ಉತ್ತರಪ್ರದೇಶದ 5 ಬಾರಿಯ ಶಾಸಕ ಗ್ಯಾಂಗ್ ಸ್ಟರ್ ಮುಖ್ತಾರ್ ಅನ್ಸಾರಿ(60) ಗುರುವಾರ ಮೃತ ಹೊಂದಿದ್ದಾರೆ.
2005 ರಿಂದಲೂ ಜೈಲಿನಲ್ಲಿದ್ದ ಅನ್ಸಾರಿ ಗುರುವಾರ ಸಂಜೆ ರಂಜಾನ್ ಉಪವಾಸ ಮುಗಿಯುತ್ತಿದ್ದಂತೆ ತೀವ್ರ ಅಸ್ವಸ್ಥರಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಹೃದಯಾಘಾತದಿಂದ ಮೃತ ಹೊಂದಿದರು.
ಮಂಗಳವಾರ ಕಿಬ್ಬೊಟ್ಟೆ ನೋವು ಎಂದು ಅಸ್ವಸ್ಥರಾಗಿ 14 ಗಂಟೆಗಳ ಕಾಲ ಆಸ್ಪತ್ರೆಯಲ್ಲಿದ್ದು ಚಿಕಿತ್ಸೆ ಪಡೆದು ಮರಳಿದ್ದರು. 68ಕ್ಕೂ ಹೆಚ್ಚು ಅಧಿಕ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದ ಗ್ಯಾಂಗ್‌ಸ್ಟಾರ್ 8 ಪ್ರಕರಣಗಳಲ್ಲಿ ದೋಷಿ ಎಂದು ಸಾಬೀತಾಗಿ ಜೈಲಿನಲ್ಲಿದ್ದರು.
ಇತ್ತ ಉ.ಪ್ರದೇಶದಾದ್ಯಂತ ಅನ್ಸಾರಿ ಸಾವಿನ ಕಾರಣ ನಿಷೇಧಾಜ್ಞೆ ಹೊರಡಿಸಲಾಗಿದೆ. ಮುಖ್ತಾರ್ ಅನ್ಸಾರಿ ಸಾವಿನ ಹಿಂದೆ ಸಂಚು ಇದ್ದು, ಯಾರೋ ಜೈಲಲ್ಲಿ ವಿಷವುಣಿಸಿ ಕೊಲೆ ಮಾಡಿದ್ದಾರೆ ಎಂದು ಅವರ ಸಹೋದರ, ಘಾಜಿಪುರ ಸಂಸದ ಅಫ್ಜಲ್ ಅನ್ಸಾರಿ ಆರೋಪ ಮಾಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296