nammatumakuru

    Subscribe to Updates

    Get the latest creative news from FooBar about art, design and business.

    What's Hot

    ಕೊರಟಗೆರೆ: ವಿದ್ಯುತ್ ಖಾಸಗೀಕರಣ ವಿರೋಧಿಸಿ ಬೆಸ್ಕಾಂ ನೌಕರರಿಂದ ಬೃಹತ್ ಪ್ರತಿಭಟನೆ

    June 13, 2026

    ತುಮಕೂರು: ಕವಿ ಡಾ. ಸಿದ್ದಲಿಂಗಯ್ಯ ಪುಣ್ಯಸ್ಮರಣೆ ಹಾಗೂ ಪ್ರೊ. ಬಿ. ಕೃಷ್ಣಪ್ಪ ಜನ್ಮದಿನಾಚರಣೆ

    June 13, 2026

    ಮಂತ್ರಾಲಯದಲ್ಲಿ ಜೂನ್ 26ಕ್ಕೆ “ರಾಯರ ದರ್ಶನ” ಆಲ್ಬಮ್ ಬಿಡುಗಡೆ: ಕಾಡು ಸಿದ್ದೇಶ್ವರ ಮಠದ ಶ್ರೀಗಳಿಗೆ ಆಹ್ವಾನ

    June 12, 2026
    Facebook Twitter Instagram
    ಟ್ರೆಂಡಿಂಗ್
    • ಕೊರಟಗೆರೆ: ವಿದ್ಯುತ್ ಖಾಸಗೀಕರಣ ವಿರೋಧಿಸಿ ಬೆಸ್ಕಾಂ ನೌಕರರಿಂದ ಬೃಹತ್ ಪ್ರತಿಭಟನೆ
    • ತುಮಕೂರು: ಕವಿ ಡಾ. ಸಿದ್ದಲಿಂಗಯ್ಯ ಪುಣ್ಯಸ್ಮರಣೆ ಹಾಗೂ ಪ್ರೊ. ಬಿ. ಕೃಷ್ಣಪ್ಪ ಜನ್ಮದಿನಾಚರಣೆ
    • ಮಂತ್ರಾಲಯದಲ್ಲಿ ಜೂನ್ 26ಕ್ಕೆ “ರಾಯರ ದರ್ಶನ” ಆಲ್ಬಮ್ ಬಿಡುಗಡೆ: ಕಾಡು ಸಿದ್ದೇಶ್ವರ ಮಠದ ಶ್ರೀಗಳಿಗೆ ಆಹ್ವಾನ
    • ಲೋಕಾಯುಕ್ತರಿಂದ 56 ಜನರ ಅಹವಾಲು ಸ್ವೀಕಾರ:  ಜಮೀನು ಖಾಸಗಿ ವ್ಯಾಜ್ಯಗಳೇ ಹೆಚ್ಚು.. ಪಡಿತರ ಕಾರ್ಡಿನ ಮಾಹಿತಿಯೇ ನೀಡಲ್ವಂತೆ!
    • ಪಾವಗಡ: ನಿಯಮ ಉಲ್ಲಂಘನೆ, ವೆಂಕಟೇಶ್ವರ ಕಲ್ಲುಗಣಿ ಗುತ್ತಿಗೆ ರದ್ದುಪಡಿಸಿ ಇಲಾಖೆ ಖಡಕ್ ಆದೇಶ! | ಶಾಸಕ ವೆಂಕಟೇಶ್ ವಿರುದ್ಧ ಎಫ್‌ ಐಆರ್ ದಾಖಲಿಸಲು ಒತ್ತಾಯ
    • ಜುಲೈ 15ರಂದು ಎಲ್ಲಾ ರೈತಪರ ಸಂಘಟನೆಗಳು, ಮುಖಂಡರೊಂದಿಗೆ ಹೇಮಾವತಿ ನಾಲಾ ವೀಕ್ಷಣೆ: ಶಾಸಕ ಸಿ.ಬಿ. ಸುರೇಶ್‌ ಬಾಬು ಕರೆ
    • ಪಾವಗಡ: ಸಕಾಲಕ್ಕೆ ಸಿಗದ ಚಿಕಿತ್ಸೆ; ಹಾವು ಕಚ್ಚಿ ಬಿ.ಫಾರ್ಮಸಿ ವಿದ್ಯಾರ್ಥಿ ದುರ್ಮರಣ
    • ಐದು ಕೋಟಿ ವೆಚ್ಚದ ಅಭಿವೃದ್ದಿ ಕಾಮಗಾರಿಗಳಿಗೆ ಶಾಸಕ ಡಾ.ಎಚ್.ಡಿ.ರಂಗನಾಥ್ ಗುದ್ದಲಿ ಪೂಜೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ವೀರಶೈವ ಲಿಂಗಾಯತ ರಾಜಕೀಯದ ಹಿಂದಿನ ಮರ್ಮವೇನು?
    ಲೇಖನ May 20, 2022

    ವೀರಶೈವ ಲಿಂಗಾಯತ ರಾಜಕೀಯದ ಹಿಂದಿನ ಮರ್ಮವೇನು?

    By adminMay 20, 2022No Comments2 Mins Read
    vaddagere nagarajaiha
    • ಡಾ.ವಡ್ಡಗೆರೆ ನಾಗರಾಜಯ್ಯ

     “ವೀರಶೈವ– ಲಿಂಗಾಯತರು” ಎಂದು ವಿಚಿತ್ರ ಜಾತಿಯ ಹೆಸರನ್ನು ಘೋಷಿಸುವ ವಿದ್ಯಮಾನ ಸಂಭವಿಸಿರುವುದು ನನ್ನಲ್ಲಿ ಆಶ್ಚರ್ಯವನ್ನುಂಟುಮಾಡಿದೆ. ಇಂತಹ ಜಾತಿ ಹಿಂದೆಂದೂ ಅಸ್ತಿತ್ವದಲ್ಲಿ ಇರಲಿಲ್ಲ. ಈಗಲೂ ಅಸ್ತಿತ್ವದಲ್ಲಿರದ “ವೀರಶೈವ ಲಿಂಗಾಯತ” ಎಂಬ ಹೆಸರಿನ ಹೊಸ ಜಾತಿಯನ್ನು ಏಕೆ ಘೋಷಿಸಿಕೊಂಡರೋ ತಿಳಿಯದು. ಹೀಗೊಂದು ಹೊಸ ಜಾತಿ ಹುಟ್ಟು ಪಡೆಯಲು ಸಾಧ್ಯವೇ? ಲಿಂಗಾಯತರೇ ಬೇರೆ, ವೀರಶೈವರೇ ಬೇರೆ. ಇಬ್ಬರೂ ಒಬ್ಬರೇ ಹೇಗಾಲು ಸಾಧ್ಯ?

     ಲಿಂಗಾಯತ ಧರ್ಮವನ್ನು ಸಾಂಸ್ಥೀಕರಣಗೊಳಿಸಿ ಜಾತಿಯ ಹಂತಕ್ಕೆ ಕುಗ್ಗಿಸಿದ್ದು ವೀರಶೈವರು. ಲಿಂಗಾಯತ ಎಂಬ ಪದ ಬಸವಣ್ಣನಿಗೂ ಪೂರ್ವದ್ದು. ಲಿಂಗಾಯತವನ್ನು ಧರ್ಮವನ್ನಾಗಿ ಸ್ಥಾಪಿಸಿದ್ದು, ಬೆಳಗಿದ್ದು ಮತ್ತು ಬೆಳೆಸಿದ್ದು ಮಾತ್ರ ಬಸವಣ್ಣ. ಕನ್ನಡಿಗರೇ ರೂಪಿಸಿದ ಲಿಂಗಾಯತ ಧರ್ಮಕ್ಕೆ ಹೊರಗಿನ ಆಂಧ್ರಪ್ರದೇಶ ಮೂಲದಿಂದ ಬಂದ ತೆಲುಗುಬಾಳು ಆರಾಧ್ಯ ಜಂಗಮರು, ಸಂಸ್ಕೃತ ಭಾಷೆ– ಪಂಚಾಂಗ– ಜ್ಯೋತಿಷ್ಯ– ಸಂಸ್ಕೃತ ಭಾಷೆಯ  ‘ಶಿದ್ಧಾಂತ ಶಿಖಾಮಣಿ‘ ಕೃತಿ ಮುಂತಾದವುಗಳನ್ನು ಹೇರುವ ಮೂಲಕ ಲಿಂಗಾಯತವನ್ನು ಸ್ವತಂತ್ರ ಧರ್ಮವಾಗದಂತೆ ನೋಡಿಕೊಂಡರು.


    Provided by
    Provided by

    ವೀರಶೈವರು ಬಸವಣ್ಣನನ್ನು ಗುರುವೆಂದು ಎಂದಿಗೂ ಒಪ್ಪಿದವರಲ್ಲ. ತೀರಾ ಇತ್ತೀಚಿನವರೆಗೂ ವೀರಶೈವ ಪಂಚಾಚಾರ್ಯರ ಮನೆಗಳಲ್ಲಾಗಲೀ, ಮಠಗಳಲ್ಲಾಗಲೀ ಬಸವಣ್ಣನ ಫೋಟೋ ಕೂಡಾ  ಇರಿಸಿಕೊಂಡವರಲ್ಲ. ಅವರಿಗೆ ಬಸವಣ್ಣನಿಗಿಂತಲೂ ರೇಣುಕಾಚಾರ್ಯನೇ ಪರಮ ಶ್ರೇಷ್ಠ ಗುರು. ಈಗಲೂ ಲಿಂಗಾಯತರ ಪ್ರತ್ಯೇಕ ಧರ್ಮದ ಗುರುತಿನ ಹೋರಾಟಕ್ಕೆ ದೊಡ್ಡ ಅಡ್ಡಿಯಾಗಿರುವವರೆಂದರೆ ಇದೇ ಪಂಚಾಚಾರ್ಯರ ವೀರಶೈವರು.

     ಕೆಲವೇ ಖೊಟ್ಟಿ ಪ್ರಕ್ಷಿಪ್ತ ವಚನಗಳನ್ನು ಹೊರತುಪಡಿಸಿದರೆ, ವೀರಶೈವ ಎಂಬ ಶಬ್ದವು ನಮಗೆ ತಿಳಿಯುವುದು ಹದಿನಾಲ್ಕನೇ ಶತಮಾನದಿಂದೀಚೆಗೆ. ವೀರಶೈವವು ಲಿಂಗಾಯತ ಧರ್ಮವನ್ನು ಖಿಲಗೊಳಿಸಿದ್ದು ಈ ಬಗೆಯಲ್ಲಿ. ಲಿಂಗಾಯತರಿಗೆ ಕನ್ನಡದ ವಚನಗಳು ಶ್ರೇಷ್ಢವಾದರೆ, ವೀರಶೈವರಿಗೆ ಸಂಸ್ಕೃತದ ಶಿದ್ಧಾಂತ ಶಿಖಾಮಣಿಯೇ ಶ್ರೇಷ್ಠ ಗ್ರಂಥ. ಲಿಂಗಾಯತರಿಗೆ ಬಹುತ್ವದ ಮತ್ತು ನಿಜ ಹುಟ್ಟಿನ ಶರಣರು ಶ್ರೇಷ್ಢರಾದರೆ, ವೀರಶೈವರಿಗೆ ಅಯೋನಿಜ ಮತ್ತು ಪುರಾಣಿಮ ಪಂಚಾಚಾರ್ಯರು ಮಾತ್ರ ಶ್ರೇಷ್ಠ. ಇದನ್ನು ನಾವು ಅರ್ಥಮಾಡಿಕೊಂಡು ಕೇಳಬೇಕಿರುವ ಅಸಲಿ ಪ್ರಶ್ನೆ : ಯಾವತ್ತಿಗೂ ಅಸ್ತಿತ್ವದಲ್ಲಿರದಿದ್ದ

    “ವೀರಶೈವ ಲಿಂಗಾಯತ” ಎಂಬ ಹೆಸರಿನ ಹೊಸ ಜಾತಿಯನ್ನು ಹುಟ್ಟಿ ಹಾಕಿರುವ ರಾಜಕೀಯದ ಹಿಂದಿನ ಮರ್ಮವೇನು?


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

    admin
    • Website

    Related Posts

    ಮೂರ್ಖರು ಯಾರು? | ರಚನೆ: ವೇಣುಗೋಪಾಲ್, ತುಮಕೂರು

    May 27, 2026

    ದಿಢೀರ್ ಹವಾಮಾನ ಬದಲಾವಣೆಗೆ AI ಡೇಟಾ ಸೆಂಟರ್‌ ಕಾರಣ ಆಗ್ತಾ ಇದೆಯೇ?

    May 25, 2026

    “ರಕ್ಕಿ” ಚಿತ್ರದ ಮೊದಲ ಹಾಡು “ರಗಡೋ ರಕ್ಕಿ” ಬಿಡುಗಡೆ | ನಾಯಕನ ಹೆಸರೆ ಸಿನಿಮಾ ಶೀರ್ಷಿಕೆಯಾಗಿರುವುದು ವಿಶೇಷ

    May 19, 2026

    Leave A Reply Cancel Reply

    Our Picks

    ಮಗಳ ಗಂಡನನ್ನೇ ವರಿಸಿದ ಅತ್ತೆ: ಕದ್ದುಮುಚ್ಚಿ ಶುರುವಾದ ಪ್ರೀತಿಗೆ ಬಿತ್ತು ಮದುವೆ ಮುದ್ರೆ!

    June 8, 2026

    ಪೈಲ್ವಾನ್ ಜೊತೆ ಕುಸ್ತಿಯಾಡು ಎಂದು ಹೆಂಡತಿಯನ್ನೇ ಮುಂದೆ ಬಿಟ್ಟ ಖ್ಯಾತ ನಟ: ಮುಂದೇನಾಯ್ತು?

    June 8, 2026

    ಪತ್ನಿಗೆ ರಾಜ್ಯಸಭಾ ಆಫರ್ ನಿರಾಕರಿಸಿದ ಸಿದ್ದರಾಮಯ್ಯ; 3 ಡಿಸಿಎಂ ಹುದ್ದೆಗಾಗಿ ಪಟ್ಟು!

    June 1, 2026

    ದ್ವೇಷ ಭಾಷಣ ಮಸೂದೆಗೆ ಕೇಂದ್ರ ಗೃಹ ಸಚಿವಾಲಯ ಬ್ರೇಕ್: ಕರ್ನಾಟಕ ಸರ್ಕಾರಕ್ಕೆ ಭಾರಿ ಹಿನ್ನಡೆ!

    May 26, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಕೊರಟಗೆರೆ

    ಕೊರಟಗೆರೆ: ವಿದ್ಯುತ್ ಖಾಸಗೀಕರಣ ವಿರೋಧಿಸಿ ಬೆಸ್ಕಾಂ ನೌಕರರಿಂದ ಬೃಹತ್ ಪ್ರತಿಭಟನೆ

    June 13, 2026

    ಕೊರಟಗೆರೆ: ರಾಜ್ಯದಲ್ಲಿ ವಿದ್ಯುತ್ ವಿತರಣಾ ಚಟುವಟಿಕೆಗಳನ್ನು ನಡೆಸಲು ಟಾಟಾ ಪವರ್ ಸೇರಿದಂತೆ ಯಾವುದೇ ಖಾಸಗಿ ಕಂಪನಿಗಳಿಗೆ ಅನುಮತಿ ನೀಡಬಾರದು ಎಂದು…

    ತುಮಕೂರು: ಕವಿ ಡಾ. ಸಿದ್ದಲಿಂಗಯ್ಯ ಪುಣ್ಯಸ್ಮರಣೆ ಹಾಗೂ ಪ್ರೊ. ಬಿ. ಕೃಷ್ಣಪ್ಪ ಜನ್ಮದಿನಾಚರಣೆ

    June 13, 2026

    ಮಂತ್ರಾಲಯದಲ್ಲಿ ಜೂನ್ 26ಕ್ಕೆ “ರಾಯರ ದರ್ಶನ” ಆಲ್ಬಮ್ ಬಿಡುಗಡೆ: ಕಾಡು ಸಿದ್ದೇಶ್ವರ ಮಠದ ಶ್ರೀಗಳಿಗೆ ಆಹ್ವಾನ

    June 12, 2026

    ಲೋಕಾಯುಕ್ತರಿಂದ 56 ಜನರ ಅಹವಾಲು ಸ್ವೀಕಾರ:  ಜಮೀನು ಖಾಸಗಿ ವ್ಯಾಜ್ಯಗಳೇ ಹೆಚ್ಚು.. ಪಡಿತರ ಕಾರ್ಡಿನ ಮಾಹಿತಿಯೇ ನೀಡಲ್ವಂತೆ!

    June 12, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.