ಜೈಪುರ: 160 ಅಡಿ ಆಳದ ಬೋರ್ ವೆಲ್ ಗೆ ಬಿದ್ದಿದ್ದ 5 ವರ್ಷದ ಬಾಲಕನನ್ನು ಮೇಲೆತ್ತಿದರೂ ಬಾಲಕನ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಇಂತಹದ್ದೊಂದು ಘಟನೆ ಜೈಪುರದ ದೌಸಾದಲ್ಲಿ ನಡೆದಿದೆ.
ಸೋಮವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಕಾಲಿಖಾಡ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. 5 ವರ್ಷದ ಆರ್ಯನ್ ಜಮೀನಿನಲ್ಲಿ ಆಟವಾಡುತ್ತಿದ್ದಾಗ ಆಕಸಿಕವಾಗಿ ಮನೆಯ ಎದುರಿನ ಬೋರ್ ವೆಲ್ ಗೆ ಬಿದ್ದಿದ್ದ.
ನಂತರ ವಿಷಯ ತಿಳಿದು ಗ್ರಾಮಸ್ಥರು ಸ್ಥಳಕ್ಕೆ ಬಂದು ಪೊಲೀಸರಿಗೆ ಮಾಹಿತಿ ನೀಡಿದರು ಒಂದು ಗಂಟೆಯ ನಂತರ ರಕ್ಷಣಾ ಕಾರ್ಯಾಚರಣೆ ಆರಂಭವಾಯಿತು. ರಕ್ಷಣಾ ತಂಡ ಅಲ್ಲಿಗೆ ತಲುಪಿದ ತಕ್ಷಣ ಪೈಪ್ ಮೂಲಕ ಆಮ್ಲಜನಕ ಪೂರೈಕೆ ಆರಂಭಿಸಿ ಅವರ ಚಲನವಲನವನ್ನು ಸೆರೆಹಿಡಿಯಲು ಕ್ಯಾಮರಾ ಇರಿಸಲಾಗಿತ್ತು.
ಮಗುವನ್ನು ತಲುಪಲು ಸಮಾನಾಂತರ ಹೊಂಡವನ್ನು ಅಗೆಯಲಾಯಿತು. ಆದರೆ, ನೀರಿನ ಮಟ್ಟ ಸುಮಾರು 160 ಅಡಿಗಳಷ್ಟಿತ್ತು ಹೀಗಾಗಿ ಮಗುವಿನ ಯಾವುದೇ ಚಲನವಲನವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುವುದು ಕಷ್ಟಕರವಾಗಿತ್ತು. ಆದರೂ ಕಾರ್ಯಾಚರಣೆ ಮುಂದುವರಿಸಲಾಗಿತ್ತು. ಕೊನೆಗೂ ಮಗುವನ್ನು ಉಳಿಸಲು ಸಾಧ್ಯವಾಗಲಿಲ್ಲ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx