nammatumakuru

    Subscribe to Updates

    Get the latest creative news from FooBar about art, design and business.

    What's Hot

    ಹೊಸ ಬಾಟಲಿಯಲ್ಲಿ ಹಳೆಯ ಮದ್ಯ, ಡಿಕೆಶಿ ಪ್ರಾಮಾಣಿಕ ಆಡಳಿತ ನೀಡಲು ಹೇಗೆ ಸಾಧ್ಯ?: ಸುರೇಶ್ ಗೌಡ ಟೀಕೆ

    June 6, 2026

    ತುಮಕೂರು: ಜೂನ್ 9ರಂದು ಉದ್ಯೋಗಾಕಾಂಕ್ಷಿಗಳಿಗೆ ನೇರ ಸಂದರ್ಶನ

    June 6, 2026

    ಪಾವಗಡದಲ್ಲಿ ವಿಶ್ವ ಪರಿಸರ ದಿನಾಚರಣೆ: ‘ಗಿಡ ಬೆಳೆಸುವುದು ನಮ್ಮ ಕರ್ತವ್ಯ’: ಸಿಡಿಪಿಓ ಸುನಿತಾ

    June 6, 2026
    Facebook Twitter Instagram
    ಟ್ರೆಂಡಿಂಗ್
    • ಹೊಸ ಬಾಟಲಿಯಲ್ಲಿ ಹಳೆಯ ಮದ್ಯ, ಡಿಕೆಶಿ ಪ್ರಾಮಾಣಿಕ ಆಡಳಿತ ನೀಡಲು ಹೇಗೆ ಸಾಧ್ಯ?: ಸುರೇಶ್ ಗೌಡ ಟೀಕೆ
    • ತುಮಕೂರು: ಜೂನ್ 9ರಂದು ಉದ್ಯೋಗಾಕಾಂಕ್ಷಿಗಳಿಗೆ ನೇರ ಸಂದರ್ಶನ
    • ಪಾವಗಡದಲ್ಲಿ ವಿಶ್ವ ಪರಿಸರ ದಿನಾಚರಣೆ: ‘ಗಿಡ ಬೆಳೆಸುವುದು ನಮ್ಮ ಕರ್ತವ್ಯ’: ಸಿಡಿಪಿಓ ಸುನಿತಾ
    • ಮಹಿಳಾ ಸುರಕ್ಷತೆಗೆ ಅಕ್ಕಪಡೆ: ತುಮಕೂರಿನಲ್ಲಿ ಜಾಗೃತಿ ಅಭಿಯಾನ
    • ಕನ್ನಡಿಗರ ಹೃದಯ ಸಾಮ್ರಾಜ್ಯದ ನಾಡದೊರೆಯಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್: ಎನ್.ಕೆ.ನಿಧಿಕುಮಾರ್
    • ತಣ್ಣೇನಹಳ್ಳಿ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸರ್ಕಾರಿ ಶಾಲೆಯಲ್ಲಿ ಗಿಡ ನೆಡುವ ಕಾರ್ಯಕ್ರಮ
    • ಜಾಗತಿಕ ಸಮಸ್ಯೆಗಳ ಬಗ್ಗೆ ಸಿದ್ದರಬೆಟ್ಟ ಶ್ರೀಗಳ ಕಳಕಳಿ; ಸಮಾಜದ ಏಳಿಗೆಗೆ ಮೌಲ್ಯಗಳು ಮುಖ್ಯ ಎಂದ ಎಲಿಜಬೆತ್ ಚೆರಿಯನ್
    • ಕೊರಟಗೆರೆ: ಡಾ.ಜಿ. ಪರಮೇಶ್ವರ್ 2ನೇ ಬಾರಿಗೆ ಡಿಸಿಎಂ; ಅಭಿಮಾನಿಗಳಿಂದ ಭರ್ಜರಿ ಸಂಭ್ರಮಾಚರಣೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಹೊಸ ಬಾಟಲಿಯಲ್ಲಿ ಹಳೆಯ ಮದ್ಯ, ಡಿಕೆಶಿ ಪ್ರಾಮಾಣಿಕ ಆಡಳಿತ ನೀಡಲು ಹೇಗೆ ಸಾಧ್ಯ?: ಸುರೇಶ್ ಗೌಡ ಟೀಕೆ
    ತುಮಕೂರು June 6, 2026

    ಹೊಸ ಬಾಟಲಿಯಲ್ಲಿ ಹಳೆಯ ಮದ್ಯ, ಡಿಕೆಶಿ ಪ್ರಾಮಾಣಿಕ ಆಡಳಿತ ನೀಡಲು ಹೇಗೆ ಸಾಧ್ಯ?: ಸುರೇಶ್ ಗೌಡ ಟೀಕೆ

    By adminJune 6, 2026No Comments2 Mins Read
    suresh gowda

    ತುಮಕೂರು: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಡಿ.ಕೆ. ಶಿವಕುಮಾರ್ ಅವರಿಗೆ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಸುರೇಶ್ ಗೌಡ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಇದೇ ವೇಳೆ, ಮುಂಬರುವ ತಮ್ಮ ಎರಡು ವರ್ಷಗಳ ಅಧಿಕಾರಾವಧಿಯಲ್ಲಿ ರಾಜ್ಯದ ಹೆಚ್ಚಿನ ಅಭಿವೃದ್ಧಿ ಹಾಗೂ ಜನ ಕಲ್ಯಾಣಕ್ಕಾಗಿ ಕೆಲಸ ಮಾಡಲಿ ಎಂದು ಅವರು ಹಾರೈಸಿದ್ದಾರೆ.

    ಆದರೆ, ನೂತನ ಸಂಪುಟ ರಚನೆ ಮತ್ತು ಕಾಂಗ್ರೆಸ್‌ ನ ಆಂತರಿಕ ರಾಜಕೀಯದ ಕುರಿತು ಶಾಸಕ ಸುರೇಶ್ ಗೌಡ ತೀವ್ರ ಅಸಮಾಧಾನ ಹಾಗೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ.


    Provided by
    Provided by

    ಇವತ್ತಿನ ಸಂಪುಟ ರಚನೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಇದರಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವೈಯಕ್ತಿಕ ಆಯ್ಕೆಯ ಒಬ್ಬನೇ ಒಬ್ಬ ಸಚಿವರೂ ಇದ್ದಂತೆ ಕಾಣುತ್ತಿಲ್ಲ. ಯಾವುದೇ ಒಬ್ಬ ಹೊಸ ನಾಯಕ ಅಧಿಕಾರಕ್ಕೆ ಬಂದಾಗ, ತಮ್ಮದೇ ಆದ ಆಯ್ಕೆಯ ಜನರನ್ನು ಇಟ್ಟುಕೊಂಡು ಆಡಳಿತ ನಡೆಸಲು ಬಯಸುವುದು ಸಹಜ. ಆದರೆ, ಕಾಂಗ್ರೆಸ್ ಪಕ್ಷದೊಳಗಿರುವ ಆಂತರಿಕ ಹಿತಾಸಕ್ತಿಗಳು ಹಾಗೂ ಬಣ ರಾಜಕೀಯದ ಕಾರಣದಿಂದಾಗಿ ಎಲ್ಲರೂ ಸೇರಿಕೊಂಡು ಶಿವಕುಮಾರ್ ಅವರ ಕೈಕಾಲುಗಳನ್ನು ಕಟ್ಟಿ ಹಾಕಿದಂತೆ ಭಾಸವಾಗುತ್ತಿದೆ ಎಂದು ಸುರೇಶ್ ಗೌಡ ವಿಶ್ಲೇಷಿಸಿದ್ದಾರೆ.

    ಮೊದಲ ಹಂತದ ಸಂಪುಟ ವಿಸ್ತರಣೆಯಲ್ಲಿ ಒಬ್ಬರೇ ಒಬ್ಬ ಮಹಿಳೆಗೆ ಸ್ಥಾನ ನೀಡದೇ ಇರುವುದು ಎದ್ದು ಕಾಣುವ ದೊಡ್ಡ ಲೋಪವಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಶೇಕಡಾ 33ರಷ್ಟು ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಿದಾಗ ಅದನ್ನು ಸೋಲಿಸಲು ಯತ್ನಿಸಿದ ಕಾಂಗ್ರೆಸ್‌ನ ಮಹಿಳಾ ವಿರೋಧಿ ಧೋರಣೆ, ಈಗಿನ ಸಂಪುಟ ರಚನೆಯಲ್ಲಿಯೂ ಮುಂದುವರಿದಿದೆ ಎಂದು ಅವರು ಲೇವಡಿ ಮಾಡಿದರು.

    ನೂತನ ಸಂಪುಟದಲ್ಲಿ ಮಾಜಿ ಮುಖ್ಯಮಂತ್ರಿಗಳ ಪುತ್ರ ಡಾ. ಯತೀಂದ್ರ ಅವರನ್ನು ಬಿಟ್ಟರೆ ಯಾವುದೇ ಹೊಸ ಮುಖಗಳಿಗೆ ಆದ್ಯತೆ ನೀಡಿಲ್ಲ. ಯತೀಂದ್ರ ಅವರ ಸೇರ್ಪಡೆಗೆ ಯಾವ ಮಾನದಂಡವನ್ನು ಬಳಸಲಾಗಿದೆ ಎಂದು ಹೆಚ್ಚು ಯೋಚಿಸುವ ಅಗತ್ಯ ಯಾರಿಗೂ ಇಲ್ಲ , ಮುಖ್ಯಮಂತ್ರಿಯಾಗಲು ದೊಡ್ಡ ಮಟ್ಟದ ತಪಸ್ಸನ್ನೇ ಮಾಡಬೇಕಾಗಿ ಬಂದ ಡಿ.ಕೆ. ಶಿವಕುಮಾರ್ ಅವರು, ಈಗ ‘ಹೊಸ ಬಾಟಲಿಯಲ್ಲಿ ಹಳೆಯ ಮದ್ಯ’ ಎಂಬಂತೆ ಹಳೆಯ ಮುಖಗಳನ್ನೇ ಇಟ್ಟುಕೊಂಡು ರಾಜ್ಯಕ್ಕೆ ಹೇಗೆ ತಾನೆ ದಕ್ಷ ಮತ್ತು ಪ್ರಾಮಾಣಿಕ ಆಡಳಿತ ನೀಡಲು ಸಾಧ್ಯ ಎಂದು ಸುರೇಶ್ ಗೌಡ ಪ್ರಶ್ನಿಸಿದ್ದಾರೆ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ತುಮಕೂರು: ಜೂನ್ 9ರಂದು ಉದ್ಯೋಗಾಕಾಂಕ್ಷಿಗಳಿಗೆ ನೇರ ಸಂದರ್ಶನ

    June 6, 2026

    ಮಹಿಳಾ ಸುರಕ್ಷತೆಗೆ ಅಕ್ಕಪಡೆ: ತುಮಕೂರಿನಲ್ಲಿ ಜಾಗೃತಿ ಅಭಿಯಾನ

    June 6, 2026

    ಕನ್ನಡಿಗರ ಹೃದಯ ಸಾಮ್ರಾಜ್ಯದ ನಾಡದೊರೆಯಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್: ಎನ್.ಕೆ.ನಿಧಿಕುಮಾರ್

    June 6, 2026

    Leave A Reply Cancel Reply

    Our Picks

    ಪತ್ನಿಗೆ ರಾಜ್ಯಸಭಾ ಆಫರ್ ನಿರಾಕರಿಸಿದ ಸಿದ್ದರಾಮಯ್ಯ; 3 ಡಿಸಿಎಂ ಹುದ್ದೆಗಾಗಿ ಪಟ್ಟು!

    June 1, 2026

    ದ್ವೇಷ ಭಾಷಣ ಮಸೂದೆಗೆ ಕೇಂದ್ರ ಗೃಹ ಸಚಿವಾಲಯ ಬ್ರೇಕ್: ಕರ್ನಾಟಕ ಸರ್ಕಾರಕ್ಕೆ ಭಾರಿ ಹಿನ್ನಡೆ!

    May 26, 2026

    ಥಿಯೇಟರ್‌ ಗಳಲ್ಲಿ ಹೊಸ ತಮಿಳು ಸಿನಿಮಾಗಳಿಗೆ ದಿನಕ್ಕೆ 5 ಶೋ ಪ್ರದರ್ಶನ: ಸಿಎಂ ವಿಜಯ್ ಮಹತ್ವದ ಆದೇಶ

    May 26, 2026

    ಬಾಲಕನ ಬಲಿ ಪಡೆದಿದ್ದ ಚಿರತೆ ಕೊನೆಗೂ ಸೆರೆ: 14 ದಿನಗಳ ಕಾರ್ಯಾಚರಣೆ ಬಳಿಕ ಸ್ಥಳೀಯರು ನಿಟ್ಟುಸಿರು

    May 25, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಹೊಸ ಬಾಟಲಿಯಲ್ಲಿ ಹಳೆಯ ಮದ್ಯ, ಡಿಕೆಶಿ ಪ್ರಾಮಾಣಿಕ ಆಡಳಿತ ನೀಡಲು ಹೇಗೆ ಸಾಧ್ಯ?: ಸುರೇಶ್ ಗೌಡ ಟೀಕೆ

    June 6, 2026

    ತುಮಕೂರು: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಡಿ.ಕೆ. ಶಿವಕುಮಾರ್ ಅವರಿಗೆ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಸುರೇಶ್ ಗೌಡ…

    ತುಮಕೂರು: ಜೂನ್ 9ರಂದು ಉದ್ಯೋಗಾಕಾಂಕ್ಷಿಗಳಿಗೆ ನೇರ ಸಂದರ್ಶನ

    June 6, 2026

    ಪಾವಗಡದಲ್ಲಿ ವಿಶ್ವ ಪರಿಸರ ದಿನಾಚರಣೆ: ‘ಗಿಡ ಬೆಳೆಸುವುದು ನಮ್ಮ ಕರ್ತವ್ಯ’: ಸಿಡಿಪಿಓ ಸುನಿತಾ

    June 6, 2026

    ಮಹಿಳಾ ಸುರಕ್ಷತೆಗೆ ಅಕ್ಕಪಡೆ: ತುಮಕೂರಿನಲ್ಲಿ ಜಾಗೃತಿ ಅಭಿಯಾನ

    June 6, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.