ಬೆಂಗಳೂರು: ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯು ಭಾರತದ ಆನ್‌ಲೈನ್ ಪಾವತಿ ಪೋರ್ಟಲ್‌ಗಳ ಮೇಲೆಯೂ ಕಣ್ಣು ಹಾಕಿದ್ದ. ಕ್ರಿಪ್ಟೊಕರೆನ್ಸಿ ಎಕ್ಸ್‌ಚೇಂಜ್ ಮತ್ತು ಆಹಾರ ವಿತರಣೆ ಸಂಸ್ಥೆ ‘ಜೊಮ್ಯಾಟೊ’ವನ್ನೂ ಹ್ಯಾಕ್ ಮಾಡಲು.ಶ್ರೀಕಿ ಮತ್ತು ಆತನ ಗೆಳೆಯ ರಾಬಿನ್ ಖಂಡೇಲ್ ವಾಲ್ ಯೋಜನೆ ರೂಪಿಸಿದ್ದರು ಎನ್ನಲಾಗಿದೆ.
ಇವರಿಂದ ವಶಪಡಿಸಿಕೊಳ್ಳಲಾದ ಒಂದು ಹಾರ್ಡ್‌ಡಿಸ್ಕ್‌ನಲ್ಲಿ ಇಂತಹ ಮಾಹಿತಿ ಸಿಕ್ಕಿದೆ. 16 ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡುವುದಕ್ಕೆ ಸಂಬಂಧಿಸಿದ ಮಾಹಿತಿಯು ಈ ಹಾರ್ಡ್‌ಡಿಸ್ಕ್‌ನಲ್ಲಿ ಇದೆ ಎಂಬುದು ಸೈಬರ್ ವಿಧಿವಿಜ್ಞಾನ ಸಂಸ್ಥೆಯು ನಡೆಸಿದ ವಿಶ್ಲೇಷಣೆಯಲ್ಲಿ ತಿಳಿದು ಬಂದಿದೆ. ಆನ್‌ಲೈನ್ ಪಾವತಿ ಪೋರ್ಟಲ್‌ಗಳಾದ ಕ್ಯಾಷ್‌ಫ್ರೀ, ಪೇಯುಮನಿ, ಪೋಕರ್ ಸೈಟ್‌ಗಳಾದ ಪಿಪಿಪೋಕರ್ ಕ್ಲಬ್, ಕಾಲಿಂಗ್‌ಸ್ಟೇಷನ್, ಕ್ರಿಪ್ಟೊಕರೆನ್ಸಿ ಎಕ್ಸ್‌ಚೇಂಜ್ ಎಫ್‌ಸಿಸಿಇ.ಜೆಪಿ ಈ ಪಟ್ಟಿಯಲ್ಲಿ ಇವೆ.
ತನ್ನ ವೆಬ್‌ಸೈಟ್‌ಗೆ ಕನ್ನ ಹಾಕಿ 1.7 ಕೋಟಿ ಬಳಕೆದಾರರ ಮಾಹಿತಿ ಕಳ್ಳತನ ಮಾಡಲಾಗಿದೆ ಎಂದು ಜೊಮ್ಯಾಟೊ ಸಂಸ್ಥೆಯು 2017ರ ಮೇಯಲ್ಲಿ ಹೇಳಿತ್ತು. ಶ್ರೀಕಿಯ ಪಟ್ಟಿಯಲ್ಲಿ ಜೊಮ್ಯಾಟೊ ಕೂಡ ಇತ್ತು ಎಂಬ ಬಗ್ಗೆ ಜೊಮ್ಯಾಟೊ ಸಂಸ್ಥೆಯಿಂದ ಪ್ರತಿಕ್ರಿಯೆ ಪಡೆದುಕೊಳ್ಳುವುದು ಸಾಧ್ಯವಾಗಿಲ್ಲ ಎನ್ನಲಾಗಿದೆ.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700