ಮಧುಗಿರಿ: ಹಂಸಲೇಖ ಅವರ ಹೇಳಿಕೆ ಬೆಂಬಲಿಸಿ ‘ಜೈ ಭೀಮ್’ ಯುವಕರ ಸಂಘ ಮುದ್ದೇನೇರಳೆಕೆರೆ ವತಿಯಿಂದ ಇಲ್ಲಿನ ಅಂಬೇಡ್ಕರ್ ಭವನದಿಂದ ಅಂಬೇಡ್ಕರ್ ವೃತ್ತದವರೆಗೆ ಮೆರವಣಿಗೆ ನಡೆಸಿ ಸಾಂಕೇತಿಕ ಧರಣಿ ನಡೆಸಲಾಯಿತು.
ಇದೇ ವೇಳೆ ಮಾತನಾಡಿದ ಸಂಘಟನೆಯ ಮುಖಂಡರು, ಬಹುಸಮಾಜದ ಉಳಿವಿಗಾಗಿ ನೆಲ ಮೂಲ ಸಂಸ್ಕೃತಿ ಯ ಉಳಿವಿಗಾಗಿ ಹಾಗೂ ನಮ್ಮ ಅಸ್ಮಿತೆಗಾಗಿ ಸಮಾಜದ ನಡುವೆ ಸಂಘರ್ಷ ಅನಿವಾರ್ಯ ಎಂದರು.
ಸಮಾಜದ ಕ್ರಾಂತಿಯ ಕಿಡಿಯನ್ನು ಹತ್ತಿಕ್ಕಿ ಮೂಲೆಗುಂಪು ಮಾಡುವ ಕೆಲಸವನ್ನು ಕೆಲವು ಸಾಂಪ್ರದಾಯಿಕ ಮನುವಾದಿಗಳು ಮಾಡುತ್ತಿದ್ದಾರೆ. ಇಂತಹ ಒಳ ಸಂಚಿನ ವಿರುದ್ಧ ಜಾಗೃತಿಗೊಳ್ಳದಿದ್ದರೆ, ಇದು ನಮ್ಮ ಅವಸಾನಕ್ಕೆ ಕಾರಣವಾದೀತು ಎಂದು ಜಾಗೃತಿ ಮೂಡಿಸಲಾಯಿತು.
ಹಂಸಲೇಖ ಅವರ ಹೇಳಿಕೆಯನ್ನು ಬೆಂಬಲಿಸಿ, ಒಳಸಂಚಿನ ಕಾಣದ ಕೈಗಳ ವಿರುದ್ಧ ಹೋರಾಡಲೇ ಬೇಕಾಗಿದೆ. ನಮ್ಮ ಊರಿನಲ್ಲಿಯೂ ಕ್ರಾಂತಿಯ ಕಿಡಿ ಇದೆ ಎನ್ನುವುದನ್ನು ತೋರಿಸಬೇಕಿದೆ ಎಂದು ಮುಖಂಡರು ಅಭಿಪ್ರಾಯಪಟ್ಟರು.
ಈ ವೇಳೆ ಸಂಘದ ಮುಖಂಡರಾದ ತಿಪ್ಪೇಸ್ವಾಮಿ, ಮೋಹನ್, ರಾಜು, ಕುಪೆಂದ್ರ, ಸಿದ್ದು, ವೆಂಕಟ್, ಅಶ್ವತ್, ಪರಮಾತ್ಮ, ಮಂಜು, ಕುಮಾರ್,ಶಿವು, ದನಂಜಿ, ನಾಗೇಶ್ ಮತ್ತು ಊರಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700