ತುಮಕೂರು: ಅಂತರ್ಜಾತಿ ವಿವಾಹವಾಗಿದ್ದಕ್ಕೆ ದಂಪತಿಗೆ ಸವರ್ಣಿಯರು ಹಲ್ಲೆ, ಕಿರುಕುಳ ನೀಡಿ, ಸಾಮಾಜಿಕ ಬಹಿಷ್ಕಾರ ಹಾಕಿರುವ ಘಟನೆ ಇಲ್ಲಿನ ಚಿ.ನಾ.ಹಳ್ಳಿ ತಾಲೂಕಿನ ಕೋರೆಗೆರೆ ಎಂಬಲ್ಲಿ ನಡೆದಿದ್ದು, ಈ ಸಂಬಂಧ ಪೊಲೀಸರಿಗೆ ದೂರು ನೀಡಿದರೂ ಇನ್ನೂ ಯಾವುದೇ ಪ್ರಯೋಜನವಾಗಿಲ್ಲ ಎಂದು ವರದಿಯಾಗಿದೆ.
ಚಿ.ನಾ.ಹಳ್ಳಿ ತಾಲೂಕು ಕೋರಗೆರೆ ಗ್ರಾಮದ ದಲಿತ ಯುವಕ ನಾಗರಾಜು ಹಾಗೂ ಶೆಟ್ ಬಣಜಿಗ ಜಾತಿಯ ಮಹಿಳೆ ಪರಸ್ಪರ ಪ್ರೀತಿಸಿ 2007ರಲ್ಲಿ ವಿವಾಹವಾಗಿದ್ದರು. ವಿವಾಹದ ಬಳಿಕ ಅದೇ ಗ್ರಾಮದಲ್ಲಿ ವಾಸವಿದ್ದರು. ಇವರಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಅಂತರ್ಜಾತಿ ವಿವಾಹವಾಗಿ ಸಂತೋಷದಿಂದ ಬದುಕುತ್ತಿರುವ ಇವರ ಕುಟುಂಬವನ್ನು ನೋಡಿ ಹೊಟ್ಟೆ ಉರಿದುಕೊಂಡ ಸವರ್ಣಿಯರು ಈ ಕುಟುಂಬಕ್ಕೆ ಇದೀಗ ಕಿರುಕುಳ ನೀಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.https://googleads.g.doubleclick.net/pagead/ads?client=ca-pub-1459320771720342&output=html&h=280&adk=3143272777&adf=2627613796&pi=t.aa~a.4130071176~i.4~rp.4&w=645&fwrn=4&fwrnh=100&lmt=1635587942&num_ads=1&rafmt=1&armr=3&sem=mc&pwprc=1765030313&tp=site_kit&psa=1&ad_type=text_image&format=645×280&url=https%3A%2F%2Fmahanayaka.in%2Fantharjati-vivahavagiddakke-dampatige-samajika-bahishkara%2F&flash=0&fwr=0&pra=3&rh=161&rw=644&rpe=1&resp_fmts=3&wgl=1&fa=27&uach=WyJXaW5kb3dzIiwiMTAuMC4wIiwieDg2IiwiIiwiOTUuMC40NjM4LjU0IixbXSxudWxsLG51bGwsIjY0Il0.&tt_state=W3siaXNzdWVyT3JpZ2luIjoiaHR0cHM6Ly9hdHRlc3RhdGlvbi5hbmRyb2lkLmNvbSIsInN0YXRlIjo3fV0.&dt=1635587942013&bpp=4&bdt=6725&idt=-M&shv=r20211027&mjsv=m202110260101&ptt=9&saldr=aa&abxe=1&cookie=ID%3D01a6f37f0b5d3ff5-22befd657bce007c%3AT%3D1635577945%3ART%3D1635577945%3AS%3DALNI_MbuVEPZWKBonUyiYSRapzt5nUcitg&prev_fmts=0x0%2C645x280&nras=3&correlator=6107237182856&frm=20&pv=1&ga_vid=2121593561.1635577945&ga_sid=1635587941&ga_hid=1729249635&ga_fc=1&u_tz=330&u_his=23&u_h=768&u_w=1366&u_ah=728&u_aw=1366&u_cd=24&adx=15&ady=1620&biw=1349&bih=600&scr_x=0&scr_y=600&eid=21066431%2C31062937%2C21065724%2C21067496&oid=2&pvsid=3762954436406137&pem=98&ref=https%3A%2F%2Fmahanayaka.in%2Fpurusharu-madida-tappige-mahileyaru-tappithastharu-ramya%2F&eae=0&fc=1408&brdim=0%2C0%2C0%2C0%2C1366%2C0%2C1366%2C728%2C1366%2C600&vis=1&rsz=%7C%7Cs%7C&abl=NS&fu=128&bc=31&ifi=3&uci=a!3&btvi=1&fsb=1&xpc=slnv5D1ks2&p=https%3A//mahanayaka.in&dtd=50
ನಮ್ಮ ಜಮೀನಿನಲ್ಲಿಯೇ ಕೂಲಿ ಕೃಷಿ ಮಾಡಿಕೊಂಡು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವ ನಮ್ಮ ಮೇಲೆ ಕಿರುಕುಳ ನಡೆಸಲಾಗುತ್ತಿದ್ದು, ಈ ಗ್ರಾಮದಲ್ಲಿ ಇರಬಾರದು ಎಂದು ಬಹಿಷ್ಕಾರ ಹಾಕಿದ್ದಾರೆ. ಕುಡಿಯುವ ನೀರು, ಅಂಗಡಿಗಳಲ್ಲಿ ಸಾಮಾನು ಕೂಡ ನಮಗೆ ಕೊಡುತ್ತಿಲ್ಲ ಎಂದು ದಂಪತಿ ಆರೋಪಿಸಿದ್ದಾರೆ.
ಇನ್ನೂ ಈ ಬಗ್ಗೆ ಹುಳಿಯಾರು ಠಾಣೆಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಪೊಲೀಸರು ಸಮಸ್ಯೆಗೆ ಪರಿಹಾರ ನೀಡುವ ಬದಲು ರಾಜಿ ಮಾಡಿಸಲು ಮುಂದಾಗಿದ್ದಾರೆ. ಹೀಗಾಗಿ ಕಳೆದ ಮೂರು ದಿನಗಳ ಹಿಂದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿಯಾಗಿ ಮನವಿ ಮಾಡಿದ್ದೇವೆ. ಅವರು ನ್ಯಾಯ ಒದಗಿಸುವುದಾಗಿ ತಿಳಿಸಿದ್ದಾರೆ ಎಂದು ದಂಪತಿ ತಿಳಿಸಿದ್ದಾರೆ.