ಮೇ ತಿಂಗಳಲ್ಲಿ ಹಲವಾರು ರೇಷನ್ ಕಾರ್ಡ್ ಗಳನ್ನು ರದ್ದು ಮಾಡಲಾಗಿದೆ. ಯಾಕೆ ಗೊತ್ತೆ ? ಕರ್ನಾಟಕ ರಾಜ್ಯ ಸರ್ಕಾರ ಇವಾಗ ಡಿಪಿಎಲ್ ಮತ್ತು ಅಂತ್ಯೋದಯ ರೇಷನ್ ಕಾರ್ಡ್ ರದ್ದು ಮಾಡಲು ಮುಂದಾಗಿದ್ದು ಇಲ್ಲಿವರೆಗೂ ಸುಮಾರು ಮೂರು ಲಕ್ಷಕ್ಕಿಂತ ಹೆಚ್ಚು ರೇಷನ್ ಕಾರ್ಡ್ ಗಳನ್ನು ರದ್ದು ಮಾಡಲಾಗಿದೆ.
ಒಂದು ಕುಟುಂಬದಲ್ಲಿ ಒಂದು ರೇಷನ್ ಕಾರ್ಡ್ ಇದ್ದರೆ ತಿಂಗಳಿಗೆ ಏನಿಲ್ಲ ಅಂದರೂ 5000 ಪಡೆಯಬಹುದು ಹಾಗಾಗಿ ತುಂಬಾ ಜನರು ಅಕ್ರಮವಾಗಿ ರೇಷನ್ ಕಾರ್ಡ್ ಗಳನ್ನು ಮಾಡಿಸಿದ್ದು ಹಾಗೂ ಶ್ರೀಮಂತರು ಹಾಗೂ ಜಿಎಸ್ಟಿ ಕಟ್ಟುವವರು ಕೂಡ ರೇಷನ್ ಕಾರ್ಡ್ ಹೊಂದಿದ್ದಾರೆ. ಅಂತವರ ಬಿಪಿಎಲ್ ಮತ್ತು ಅಂತೋದಯ ರೇಷನ್ ಕಾರ್ಡ್ ಗಳನ್ನು ರದ್ದು ಮಾಡುವ ಪ್ರಕ್ರಿಯೆ ನಮ್ಮ ಕರ್ನಾಟಕದಲ್ಲಿ ನಡೆದಿದೆ.
ವರ್ಷಕ್ಕೆ ಮೂರು ಲಕ್ಷಕ್ಕಿಂತ ಹೆಚ್ಚು ಆದಾಯ ಹೊಂದಿದವರು ಕೂಡ ಬಿಪಿಎಲ್ ರೇಷನ್ ಕಾರ್ಡ್ ಹೊಂದಿದ್ದಾರೆ ಇದು ರೇಷನ್ ಕಾರ್ಡ್ ನಲ್ಲಿ ನಿಯಮ ಉಲ್ಲಂಘನೆ ಆಗುತ್ತದೆ ಹಾಗಾಗಿ ಅಂಥವರ ರೇಷನ್ ಕಾರ್ಡ್ ಕೂಡ ರದ್ದು ಮಾಡಲಾಗುತ್ತಿದೆ. ನಗರ ಪ್ರದೇಶದಲ್ಲಿ ಸ್ವಂತ ಪ್ಲಾಟು ಹಾಗೂ ಸ್ವಂತ ಮನೆ ಹೊಂದಿರುವಂತ ಕುಟುಂಬಗಳ ರೇಷನ್ ಕಾರ್ಡ್ ಗಳನ್ನು ಮಾಡಲಾಗುತ್ತಿದೆ.
ಸ್ವಂತ ಕಾರು ಹಾಗೂ ಐದು ಎಕರೆಗಿಂತ ಹೆಚ್ಚು ಜಮೀನು ಹೊಂದಿದ ಗ್ರಾಮೀಣ ಪ್ರದೇಶದಲ್ಲಿ ಇರುವಂತಹ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಲಾಗುತ್ತಿದೆ. ಅನೇಕ ಕಾರಣಗಳಿಂದ ಕೆಲವರ ರೇಷನ್ ಕಾರ್ಡ್ ಗಳು ರದ್ದು ಮಾಡಲಾಗುತ್ತಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q


