ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಪ್ರಧಾನ ರಸ್ತೆಯಲ್ಲಿರುವ ಸಾರಿಗೆ ಸಂಸ್ಥೆಯ ಸಾರಿಗೆ ಬಸ್ ನಿಲ್ದಾಣದ ಆವರಣದಲ್ಲಿರುವ ಶೌಚಾಲಯವು ಗಬ್ಬುನಾರುತ್ತಿದ್ದ ಹಿನ್ನಲೆ ಸಾರ್ವಜನಿಕರ ದೂರಿನ ಪ್ರಕಾರ ನಮ್ಮ ತುಮಕೂರು ಮಾಧ್ಯಮವು ಸಾರಿಗೆ ಬಸ್ ನಿಲ್ದಾಣದ ಅವ್ಯವಸ್ಥೆಯ ಬಗ್ಗೆ ನಮ್ಮ ತುಮಕೂರು ಮಾಧ್ಯಮ ವಿವರವಾದ ವರದಿ ಪ್ರಕಟಿಸಿತ್ತು.
ಈ ವರದಿಯನ್ನು ಗಮನಿಸಿದ ಹಿರಿಯೂರು ತಾಲ್ಲೂಕಿನ ನೂತನವಾಗಿ ಆಯ್ಕೆಗೊಂಡಿರುವ. ಶಿವರಂಜನಿ ಯಾದವ್ ಅವರು ನಗರಸಭೆ ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರಾದ ಅಶೋಕ್, ಮೀನಾಕ್ಷಿ ಹಾಗೂ ಸಂಧ್ಯಾ ಅವರೊಡನೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಸಾರಿಗೆ ಸಂಸ್ಥೆಯ ಗಣಕಿ ಸಹಾಯಕರನ್ನು ತರಾಟೆಗೆ ತೆಗೆದುಕೊಂಡರು.
ನಾನಾ ಕಡೆಗಳಿಂದ ಬಂದಂತಹ ಪ್ರಯಾಣಿಕರು ಹಿರಿಯೂರು ನಗರದ ಬಸ್ ನಿಲ್ದಾಣಕ್ಕೆ ಆಗಮಿಸಿ ತಮ್ಮ ತಮ್ಮ ಊರುಗಳಿಗೆ ತೆರಳುತ್ತಾರೆ. ಆದರೆ ಸಾರಿಗೆ ಸಂಸ್ಥೆಯ ಆವರಣದಲ್ಲಿರುವ ಶೌಚಾಲಯವು ಸಹ ತೀರ ಅವ್ಯವಸ್ಥಿತ ಗೊಂಡಿದ್ದು ಶೌಚಾಲಯವು ಸಹ ತೀರ ಹದಗೆಟ್ಟಿದೆ. ಇದರಿಂದ ನಾನಾ ಖಾಯಿಲೆಗಳಿಗೆ ಇಲ್ಲಿಗೆ ಬರುವಂತಹ ಪ್ರಯಾಣಿಕರು, ಸಾರ್ವಜನಿಕರು ತುತ್ತಾಗುತ್ತಿದ್ದಾರೆ. ಆದರಿಂದ ಈ ಕೂಡಲೇ ಈ ಶೌಚಾಲಯವನ್ನು ಹಾಗೂ ಶೌಚಾಯದ ಸುತ್ತಮುತ್ತಲೂ ಈ ಕೂಡಲೇ ಸ್ವಚ್ಚಗೊಳಿಸಿ, ಬರುವಂತಹ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕಾಗಿದೆ ಎಂದು ಸೂಚನೆ ನೀಡಿದರು.
ಇನ್ನು ಮುಂದೆ ಏನಾದರೂ ಇದೆ ರೀತಿಯಲ್ಲಿ ಮುಂದುವರೆದರೆ, ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳ ಮೇಲೆ ಕಾನೂನತ್ಮಕವಾಗಿ ಸೂಕ್ತ ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಾರಿಗೆ ಸಂಸ್ಥೆ ಇಲಾಖೆಯ ಗಣಕಿ ಸಹಾಯಕಿ ನಿರ್ದೇಶಕಿಯಾದ ನೇತ್ರಾವತಿ ಜೆ.ಸಿ. ಸೇರಿದಂತೆ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದ ಅವರು ತಕ್ಷಣವೇ ಸಮಸ್ಯೆ ಬಗೆ ಹರಿಸಿ, ಸಾರ್ವಜನಿಕರಿಗೆ ಅನುಕೂಲ ಮಾಡುವಂತೆ ಹೇಳಿದ್ದಾರೆ.
ಹಿರಿಯೂರಿನಲ್ಲಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ

ಹಿರಿಯೂರು ತಾಲ್ಲೂಕಿನ ವಾರ್ಡ್ ನಂ 24ರಲ್ಲಿನ ಪುಷ್ಪಾಂಜಲಿ ಟಾಕೀಸ್ ನ ಹಿಂಭಾಗ ಕಸಗಳ ವಿಲೆವಾರಿಯಾಗಿದ್ದ ಸ್ಥಳವನ್ನು ಸ್ವಚ್ಛಗೊಳಿಸುವ ಮೂಲಕ ನಗರಗಳ ಸ್ವಚ್ಚತಾ ಅಭಿಯಾನಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಹಿರಿಯೂರು ನಗರಸಭೆ ಪೌರಾಯುಕ್ತರಾದ ಡಿ.ಉಮೇಶ್ ಹಾಗೂ ಆರೋಗ್ಯ ಸಿಬ್ಬಂದಿ ವರ್ಗದವರು ಜೊತೆಗಿದ್ದರು. ಸಿಬ್ಬಂದಿ ಸಂಧ್ಯಾ ಅವರು ನಮ್ಮ ತುಮಕೂರು ಜೊತೆಗೆ ಮಾತನಾಡಿ, ಆರೋಗ್ಯ ರಕ್ಷಣೆಗೆ , ಸ್ವಚ್ಚತೆಗೆ ಇಲಾಖೆಯ ಅಧಿಕಾರಿಗಳೊಂದಿಗೆ ಸ್ಥಳೀಯರು, ಸಾರ್ವಜನಿಕರು ಕೈ ಜೋಡಿಸಬೇಕು ಹಾಗೂ ಹೆಚ್ಚಿನ ಮಹತ್ವ ನೀಡಿ ನಗರಸಭೆಯವರ ಸ್ವಚ್ಚತಾ ಕಾರ್ಯಕ್ರಮಕ್ಕೆ ಸಹಕಾರ ನೀಡುವಂತೆ ಕೈ ಜೋಡಿಸಬೇಕಾಗಿದೆ ಎಂದರು.

ಅನಾವಶ್ಯಕವಾಗಿ ರಸ್ತೆ ಮಧ್ಯದಲ್ಲೆ ಕಸ ಹಾಕುತ್ತಿರುವವರಿಗೆ ನಗರಸಭೆ ಪೌರಾಯುಕ್ತರಾದ ಡಿ.ಉಮೇಶ್ ಅವರು ಕಾನೂನು ಕ್ರಮ ಕೈಗೊಳ್ಳುವುದಾಗಿ ಇದೇ ವೇಳೆ ಎಚ್ಚರಿಕೆ ನೀಡಿದರು.
ಇದೀಗ ಪುಷ್ಪಾಂಜಲಿ ಟಾಕೀಸ್ ನ ಹಿಂಭಾಗದ ರಸ್ತೆಯನ್ನು ಸ್ವಚ್ಚಗೊಳಿಸಿ ಗಿಡ ನೆಟ್ಟು ನೀರು ಹಾಕುವುದರ ಮೂಲಕ ಸ್ವಚ್ಚತೆ ಕಾಪಾಡಿ ಎಂಬ ಸಂದೇಶ ನೀಡಿದರು.
ಇದೇ ಸಂದರ್ಭದಲ್ಲಿ ಸ್ಥಳೀಯರು ಸಹ ಇಂದಿನ ಪೌರಾಯುಕ್ತರಾದ ಡಿ.ಉಮೇಶ್ ಹಾಗೂ ಆರೋಗ್ಯ ಸಿಬ್ಬಂದಿ ವರ್ಗದವರ ಕಾರ್ಯವನ್ನು ಮೆಚ್ಚಿ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು.
ವರದಿ: ಮುರುಳಿಧರನ್ ಆರ್. ಚಿತ್ರದುರ್ಗ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


