ತಿಪಟೂರು: ಕಿಬನಹಳ್ಳಿ ಹೋಬಳಿಯ ಯಗಚಿ ಗಟ್ಟಿ ಗ್ರಾಮದಲ್ಲಿ ಭಾರತದ ದೇಶದ ಪ್ರಥಮ ಮಹಿಳಾ ಶಿಕ್ಷಕಿ ಅಕ್ಷರ ಮಾತೆ ಸಾವಿತ್ರಿ ಬಾಫುಲೆ ಅವರ ಜಯಂತಿಯನ್ನು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಸಿಹಿ ಹಂಚುವ ಮೂಲಕ ಆಚರಣೆ ಮಾಡಲಾಯಿತು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ದಲಿತ ಯುವ ಮುಖಂಡ ಹರೀಶ್, ಭಾರತ ದೇಶದಲ್ಲಿ ಶೂದ್ರರಿಗೆ ಮತ್ತು ತಳಸಮುದಾಯದವರಿಗೆ ವಿದ್ಯೆಯನ್ನು ಕಲಿಸುವುದಕ್ಕೆ ಯಾವ ಗುರುಕುಲಗಳು ಮುಂದೆ ಬರದ ದಿನಗಳಲ್ಲಿ ಆ ದಿನದ ಕಾಲಘಟ್ಟದಲ್ಲಿ ಸಾವಿತ್ರಿ ಬಾಪುಲೆ ಹಾಗೂ ಜ್ಯೋತಿಬಾಪುಲೆಯವರ ಕೊಡುಗೆ ದೇಶದ ಜನತೆಗೆ ಅಪಾರವಾಗಿದೆ ತಳ ಸಮುದಾಯಗಳ ಮೇಲೆ ಅನೇಕ ಕಟ್ಟುಪಾಡುಗಳನ್ನು ಏರಿದ ಮನುವಾದಿಗಳ ಮಧ್ಯೆ ತಳಸಮುದಾಯಗಳಿಗೆ ಶಿಕ್ಷಣ ನೀಡುವಲ್ಲಿ ಅವರು ಮಾಡಿರುವ ಹೋರಾಟಗಳು ಕಾರ್ಯಗಳು ತುಂಬಾ ಕೊಡುಗೆ ಇದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ನರಸಿಂಹಯ್ಯ ಶಾಲಾ ಶಿಕ್ಷಕಿ ಉಮಾ ಶಿಕ್ಷಕಿ ಶೈಲಜಾ ಅವರು ವಿದ್ಯಾರ್ಥಿಗಳು ಸೇರಿದಂತೆ ಪ್ರಮುಖ ಮುಖಂಡರುಗಳು ಹಾಜರಿದ್ದರು.
ವರದಿ: ಮಂಜು ಗುರುಗದಹಳ್ಳಿ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy