ಗುಬ್ಬಿ: ತಾಲ್ಲೂಕಿನ ಕಸಬ ಹೋಬಳಿ, ಬ್ಯಾಡಿಗೆರೆ ಗ್ರಾಮದಲ್ಲಿನ ಅಜ್ಜಮ್ಮನಕೆರೆ ತುಂಬಿದ ಹಿನ್ನಲೆ ಗಂಗಾಪೂಜೆ ನೆರವೇರಿಸಿ ಬಾಗಿನ ಅರ್ಪಿಸಿ ಮಾತನಾಡಿದ ಅವರು ಗುಬ್ಬಿ ತಾಲ್ಲೂಕಿನ ಬಹುತೇಕ ಎಲ್ಲಾ ಕೆರೆಗಳು ತುಂಬಿ ಹರಿಯುತ್ತಿರುವುದರಿಂದ ರೈತರು ಸಂತಸ ವ್ಯಕ್ತಪಡಿಸುತ್ತಿದ್ದಾರೆ ಇದರಿಂದಾಗಿ ರೈತರ ಕೊಳವೆ ಬಾವಿಗಳಲ್ಲಿ ಅಂತರ್ಜಾಲ ವೃದ್ಧಿಸುತ್ತದೆ ತಾಲ್ಲೂಕಿನ ರೈತರು ನೆಮ್ಮದಿಯ ಜೀವನ ನಡೆಸಲು ಅನುಕೂಲವಗುತ್ತಿದೆ ಎಂದು ತಿಳಿಸಿದರು.
ರಾಜಕೀಯ ಎಂಬುದು ನಿಂತ ನೀರಲ್ಲ ಆನೇಕರು ಬರುತ್ತಾರೆ ಹೋಗುತ್ತಾರೆ ನನ್ನ ರಾಜಕೀಯ ಜೀವನದಲ್ಲಿ ಜೆಡಿಎಸ್ ಪಕ್ಷದ ಬಾಗಿಲು ಮುಚ್ಚಿದೆ ಎಂದು ಹೇಳಿರುವ ವರಿಷ್ಠರು ನನ್ನನ್ನು ಪಕ್ಷದಿಂದ ಆಚೆ ಕಳುಹಿಸಿಕೊಡವ ಉದ್ದೇಶ ಹೊಂದಿರುವಾಗ ಮೇಲೆ ಬಿದ್ದು ಹೋಗಿ ಅಂಗಲಾಚುವ ವ್ಯಕ್ತಿತ್ವ ನನ್ನದಲ್ಲ ನಮ್ಮ ಜೋತೆಗಿದ್ದ ಮೂರ್ನಾಲ್ಕು ಜನ ಆಚೆ ಹೋದ ಮಾತ್ರಕ್ಕೆ ಗುಬ್ಬಿ ತಾಲ್ಲೂಕಿನ ರಾಜಕೀಯ ಚಿತ್ರಣ ಬದಲಾಗುವುದಿಲ್ಲ.
ಪ್ರಸ್ತುತ ನಾನು ಇಂದಿಗೂ ಜೆಡಿಎಸ್ ಪಕ್ಷದ ಶಾಸಕನಾಗಿದ್ದೇನೆ ಮುಂಬರುವ ಸ್ಥಳೀಯ ಚುನಾವಣೆ ಜೀಲ್ಲಾ ಪಂಚಾಯಿತಿ ತಾಲೂಕು ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ ಗುಬ್ಬಿ ವಿಧಾನಸಭಾ ಕ್ಷೇತ್ರದ ನಮ್ಮ ಪ್ರೀತಿಯ ಮತದಾರ ಬಂದುಗಳು ಹಾಗು ನಮ್ಮ ಕಾರ್ಯಕರ್ತರ ತಿರ್ಮಾನದಂತೆ ನಮ್ಮ ರಾಜಕೀಯ ನೇಡೆ ಮುಂದುವರಿಯಲಿದೆ ನಮ್ಮ ಕಾರ್ಯಕರ್ತರ ತಿರ್ಮಾನವೇ ಅಂತಿಮ ನಿರ್ಧಾರ ಎಂದರು.
ನಾನು ಯಾವತ್ತೂ ಅವರ ವಿಚಾರದಲ್ಲಿ ಮಾಧ್ಯಮದಲ್ಲಿ ತಪ್ಪು ಹೇಳಿಕೆಯನ್ನು ನಿಡಿರುವುದ್ದಿಲ್ಲ ಅವರ ಹೇಳಿಕೆಗೆ ನಾನು ಪ್ರತ್ಯೂತ್ತರ ನೀಡಿದ್ದೇನೆ ನನ್ನಿಂದ ಯಾವುದೇ ಲೋಪಗಳು ಆಗಿಲ್ಲ ನಾನು ರೇವಣ್ಣನವರ ಮನೆಗೆ ಹೋದಾಗಲೂ ಸಾ ರಾ ಮಹೇಶ್ ರವರು ನನ್ನನ್ನು ಕುಮಾರಸ್ವಾಮಿ ಅವರ ಬಳಿ ಮಾತನಾಡಿಸಲು ಬಹಳಷ್ಟು ಪ್ರಯತ್ನಿಸಿದರು ಅವರು ನನ್ನ ಜೋತೆಗೆ ಮಾತನಾಲು ನಿರಾಕರಿಸಿದ್ದಾರೆ ಪಕ್ಷದ ಕಾರ್ಯಗಾರದಲ್ಲಿಯೂ ಸಹ ನಾನು ಭಾಗವಹಿಸಿದ್ದಾಗ ಅಲ್ಲಿಯೂ ಸಹ ನನ್ನ ಜೋತೆಗೆ ಮಾತನಾಡಲು ಅವರಿಗೆ ಮನಸ್ಸು ಇರಲಿಲ್ಲ ಎಂದು ನೇರವಾಗಿ ಆಪಾದಿಸಿದರು.
ಗುಬ್ಬಿ ನಗರದಲ್ಲಿ ನೇಡದ ಪಕ್ಷ ಸೇರ್ಪಡೆ ಸಮಾವೇಶ ಕಾರ್ಯಕ್ರಮಕ್ಕೆ ನನಗೂ ಯಾವುದೇ ಮಾಹಿತಿ ನೀಡದೆ ಹಾಗೂ ಗುಬ್ಬಿ ವಿಧಾನಸಭಾ ಕ್ಷೇತ್ರದ ಸ್ಥಳೀಯ ಜೆಡಿಎಸ್ ಪಕ್ಷದ ಸಮಿತಿಗೂ ಯಾವುದೇ ಮಾಹಿತಿ ನೀಡದಂತೆ ಕಾರ್ಯಕ್ರಮ ಆಯೋಜಿಸಿದ್ದು ತಪ್ಪಲ್ಲವೇ ಎಂದು ಪ್ರಶ್ನಿಸಿದರು.