ತುಮಕೂರು: ನಗರದ 1ನೇ ವಾರ್ಡ್ ವ್ಯಾಪ್ತಿಗೆ ಸೇರುವ ಪ್ರಸ್ತುತ ತಿಮ್ಮಲಾಪುರ ಕೆರೆಯಲ್ಲಿ ಸುಮಾರು 15 ಹಂದಿಜೋಗಿ ನಿವೇಶನ/ವಸತಿ ರಹಿತ ಕುಟುಂಬಗಳು ವಾಸವಿರುವ ಗುಡಿಸಲುಗಳಿದ್ದು, ಕಳೆದ ಒಂದು ವಾರದಿಂದ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಗುಡಿಸಲುಗಳು ಜಲಾವೃತವಾಗಿವೆ.
ವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಇದರಿಂದಾಗಿ ವಸತಿ ರಹಿತ ಗುಡಿಸಲು ನಿವಾಸಿಗಳ ಪಾಡು ಹೇಳತೀರದಂತಾಗಿದೆ. ಇನ್ನೊಂದೆಡೆ ಮಳೆಯ ಕಾರಣ ಕೂಲಿ ಸಿಗದೇ ಜನರು ಸಂಕಷ್ಟಕ್ಕೀಡಾಗಿದ್ದರು. ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಮಾಡಿದ್ದ ಮನವಿಯ ಮೇರೆಗೆ ವರಮಹಾಲಕ್ಷ್ಮಿ ಹಬ್ಬದ ಈ ದಿನದಂದು ಸದರಿ ಸ್ಥಳಕ್ಕೆ ಪಾಲಿಕೆ ಆಯುಕ್ತೆ ರೇಣುಕಾ ಹಾಗೂ ಸಿಬ್ಬಂದಿ ಮತ್ತು ಒಂದನೇ ವಾರ್ಡ್ ನ ಕಾರ್ಪೊರೇಟರ್ ಇಂದ್ರ ಕುಮಾರ್ ಮತ್ತು ಸ್ನೇಹಿತರು ಹಾಗೂ ಸಿಬ್ಬಂದಿ ಭೇಟಿ ನೀಡಿ ಪಾಲಿಕೆಯ JCB ಯಂತ್ರದಿಂದ ಜಾಗದಲ್ಲಿ ಸ್ವಚ್ಛ ಮಾಡಿಸುವುದರೊಂದಿಗೆ ಪ್ರತಿ ಕುಟುಂಬಕ್ಕೆ ಒಂದೊಂದು ಟಾರ್ಪಾಲ್ ವ್ಯವಸ್ಥೆ ಮಾಡಲಾಗಿತ್ತು.
ಆದರೆ ಇದೀಗ ಮತ್ತೆ ಹೊಸ ಸಮಸ್ಯೆ ಸೃಷ್ಟಿಯಾಗಿದ್ದು, ನಿನ್ನೆ ರಾತ್ರಿ ಸುರಿದ ಭಾರೀ ಮಳೆಯಲ್ಲಿ ಸದರಿ ವಾಸವಿದ್ದ ಕುಟುಂಬಗಳು ನೀರಿನಲ್ಲಿ ಮುಳುಗಡೆಯಾಗಿದ್ದು, ಈ ಜನರ ಗೋಳು ಹೇಳ ತೀರದಂತಾಗಿದೆ. ತುರ್ತಾಗಿ ಈ ಕುಟುಂಬಗಳಿರುವ ಸ್ಥಳಕ್ಕೆ ಆಯುಕ್ತರು, ತಹಸಿಲ್ದಾರ್, ಜಿಲ್ಲಾ ವ್ಯವಸ್ಥಾಪಕರು, ಸಮಾಜ ಕಲ್ಯಾಣ ಇಲಾಖೆಯ AD ಇತರೆ ಸಂಬಂಧಿಸಿದ ಅಧಿಕಾರಿಗಳು ಈ ನೊಂದ ಕುಟುಂಬಗಳ ಬಗ್ಗೆ ಸೂಕ್ತ ಕ್ರಮ ವಹಿಸಲು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಸಂಚಾಲಕ ಹಂದ್ರಾಳ್ ನಾಗಭೂಷಣ್ ಒತ್ತಾಯಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz