ಬೀದರ: ಜಿಲ್ಲಾ ಪಂಚಾಯಿತಿ ಉಪಕಾಯ೯ದಶಿ೯ ಸೂರ್ಯಕಾಂತ ಬಿರಾದಾರ ಅವರಿಗೆ ಸದ್ಯ ಕೆಲಸದಿಂದ ಅಮಾನತಿನಲ್ಲಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಪ್ರಭುದಾಸ ಜಾಧವ ಎಂಬುವರು ಚಪ್ಪಲಿಯಿಂದ ಹೊಡೆದ ಘಟನೆ ನಗರದಲ್ಲಿ ಸೋಮವಾರ ನಡೆದಿದೆ.
ಅಕ್ರಮ ಎಸಗಿ ಸರಕಾರಕ್ಕೆ ಆಥಿ೯ಕ ನಷ ಉಂಟು ಮಾಡಿದ ಆರೋಪದಡಿ ಔರಾದ ತಾಲೂಕಿನ ಸುಂದಾಳ ಗ್ರಾಮ ಪಂಚಾಯಿತಿಯಲ್ಲಿ ಪಿಡಿಒ ಆಗಿದ್ದ ಪ್ರಭುದಾಸ ಜಾಧವನನ್ನು ಜನವರಿಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆಲಸದಿಂದ ಅಮಾನತುಗೊ ಳಿಸಿದ್ದರು.
ಕೆಲಸಕ್ಕೆ ಮರು ನಿಯೋಜನೆಗೊಳಿಸುವ ವಿಷಯಕ್ಕೆ ಸಂಬಂಧಿಸಿದಂತೆ ಉಪಕಾಯ೯ದಶಿ೯ ಸೂರ್ಯಕಾಂತ ಬಿರಾದಾರ ಅವರ ಚೇಂಬರ್ ಗೆ ಹೋಗಿದ್ದಾರೆ. ಬಳಿಕ ಇಬ್ಬರು ನಡುವೆ ವಾಗ್ವಾದ ನಡೆದಿದೆ. ಪ್ರಭುದಾಸ ಜಾಧವ ಕೋಪೋದ್ರಿಕ್ತನಾಗಿ ಸೂರ್ಯಕಾಂತ ಅವರಿಗೆ ಕಪಾಳಮೋಕ್ಷ ಮಾಡಿದ್ದಾನೆ. ಆನಂತರ ಚಪ್ಪಲಿಯಿಂದ ಹೊಡೆದಿದ್ದಾರೆ ಎಂದು ಪ್ರತ್ಯಕ್ಷದಶಿ೯ಗಳು ತಿಳಿಸಿದ್ದಾರೆ.
ವರದಿ: ಅರವಿಂದ ಮಲ್ಲಿಗೆ, ಬೀದರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


