ಬೆಂಗಳೂರು: ಶಾಲಾ ಹಾಗೂ ಕಾಲೇಜು ಪಠ್ಯ ಪುಸ್ತಕ ಪರಿಷ್ಕರಣೆ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಚಿವ ಬಿ.ಸಿ.ನಾಗೇಶ್, ನಮ್ಮ ಸರ್ಕಾರದ ಕೆಲಸಗಳನ್ನು ಸಹಿಸಿಕೊಳ್ಳದೇ ಅನಾವಶ್ಯಕವಾಗಿ ಸುಳ್ಳು ಪ್ರಚಾರ ಮಾಡಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ಗೆ ಟಾಂಗ್ ನೀಡಿದ್ದಾರೆ.
ದ್ವಿತೀಯ ಪಿಯುಸಿ ಇತಿಹಾಸ ಪಠ್ಯ ಪುಸ್ತಕ ಪರಿಷ್ಕರಣೆಯನ್ನು ರೋಹಿತ್ ಚಕ್ರತೀರ್ಥ ಸಮಿತಿಗೆ ವಹಿಸಿರುವ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸುದ್ದಿಗೋಷ್ಠಿ ಕರೆದು ಸ್ಪಷ್ಟನೆ ನೀಡಿದರು.
ಕಳೆದ ವರ್ಷ ಹಲವರು ಕಾರಣಗಳಿಂದ ಶಾಲೆ ಆರಂಭವಾಗಲ್ಲ ಎಂದಿದ್ದರು. ಶಾಲೆ ಪ್ರಾರಂಭ ಎಂದಾಗಲೂ ಕೋವಿಡ್ ನೆಪ ಹೇಳಿದ್ದರು. ಬಡವರ ಪ್ರಾಣದ ಜತೆ ಚೆಲ್ಲಾಟ ಎಂದಿದ್ದರು. ಶಾಲೆಯಲ್ಲಿನ ಬಡ ವಿದ್ಯಾರ್ಥಿಗಳ ವ್ಯಾಸಂಗ ಗಮನಿಸಿ ಸರ್ಕಾರ ಶಾಲೆ ಪ್ರಾರಂಭಿಸಿತು. ಹಿಜಾಬ್ ವಿಚಾರದಲ್ಲಿ ತಗಾದೆ ತೆಗೆದರು. ಅದು ಸರಿಯಾಗಲಿಲ್ಲ. ಕೋರ್ಟ್ ಆದೇಶ ಬಂದಾಗ ಅದನ್ನೂ ಸಹಿಸಲಿಲ್ಲ. ಬೊಮ್ಮಾಯಿ ಸರ್ಕಾರದ ಕೆಲಸಗಳನ್ನು ಸಹಿಸದೇ ವಿರೋಧ ಪಕ್ಷದವರು ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5