ಕಡಲೆಕಾಯಿಯಲ್ಲಿ ಪ್ರೋಟೀನ್, ಕಾರ್ಬ್ಸ್, ಫೈಬರ್ ಮತ್ತು ಕೊಬ್ಬಿನಾಮ್ಲಗಳ ಗುಣಲಕ್ಷಣಗಳಿವೆ. ಇದನ್ನು ತಿನ್ನುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ, ಆದರೆ ಕೆಲವರಿಗೆ ಇದು ಹಾನಿಕಾರಕವೂ ಹೌದು.
ಥೈರಾಯ್ಡ್: ನೀವು ಹೈಪೋಥೈರಾಯ್ಡ್ ಹೊಂದಿದ್ದರೆ ಕಡಲೆಕಾಯಿಯು ನಿಮಗೆ ಹಾನಿ ಮಾಡುತ್ತದೆ. ಕಡಲೆಕಾಯಿಯನ್ನು ತಿನ್ನುವುದರಿಂದ TSH (ಥೈರಾಯ್ಡ್-ಉತ್ತೇಜಿಸುವ ಹಾರ್ಮೋನ್) ಮಟ್ಟ ಹೆಚ್ಚಾಗುತ್ತದೆ. ಇದು ಹೈಪೋಥೈರಾಯ್ಡಿಸಮ್ ಅನ್ನು ಹೆಚ್ಚಿಸುತ್ತದೆ. ಆದರೆ ಕಡಲೆಕಾಯಿಯನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಬಹುದು.
ಯಕೃತ್ತಿನ ಸಮಸ್ಯೆ: ಯಕೃತ್ತಿನ ಸಮಸ್ಯೆ ಇದ್ದರೆ ನೀವು ಕಡಲೆಕಾಯಿಯನ್ನು ತಿನ್ನುವುದನ್ನು ತಪ್ಪಿಸಬೇಕು. ಕಡಲೆಕಾಯಿಯಲ್ಲಿರುವ ಅಂಶಗಳು ಯಕೃತ್ತಿನ ಆರೋಗ್ಯಕ್ಕೆ ಹಾನಿಕಾರಕ ಮತ್ತು ಇದನ್ನು ತಿನ್ನುವುದರಿಂದ ಯಕೃತ್ತಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಕಡಲೆಕಾಯಿಯನ್ನು ಹೆಚ್ಚು ತಿನ್ನುವುದರಿಂದ ಜೀರ್ಣಾಂಗ ವ್ಯವಸ್ಥೆಗೆ ಹಾನಿಯಾಗುತ್ತದೆ ಮತ್ತು ಅಜೀರ್ಣ ಉಂಟಾಗುತ್ತದೆ.
ಅಲರ್ಜಿ: ಕೆಲವರಿಗೆ ಕೆಲವು ಬಗೆಯ ಆಹಾರಗಳೆಂದರೆ ಅಲರ್ಜಿ. ಅನೇಕರಿಗೆ ಕಡಲೆಕಾಯಿ ತಿಂದರೆ ಅಲರ್ಜಿಯಾಗುತ್ತದೆ. ಅಂಥವರು ಅದರಿಂದ ದೂರವಿರಿ. ಅಲರ್ಜಿ ಸಮಸ್ಯೆ ಇದ್ದರೂ ಕಡಲೆಕಾಯಿ ತಿಂದರೆ ಉಸಿರಾಟದ ತೊಂದರೆ ಮತ್ತು ಚರ್ಮದ ತುರಿಕೆಗೆ ಒಳಗಾಗಬಹುದು.
ತೂಕ ಹೆಚ್ಚಳ: ಕಡಲೆಕಾಯಿಯಲ್ಲಿ ಪೋಷಕಾಂಶಗಳು ಹೇರಳವಾಗಿವೆ. ಇದನ್ನು ತಿನ್ನುವುದು ಆರೋಗ್ಯಕರ, ಆದರೆ ಇದರಲ್ಲಿರುವ ಕೊಬ್ಬು ತೂಕವನ್ನು ಹೆಚ್ಚಿಸುತ್ತದೆ. ನೀವು ತೂಕ ಇಳಿಸಿಕೊಳ್ಳುವ ಪ್ರಯತ್ನದಲ್ಲಿದ್ರೆ ಕಡಲೆಕಾಯಿ ತಿನ್ನಬೇಡಿ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296