ಮೈಸೂರು: ಮಹಿಳೆಯೊಬ್ಬಳು ಬಸ್ ನಿಲ್ದಾನದಲ್ಲಿ ಯುವಕನ ಕೈಗೆ ಮಗು ಕೊಟ್ಟು ನಾಪತ್ತೆಯಾದ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.
ಕಳೆದ 15 ದಿನಗಳ ಹಿಂದೆ ರಾಯಚೂರು ಬಸ್ ನಿಲ್ದಾಣದಲ್ಲಿ ಅಪರಿಚಿತ ಮಹಿಳೆಯೊಬ್ಬರು ತನ್ನ ಕೈಗೆ ಗಂಡು ಮಗು ಕೊಟ್ಟು ಪರಾರಿ ಆಗಿದ್ದಾರೆ ಎಂದು ಎಚ್. ಕೋಟೆಯ ಯುವಕ ರಘು ಕಥೆಕಟ್ಟಿದ್ದು,ನಂತರ ಆ ಮಗುವನ್ನು ಮೈಸೂರಿನ ಲಷ್ಕರ್ ಠಾಣೆಯ ಪೊಲೀಸರಿಗೆ ಒಪ್ಪಿಸಿದ್ದ.
ಪ್ರಕರಣ ದಾಖಲಿಸಿದ ಪೋಲಿಸರು ತನಿಖೆ ಆರಂಭಿಸಿದ್ದು ಪೊಲೀಸರಿಗೆ ಆ ಮಗುವನ್ನು ತಂದುಕೊಟ್ಟಿದ್ದ ರಘು ಹಾಗೂ ಆ ಮಗುವಿನ ತಾಯಿಯ ನಿಜವಾದ ಸಂಬಂಧವನ್ನು ಕಂಡುಹಿಡಿದಿದ್ದಾರೆ.
ಮಗುವಿನ ತಾಯಿಗೆ ರಘು ಇನ್ಸ್ಟಾಗ್ರಾಮ್‌ನಲ್ಲಿ ಪರಿಚಯವಾಗಿದ್ದು, ಕಳೆದ ಒಂದೂವರೆ ವರ್ಷದಿಂದ ಆತನಿಗೆ ಆ ಮಹಿಳೆಯೊಂದಿಗೆ ಒಡನಾಟ ಹೊಂದಿದ್ದನು. ಇದು ಮಹಿಳೆಯ ಗಂಡನಿಗೂ ಕೂಡ ತಿಳಿದಿತ್ತು.
ಇವರಿಬ್ಬರ ಪ್ರೀತಿಗೆ ಮಗು ಅಡ್ಡಿಯಾಗುತ್ತದೆ ಎಂದು ಮಗುವನ್ನು ದೂರ ಮಾಡುವ ಯೋಜನೆ ಮಾಡಿದ ರಘು ಕಥೆಯನ್ನು ಸೃಷ್ಟಿಸಿದ್ದ.ಆದರೆ ಈತನ ನಡೆಯಿಂದ ಅನುಮಾನಗೊಂಡ ಪೊಲೀಸರು, ಮಗುವಿನ ತಂದೆಯನ್ನು ಪತ್ತೆ ಮಾಡಿ ವಿಚಾರಿಸಿದಾಗ ಇವರಿಬ್ಬರ ಸಂಬಂಧ, ನಾಟಕ ಬಯಲಾಗಿದೆ. ಬಳಿಕ ಇಬ್ಬರನ್ನು ಲಷ್ಕರ್ ಠಾಣೆ ಪೊಲೀಸರು ಬಂಧಿಸಿದ್ದು, ಮಗುವನ್ನು ಪುನರ್ವಸತಿ ಕೇಂದ್ರದಲ್ಲಿ ಇರಿಸಲಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB