ಹೋಳಿ ಹಬ್ಬದ ಸಂಭ್ರಮ ಎಲ್ಲ ಕಡೆ ಆಚರಣೆ ಮಾಡಲಾಗುತ್ತಿದೆ. ಹಾಗೆನೇ ಇಲ್ಲೊಂದು ಕಡೆ ಮೆಟ್ರೋದಲ್ಲಿ ಯುವತಿಯರು ಹೋಳಿ ಸಂಭ್ರಮಾಚರಣೆಯಲ್ಲಿ ಪರಸ್ಪರ ರೋಮ್ಯಾನ್ಸ್ ಮೂಲಕ ಮಾಡಿದ್ದು, ಇದರ ವೀಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಈ ವೀಡಿಯೋಗೆ ಇದೀಗ ಎಲ್ಲಾ ಕಡೆ ನೆಟ್ಟಿಗರಿಂದ ಭಾರೀ ಟೀಕೆಗಳು ವ್ಯಕ್ತವಾಗುತ್ತಿದೆ. ಕೆಲವು ನೆಟ್ಟಿಗರಂತೂ ಯುವತಿಯರ ವಿರುದ್ಧ ದೆಹಲಿ ಮೆಟ್ರೋ ರೈಲು ನಿಗಮ ಈ ಕುರಿತು ಕ್ರಮ ಕೈಗೊಳ್ಳಬೇಕೆಂದು ಆಗ್ರಹ ಮಾಡಿದ್ದಾರೆ.
ಲಹುನ್ ಮೂ ಲಗ್ ಗಯಾ ಎಂಬ ಹಾಡಿಗೆ ಯುವತಿಯರು ರೀಲ್ಸ್ ಮಾಡುತ್ತಾ ಬಣ್ಣ ಎರಚಿಕೊಳ್ಳುತ್ತಾ ರೊಮ್ಯಾನ್ಸ್ ಮಾಡುವ ದೃಶ್ಯವಿದೆ. ಇದನ್ನು ಮೆಟ್ರೋದಲ್ಲಿ ಕೆಲವು ನೋಡಿದರೂ ಗಮನ ಹರಿಸದೇ ತಮ್ಮ ಪಾಡಿಗೆ ತಾವಿದ್ದಾರೆ.
ಮೆಟ್ರೋದಲ್ಲಿ ಈ ವೀಡಿಯೋವನ್ನು ನಿಜವಾಗಿಯೂ ಚಿತ್ರೀಕರಿಸಲಾಗಿದೆಯೇ ಎಂದು ಪರಿಶೀಲನೆ ಮಾಡಲಾಗುತ್ತಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296