nammatumakuru

    Subscribe to Updates

    Get the latest creative news from FooBar about art, design and business.

    What's Hot

    ತುಮಕೂರು: ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಮಾದಿಗ ಸಮುದಾಯದಿಂದ ಪ್ರತಿಭಟನೆ

    March 7, 2026

    ನಿರ್ವಹಣೆ ಕೊರತೆ: ಕೇವಲ 15 ವರ್ಷದಲ್ಲೇ ಶಿಥಿಲಾವಸ್ಥೆ ತಲುಪಿದ ಕೊರಟಗೆರೆ ಮಿನಿ ವಿಧಾನಸೌಧ

    March 7, 2026

    ರಾಜ್ಯ ಬಜೆಟ್ 2026: ತುಮಕೂರು ಜಿಲ್ಲೆಗೆ ತೀವ್ರ ನಿರಾಸೆ; ‘ಗ್ರೇಟರ್ ತುಮಕೂರು’ ಕನಸು ಭಗ್ನ

    March 7, 2026
    Facebook Twitter Instagram
    ಟ್ರೆಂಡಿಂಗ್
    • ತುಮಕೂರು: ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಮಾದಿಗ ಸಮುದಾಯದಿಂದ ಪ್ರತಿಭಟನೆ
    • ನಿರ್ವಹಣೆ ಕೊರತೆ: ಕೇವಲ 15 ವರ್ಷದಲ್ಲೇ ಶಿಥಿಲಾವಸ್ಥೆ ತಲುಪಿದ ಕೊರಟಗೆರೆ ಮಿನಿ ವಿಧಾನಸೌಧ
    • ರಾಜ್ಯ ಬಜೆಟ್ 2026: ತುಮಕೂರು ಜಿಲ್ಲೆಗೆ ತೀವ್ರ ನಿರಾಸೆ; ‘ಗ್ರೇಟರ್ ತುಮಕೂರು’ ಕನಸು ಭಗ್ನ
    • ನಿರುದ್ಯೋಗಿಗಳಿಗೆ ಸುವರ್ಣಾವಕಾಶ: ತುಮಕೂರಿನಲ್ಲಿ ಮಾ.11ಕ್ಕೆ ಬೃಹತ್ ನೇರ ಸಂದರ್ಶನ
    • ಸಾರಿಗೆ ಕ್ಷೇತ್ರಕ್ಕೆ ಬಂಪರ್ ಕೊಡುಗೆ: 2,000 ಕೋಟಿ ರೂ. ವೆಚ್ಚದಲ್ಲಿ 4,000 ಎಲೆಕ್ಟ್ರಿಕ್ ಬಸ್‌ ಗಳ ಸೇರ್ಪಡೆ
    • ಸಾಲವಿಲ್ಲದೆ ಯಾವುದೇ ದೇಶ–ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ; ಟೀಕಿಸುವ ನೈತಿಕ ಹಕ್ಕು ಬಿಜೆಪಿಗಿಲ್ಲ: ಸಿಎಂ ಸಿದ್ದರಾಮಯ್ಯ ತಿರುಗೇಟು
    • ಸಾಗರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ: ಅಧ್ಯಕ್ಷರಾಗಿ ರತ್ನಮ್ಮ ಶಿವರಾಜು, ಉಪಾಧ್ಯಕ್ಷರಾಗಿ ಪುಟ್ಟಸಿದ್ದಯ್ಯ ಅವಿರೋಧ ಆಯ್ಕೆ
    • ಮದ್ಯ ಪ್ರಿಯರಿಗೆ ಬೆಲೆ ಏರಿಕೆ ಶಾಕ್: ಆಲ್ಕೋಹಾಲ್ ಅಂಶದ ಮೇಲೆ ತೆರಿಗೆ; 45,000 ಕೋಟಿ ಗುರಿ!
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ನೀರಿನ ವಿಚಾರದಲ್ಲಿ ತಮಿಳುನಾಡು ಒಂದಾಗುತ್ತದೆ; ಕರ್ನಾಟಕದಲ್ಲಿ ಯಾರೂ ಒಂದಾಗಲ್ಲ: ಹೆಚ್.ಡಿ.ದೇವೇಗೌಡ
    ಜಿಲ್ಲಾ ಸುದ್ದಿ April 17, 2022

    ನೀರಿನ ವಿಚಾರದಲ್ಲಿ ತಮಿಳುನಾಡು ಒಂದಾಗುತ್ತದೆ; ಕರ್ನಾಟಕದಲ್ಲಿ ಯಾರೂ ಒಂದಾಗಲ್ಲ: ಹೆಚ್.ಡಿ.ದೇವೇಗೌಡ

    By adminApril 17, 2022No Comments3 Mins Read
    hd devegowda

    ಸರಗೂರು:  ರಾಜ್ಯದಲ್ಲಿ ಜಲ ಸಂಪನ್ಮೂಲಕ್ಕೆ ಕೊರತೆ ಇಲ್ಲ.  ಅದನ್ನು ಸಮರ್ಥವಾಗಿ ಬಳಸಿಕೊಳ್ಳಲು ಬಿಜೆಪಿ- ಕಾಂಗ್ರೆಸ್ ಸಹಕಾರ ಕೊಡುತ್ತಿಲ್ಲ  ಎಂದು  ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಬೇಸರ ವ್ಯಕ್ತಪಡಿಸಿದರು.

    ಬೀಚನಹಳ್ಳಿಯಲ್ಲಿ ಜಲಧಾರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾವೇರಿ, ಕಬಿನಿ, ಕೃಷ್ಣ ಸೇರಿದಂತೆ ಬಹುತೇಕ ಅಂತಾರಾಜ್ಯ ನದಿಗಳ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯ ಮಾಡಬೇಡಿ ಅಂತ  ನಾನು ರಾಜ್ಯಸಭೆಯಲ್ಲಿ ಕೈಮುಗಿದು ಮನವಿ ಮಾಡಿದೆ. ಯಾವ ಪಕ್ಷದವರೂ ಸಹಕಾರ ಕೊಡಲಿಲ್ಲ.  ನಮ್ಮದು ಪ್ರಾದೇಶಿಕ ಪಕ್ಷ.  ಜನರಿಗೆ ಜಾಗೃತಿ ಬಂದರೆ ಸಹಜವಾಗಿ ಒಳ್ಳೆಯ ಆಯ್ಕೆ ಮಾಡುತ್ತಾರೆ.  ಆದ್ದರಿಂದ ಜಲಧಾರೆ ಯಾತ್ರೆ ಮೂಲಕ ಜನ ಜಾಗೃತಿ ಮೂಡಿಸುತ್ತಿದ್ದೇವೆ ಎಂದು  ಬೀಚನಹಳ್ಳಿಯಲ್ಲಿ ಎಚ್.ಡಿ.ದೇವೇಗೌಡ ಹೇಳಿಕೆ ನೀಡಿದರು.


    Provided by
    Provided by

    ನೀರಿನ ವಿಚಾರ ಬಂದಾಗ ತಮಿಳುನಾಡಿನ ಎಲ್ಲ ಪಕ್ಷಗಳೂ ಒಂದಾಗುತ್ತವೆ.  ಆದರೆ ನಮ್ಮ ರಾಜ್ಯದಲ್ಲಿ ಯಾರೂ ಒಂದಾಗಲ್ಲ.  ಪಂಚ ರತ್ನ, ಮಹದಾಯಿ ಸಾಕಷ್ಟು ನೋವಿದೆ. ಜಲ ಸಂಪನ್ಮೂಲ ಸಚಿವರು ನನಗೆ ಮೂರು ಬಾರಿ ಅಪಾಯಿಂಟ್ಮೆಂಟ್ ಕೊಟ್ಟರು. ಮನೆಗೆ ಹೋದಾಗ ಚಕ್ಕರ್ ಎಂದು ಅವರು ಹೇಳಿದರು.

    ಪರ್ಸೆಂಟೇಜ್ ಚರ್ಚೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು,  ರಾಜಕಾರಣದಲ್ಲಿ ಯಾರೂ ಸತ್ಯವಂತರು ? ಅವರ ಮೇಲೆ ಇವರು, ಇವರ ಮೇಲೆ ಅವರು ಮಾತನಾಡುತ್ತಾರೆ.  ಕಾಂಗ್ರೆಸ್ ‌ನವರು ಏನೂ ಮಾಡಿಯೇ ಇಲ್ವೇ ? ಯಾರು ಸಾಚ ಇದ್ದಾರೆ ಹೇಳಿ ? ಕಾಂಗ್ರೆಸ್ ಸರ್ಕಾರ ಇದ್ದಾಗ 10 % ಸರ್ಕಾರ ಅಂತ ಪ್ರಧಾನಿಯೇ ಆರೋಪ ಮಾಡಿದ್ರು.  ಆಗಲೂ ನಾನು ಆರೋಪ ಮಾಡಲಿಲ್ಲ.   ಈಗಲೂ ಅಷ್ಟೆ ನಾನು ಯಾವುದೇ ರೀತಿಯ ಪ್ರತಿಕ್ರಿಯೆ ಕೊಡಲ್ಲ. ಭ್ರಷ್ಟಾಚಾರ ಎಲ್ಲ ಕಡೆ ತುಂಬಿ ಹೋಗಿದೆ. ರಾಜಕಾರಣ ಹೇಳಲಾಗದಷ್ಟು ಕೆಟ್ಟು ಹೋಗಿದೆ ಎಂದರು.

    ರಾಜ್ಯದಲ್ಲಿ ಜಲ ಸಂಪನ್ಮೂಲಕ್ಕೆ ಕೊರತೆ ಇಲ್ಲ.  ಅದನ್ನು ಸಮರ್ಥವಾಗಿ ಬಳಸಿಕೊಳ್ಳಲು ಬಿಜೆಪಿ- ಕಾಂಗ್ರೆಸ್ ಸಹಕಾರ ಕೊಡುತ್ತಿಲ್ಲ. ನಮ್ಮದು ಪ್ರಾದೇಶಿಕ ಪಕ್ಷ.  ಜನರಿಗೆ ಜಾಗೃತಿ ಬಂದರೆ ಸಹಜವಾಗಿ ಒಳ್ಳೆಯ ಆಯ್ಕೆ ಮಾಡುತ್ತಾರೆ.  ಆದ್ದರಿಂದ ಜಲಧಾರೆ ಯಾತ್ರೆ ಮೂಲಕ ಜನ ಜಾಗೃತಿ ಮೂಡಿಸುತ್ತಿದ್ದೇವೆ ಎಂದರು.

    ಗುತ್ತಿಗೆದಾರರ ಸಂಘದಿಂದ ಪರ್ಸೆಂಟೇಜ್ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನನಗೆ ಸಂಬಂಧವಿಲ್ಲ, ನನ್ನ ಮಗ ಪಿಡಬ್ಲ್ಯೂಡಿ ಮಿನಿಸ್ಟರ್ ಆಗಿದ್ದಾನಾ?, ನೀರಾವರಿ ಸಚಿವ ಆಗಿದ್ದಾನಾ.?. ನನ್ನ ಮಗ ಸಚಿವ ಆಗಿದ್ರೆ ಮಾತನಾಡುತ್ತಿದ್ದೆ. ಆರೋಪ‌ ಮಾಡಿಕೊಳ್ಳಲಿ ಬಿಡಿ ನಮಗೇನು.? ಎಂದು ನಿರ್ಲಕ್ಷಿಸಿದರು.

    ಬಿಜೆಪಿ ಜತೆ ಚುನಾವಣಾ ಪೂರ್ವ ಮೈತ್ರಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕೆಲವರು ಉತ್ಪ್ರೇಕ್ಷೆಯಿಂದ ಮಾತನಾಡುತ್ತಾರೆ. ಜೆಡಿಎಸ್ ಕಾರ್ಯಕ್ರಮಗಳನ್ನು ನೋಡಿ ಒಂದಲ್ಲಾ ಒಂದು ಬಣ್ಣ ಕಟ್ಟುತ್ತಾರೆ. ನಮ್ಮ ಜತೆ ಬಿಜೆಪಿಯ ಯಾರಾದರೂ ಇಲ್ಲಿಗೆ ಬಂದಿದ್ದಾರ ? ಸುಮ್ನೆ ಯಾರೋ ಏನೋ ಹೇಳ್ತಾರೆ ಹೇಳಲಿ ಬಿಡಿ. ಕಬಿನಿ ಡ್ಯಾಂ ಬಳಿ ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ಹೇಳಿಕೆ.

    ಜಲಧಾರೆ ಕುಮಾರಸ್ವಾಮಿ ಅವರ ಮೆದುಳಿನ ಕೂಸು. ಶಾಸಕರು, ಮುಖಂಡರನ್ನು ಒಗ್ಗೂಡಿಸಿ ಕಾರ್ಯಕ್ರಮ ರೂಪಿಸಿದ್ದಾರೆ. ನಾನೂ ಮೈಸೂರಿನಿಂದ ಯಾತ್ರೆ ಶುರು ಮಾಡಿದ್ದೇನೆ.  ಜನರ ಪರವಾಗಿ ನಾನೂ ಕಿಂಚಿತ್ತು ಹೋರಾಟ ಮಾಡುತ್ತಿದ್ದೇನೆ.  ಮೇ 8ರವರೆಗೆ ರಾಜ್ಯದಲ್ಲಿ ಪ್ರವಾಸ ಮಾಡುತ್ತೇನೆ. ನಮ್ಮ ಹಕ್ಕಿಗೆ ಹೋರಾಟ ಮಾಡುವಾಗ ಬೇರೊಬ್ಬರಿಗೆ ನೋವು ಮಾಡಬೇಕು ಅಂತಲ್ಲ.  ನೀರಾವರಿ ವಿಚಾರದಲ್ಲಿ ತಮಿಳರು ಮಾಡಿರುವ ಅನ್ಯಾಯವನ್ನು ಮೊದಲ ಭಾಷಣದಲ್ಲೇ ಎಳೆಎಳೆಯಾಗಿ ಬಿಚ್ಚಿಟ್ಟಿದ್ದೆ. ವಾಜಪೇಯಿ, ನರಸಿಂಹರಾವ್, ಮೋದಿ ಕಾಲದಲ್ಲಿ ಏನಾಗಿದೆ ಅಂತ ಎಲ್ಲವನ್ನೂ ಹೇಳಬಲ್ಲೆ.  ದುರದೃಷ್ಟವೆಂದರೆ ಯಾರೂ ನಮ್ಮ ಪರವಾಗಿ ಇಲ್ಲ. ವ್ಯವಸಾಯಕ್ಕೆ ಕೊಟ್ಟಿರುವ ನೀರನ್ನೇ ಕುಡಿಯುವ ನೀರಿಗೂ ಬಳಸಿಕೊಳ್ಳಬೇಕಿದೆ.  ಇದು ಒಂದು ಜಾತಿ, ಪಕ್ಷದ ಪ್ರಶ್ನೆಯಲ್ಲ.  ನಾನು ಎಲ್ಲಿವರೆಗೆ ಬದುಕಿರುತ್ತೇನೋ ಗೊತ್ತಿಲ್ಲ.  ಅಧಿಕಾರಕ್ಕಾಗಿ ದೇವೇಗೌಡರು ಹೋರಾಟ ಮಾಡಲ್ಲ. ನನ್ನ ಜೀವಿತಾವಧಿಯಲ್ಲಿ ನನ್ನ ಹೋರಾಟಕ್ಕೆ ಫಲ ಸಿಕ್ಕಿಲ್ಲ ಎನ್ನುವ ನೋವಿದೆ. ಸೇಲಂ ಜಿಲ್ಲೆಯಲ್ಲಿ ಅತ್ಯಂತ ಆಳದಿಂದ ನೀರು ಎತ್ತಿ ಕುಡಿಯುವ ನೀರು ಕೊಡುತ್ತಾರೆ.  ಹೀಗೆ ಬಳಸಿಕೊಳ್ಳಲು ಅವಕಾಶ ಇಲ್ಲ.  ಆದರೆ ಪ್ರಧಾನಿ ಮೋದಿ ಅವರೇ ಆ ಯೋಜನೆಗೆ ಅನುದಾನ ಕೊಟ್ಟಿದ್ದಾರೆ ಎಂದು ಅವರು ಹೇಳಿದರು.

    ಎಂಎಲ್‌ ಎ ಎಂ.ಅಶ್ವಿನ್ ಕುಮಾರ್, ಎಂಎಲ್‌ ಸಿ ಸಿ.ಎನ್. ಮಂಜೇಗೌಡ, ಮಾಜಿ ಶಾಸಕರಾದ ಟಿ.ಬಿ.ಚಿಕ್ಕಣ್ಣ, ಶರವಣ ಯುವ ನಾಯಕ ಜಯಪ್ರಕಾಶ್ ಸೇರಿ ಸ್ಥಳಿಯ ಮುಖಂಡರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

    ವರದಿ:  ಚಂದ್ರ ಹಾದನೂರು


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

    admin
    • Website

    Related Posts

    ಸಾಗರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ: ಅಧ್ಯಕ್ಷರಾಗಿ ರತ್ನಮ್ಮ ಶಿವರಾಜು, ಉಪಾಧ್ಯಕ್ಷರಾಗಿ ಪುಟ್ಟಸಿದ್ದಯ್ಯ ಅವಿರೋಧ ಆಯ್ಕೆ

    March 7, 2026

    ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಿ: ಡಿಎಲ್‌ ಆರ್‌ ಸಿ–ಡಿಸಿಸಿ ಸಭೆಯಲ್ಲಿ ಸಂಸದ ಈ.ತುಕಾರಾಮ್ ತಾಕೀತು

    March 6, 2026

    ಮಾಧ್ಯಮಗಳು ಅವಕಾಶ ವಂಚಿತ ಸಮುದಾಯಗಳ ಧ್ವನಿಯಾಗಬೇಕು: ಪ್ರೊ.ಬಿ.ಕೆ.ರವಿ

    March 6, 2026

    Leave A Reply Cancel Reply

    Our Picks

    ಇಸ್ರೇಲ್–ಇರಾನ್ ಸಂಘರ್ಷ: ದುಬೈನಲ್ಲಿರುವ ಕನ್ನಡಿಗರ ನೆರವಿಗೆ ಸಹಾಯವಾಣಿ ಆರಂಭ

    March 3, 2026

    ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್‌ಪೋ 2026: ಆಲೋಚನೆ ಮತ್ತು ನಾವೀನ್ಯತೆಗಳ ಪ್ರಬಲ ಸಂಗಮ ಎಂದ ಪ್ರಧಾನಿ ಮೋದಿ

    February 17, 2026

    ಬಿಹಾರದಲ್ಲಿ ತುಮಕೂರು ಮೂಲದ ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು: ಪ್ರವಾಸಕ್ಕೆ ಹೋದವರು ಹೆಣವಾಗಿ ಮರಳಿದರು!

    February 7, 2026

    ಬೆಂಗಳೂರು–ಹೈದರಾಬಾದ್ ಹೈಸ್ಪೀಡ್ ರೈಲು ಬೀದರ್ ವರೆಗೆ ವಿಸ್ತರಿಸಿ: ರೈಲ್ವೆ ಸಚಿವರಿಗೆ ದೇವೇಗೌಡರ ಮನವಿ

    February 6, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ತುಮಕೂರು: ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಮಾದಿಗ ಸಮುದಾಯದಿಂದ ಪ್ರತಿಭಟನೆ

    March 7, 2026

    ತುಮಕೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿಯನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ, ಒಳಮೀಸಲಾತಿ ಹೋರಾಟ ಸಮಿತಿ…

    ನಿರ್ವಹಣೆ ಕೊರತೆ: ಕೇವಲ 15 ವರ್ಷದಲ್ಲೇ ಶಿಥಿಲಾವಸ್ಥೆ ತಲುಪಿದ ಕೊರಟಗೆರೆ ಮಿನಿ ವಿಧಾನಸೌಧ

    March 7, 2026

    ರಾಜ್ಯ ಬಜೆಟ್ 2026: ತುಮಕೂರು ಜಿಲ್ಲೆಗೆ ತೀವ್ರ ನಿರಾಸೆ; ‘ಗ್ರೇಟರ್ ತುಮಕೂರು’ ಕನಸು ಭಗ್ನ

    March 7, 2026

    ನಿರುದ್ಯೋಗಿಗಳಿಗೆ ಸುವರ್ಣಾವಕಾಶ: ತುಮಕೂರಿನಲ್ಲಿ ಮಾ.11ಕ್ಕೆ ಬೃಹತ್ ನೇರ ಸಂದರ್ಶನ

    March 7, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.