಾರಿ, ಡಾ. ಭರತೇಶ್ ಜಗ ಶೆಟ್ಟಿ ,ಎಂ ರತ್ನ ರಾಜು , ಬೆಂಗಳೂರು ಜೈನ ಅಸೋಸಿಯೇಷನ ನ ನಿರ್ದೇಶಕರು ಗಳಾದ. ಎಂ.ಎಂ .ಜಿನೇಂದ್ರ, ಮಾಳ ಹರ್ಷೇಂದ್ರ ಕುಮಾರ್, ಮಂಚಿನಹಳ್ಳಿ ರಾಜೇಶ್, ಡಾ.ನೀರಜಾ ನಾಗೇಂದ್ರ ಕುಮಾರ್ ,ಕರ್ನಾಟಕ ಜೈನ ಅಸೋಸಿಯೇಷನ್ ಹಲವಾರು ನಿರ್ದೇಶಕರುಗಳು, ಜೈನ ಸಮಾಜದ ಮುಖಂಡರುಗಳು ,ವಿವಿಧ ಜಿಲ್ಲಾ ಅಧ್ಯಕ್ಷರುಗಳು, ಉಪಾಧ್ಯಕ್ಷರುಗಳು, ಪದಾಧಿಕಾರಿಗಳು ,ವಿವಿಧ ಮಹಿಳಾ ಸಂಘಟನೆಗಳು ಮುಖ್ಯಸ್ಥರುಗಳು, ಪದಾಧಿಕಾರಿಗಳು ಸೇರಿದಂತೆ ಶ್ರಾವಕ- ಶ್ರಾವಕಿಯರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಸ್ವಯಂ ಭೂ ಸ್ತೋತ್ರ ಪಠಣ ಮಾಡಲಾಯಿತು. ಟಿ.ವಿ .ನಿರೂಪಕಿ ನಮಿತಾ ಜೈನ್ ಕಾರ್ಯಕ್ರಮ ನಿರೂಪಿಸಿದರು. ಸೋನಿ ವರ್ಮ ತಂಡದಿಂದ ನೃತ್ಯ ರೂಪಕ ಪ್ರದರ್ಶಿಸಲಾಯಿತು.
ವರದಿ: ಜೆ.ರಂಗನಾಥ ತುಮಕೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx