ಹೆಚ್.ಡಿ.ಕೋಟೆ: ತಾಲ್ಲೂಕಿನ ಮೇಟಿಕುಪ್ಪೆ ಗ್ರಾಮದ ಕಾಂತರಾಜು ಆಚಾರಿ ಎಂಬುವವರ ಉಳುಮೆ ಮಾಡುವ ಎತ್ತನ್ನು ಹುಲಿ ದಾಳಿ ಮಾಡಿ ಬಲಿ ಪಡೆದಿರುವ ಘಟನೆ ನಡೆದಿದೆ.
ಬೆಳಿಗ್ಗೆ ಬೆಳಿಗ್ಗೆ ಜನೀನಿನಲ್ಲಿ ಕಟ್ಟಲಾಗಿದ್ದ ಎತ್ತಿನ ಮೇಲೆ ಹುಲಿಯು ಬೇಟೆಯಾಡಿದೆ, ಇದನ್ನು ಕಂಡು ಜಮೀನಿನಲ್ಲಿದ್ದ ಎಲ್ಲರೂ ಗಾಬರಿಗೊಂಡಿದ್ದಾರೆ.
ಘಟನೆಯಿಂದ ಭೀತರಾದ ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳು ತಕ್ಷಣ ಹುಲಿಯನ್ನು ತಕ್ಷಣ ಸೆರೆಹಿಡಿದು ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಹುಲಿ ಸೆರೆ ಕಾರ್ಯಾಚರಣೆಯನ್ನು ತಕ್ಷಣವೇ ಕೈಗೆತ್ತಿಕೊಳ್ಳಬೇಕು ಇಲ್ಲವಾದರೆ ಮನುಷ್ಯರ ಮೇಲೆ ಹುಲಿ ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಗ್ರಾಮದಲ್ಲಿ ಪ್ರತಿ ನಿತ್ಯವೂ ಜಾನುವಾರುಗಳ ಬಲಿ ನಡೆಯುತ್ತದೆ, ಆದರೆ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳದೇ ಕಣ್ಣು ಮುಚ್ಚಿ ಕುಳಿತಿದೆ ಎಂದು ವಕೀಲರಾದ ರಾಜಚಾರಿ ಆರೋಪಿಸಿದ್ದಾರೆ.
ಹುಲಿ ಕಾಡಿನಿಂದ ಹೊರ ಬರುತ್ತಿರುವ ಬಗ್ಗೆ ಮಾಹಿತಿ ದೊರೆತಿದೆ, ಈಗಾಗಲೇ ಜಾನುವಾರುಗಳ ಬಲಿಯಾಗಿರುವ ಹಿನ್ನೆಲೆಯಲ್ಲಿ ಅಲ್ಲಲ್ಲಿ ಕ್ಯಾಮರಾ ಟ್ರಾಪ್ ಅಳವಡಿಸಲಾಗಿದೆ. ತಕ್ಷಣವೇ ಬೋನು ಅಥವಾ ಯಾವ ರೀತಿ ಸೆರೆಹಿಡಿಯಬೇಕು ಎಂಬ ಬಗ್ಗೆ ಮೇಲಧಿಕಾರಿಗಳಿಂದ ಅನುಮತಿ ಪಡೆದು ಕ್ರಮ ಕೈಗೊಳ್ಳಲಾಗುವುದು.
-ಸಿದ್ದರಾಜು, ವಲಯ ಅರಣ್ಯಾಧಿಕಾರಿ ಮೇಟಿಕುಪ್ಪೆ.
ಹೆಚ್.ಡಿ.ಕೋಟೆ ತಾಲ್ಲೂಕಿನ ಮೇಟಿಕುಪ್ಪೆ ಗ್ರಾಮದ ಕಾಂತರಾಜು ಆಚಾರಿ ಎಂಬುವವರ ಉಳುಮೆ ಮಾಡುವ ಎತ್ತನ್ನು ಹುಲಿ ದಾಳಿ ಮಾಡಿ ಬಲಿ ಪಡೆದಿವುದು.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5


