ಬೆಂಗಳೂರು: ಪ್ರೇಮಿಗಳಿಗೆ ಆರಾಮದಾಯಕ ಪ್ರಯಾಣಕ್ಕಾಗಿ ಸ್ಮೂಚ್ ಕ್ಯಾಬ್ ಆರಂಭಗೊಳ್ಳಲಿದೆ ಎನ್ನುವ ಸುದ್ದಿ ಇದೀಗ ವ್ಯಾಪಕವಾಗಿ ಹರಿದಾಡುತ್ತಿದೆ. ಕ್ಯಾಬ್ ನಲ್ಲಿ ಪ್ರಯಾಣ ಮಾಡುವ ಜೋಡಿಗಳು ಯಾವುದೇ ಅಡೆತಡೆಗಳಿಲ್ಲದೇ ಆರಾಮದಾಯಕವಾಗಿ ಖಾಸಗಿ ಕ್ಷಣಗಳನ್ನು ಕಳೆಯುತ್ತಾ ಈ ಕ್ಯಾಬ್ ನಲ್ಲಿ ಪ್ರಯಾಣಿಸಬಹುದಂತೆ.
ಪ್ರಯಾಣ ಸಮಯದಲ್ಲಿ ತಮ್ಮ ಖಾಸಗಿ ಸಮಯ ಕಳೆಯಲು, ಯಾರ ಕಿರಿಕಿರಿ ಇಲ್ಲದೆ ತಬ್ಬಿಕೊಂಡು ಪ್ರಯಾಣ ಆಸ್ವಾದಿಸಲು ಬೆಂಗಳೂರಿನ ಸ್ಟಾರ್ಟ್ ಅಪ್ ಕಂಪನಿ ಹೊಸ ಸ್ಮೂಚ್ ಕ್ಯಾಬ್ ವ್ಯವಸ್ಥೆ ಆರಂಭಿಸಿದೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ.
ಈ ಕ್ಯಾಬ್ ನ ವಿಶೇಷತೆಗಳಂದ್ರೆ, ಜೋಡಿಗಳ ಅವಶ್ಯಕತೆ, ಅಗತ್ಯಕ್ಕೆ ಅನುಗುಣವಾಗಿ ಕ್ಯಾಬ್ ವೇಗ ಹೆಚ್ಚು ಕಡಿಮೆ ಮಾಡಲಿದೆ, ಡು ನಾಟ್ ಡಿಸ್ಟರ್ಬ್ ಪಾಲಿಸಿ ಅಳವಡಿಸಲಾಗುತ್ತದೆ. ಕಾರಿನ ವಿಂಡೋ ಒಳಗೆ ಕರ್ಟನ್ ಬಳಸಲಾಗುತ್ತದೆ, ಶಬ್ದಗಳು ಉಂಟಾಗದಂತೆ ನಾಯ್ಸ್ ಕ್ಲೀಯರೆನ್ಸ್ ಕೂಡ ಅಳವಡಿಸಲಾಗುತ್ತದೆಯಂತೆ.
ಅಂದ ಹಾಗೆ ಈ ಸುದ್ದಿ ಎಷ್ಟು ಸತ್ಯವೋ ಸುಳ್ಳೋ ತಿಳಿದಿಲ್ಲ, ಏಪ್ರಿಲ್ ನಲ್ಲಿ ಇಂತಹದ್ದೊಂದು ಸುದ್ದಿ ಬಂದರೋದ್ರಿಂದ ಇದು ಏಪ್ರಿಲ್ ಫೂಲ್ ಅಂತಲೂ ಕೆಲವರು ಹೇಳುತ್ತಿದ್ದಾರೆ. ಆದ್ರೆ, ಕಂಪೆನಿಗಳು ತಮ್ಮ ಬ್ಯುಸಿನೆಸ್ ಬೆಳವಣಿಗೆಗೆ ಯಾವ ಮಟ್ಟಕ್ಕಾದ್ರೂ ಇಳಿಯಬಹುದೇ ಎನ್ನುವ ಮಾತುಗಳೂ ಕೇಳಿ ಬಂದಿವೆ. ಒಟ್ಟಿನಲ್ಲಿ ಈ ಸುದ್ದಿ ಎಷ್ಟರ ಮಟ್ಟಿಗೆ ಸತ್ಯ ಅನ್ನೋದನ್ನ ಕಾದು ನೀಡಬೇಕಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4