ಭೋಪಾಲ್: ಹೊಟೇಲ್ ನಲ್ಲಿ ಬಾಲಕಿಗೆ ತಾಳಿ ಕಟ್ಟಿ, ಬಳಿಕ ಅದೇ ಕೊಠಡಿಯಲ್ಲಿ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಘಟನೆ ಭೋಪಾಲ್ ನಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ಸಂಬಂಧ ಪ್ರತಿಕ್ರಿಯಿಸಿರುವ ಹನುಮಗಂಜ್ ಪೊಲೀಸರು, ಬಾಲಕಿ 9ನೇ ತರಗತಿಯ ವಿದ್ಯಾರ್ಥಿನಿ. ಆಕೆಯನ್ನು ಹೋಟೆಲ್ ಗೆ ಕರೆತರುವಾಗ ಆ ವ್ಯಕ್ತಿ ಆಕೆಯ ಹಣೆಗೆ ಸಿಂಧೂರ ಇಟ್ಟು ಕರೆತಂದಿದ್ದ. ಹೋಟೆಲ್ ಕೊಠಡಿಯಲ್ಲಿ ಸಾಂಕೇತಿಕ ವಿವಾಹವಾದ ಬಳಿಕ, ದೈಹಿಕ ಸಂಬಂಧ ಬೆಳೆಸಿದ್ದ. ಇದಾಗಿ ಕೆಲ ದಿನಗಳ ಅವಧಿಯಲ್ಲಿ ಮತ್ತೆ ಎರಡು ಬಾರಿ ದೈಹಿಕ ಸಂಪರ್ಕ ಮಾಡಿದ್ದ ಎಂದು ತಿಳಿಸಿದ್ದಾರೆ.
ಇನ್ನು ತಾನೂ ಸಾಂಕೇತಿಕ ವಿವಾಹವಾಗಿರುವ ವಿಚಾರ ಬಾಲಕಿ ತನ್ನ ಮನೆಯವರಿಗೆ ಕೆಲ ದಿನಗಳ ಬಳಿಕ ತಿಳಿಸಿದ್ದಳು. ಕೂಡಲೇ ಅವರು ಯುವಕನ ಮನೆಯವರನ್ನು ಸಂಪರ್ಕಿಸಿದ್ದರು. ಆದರೆ, ಅವರು ಆಕೆಯನ್ನು ಸೊಸೆಯನ್ನಾಗಿ ಸ್ವೀಕರಿಸಲು ನಿರಾಕರಿಸಿದರು. ಹೀಗಾಗಿ ಯುವಕ ಕೂಡ ಬಾಲಕಿ ಜತೆಗಿನ ಸಂಪರ್ಕ ಕಡಿದುಕೊಂಡಿದ್ದಾನೆ. ಇದರಿಂದಾಗಿ ಬಾಲಕಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5