ಅತಿವೇಗವಾಗಿ ಹೋಗುತ್ತಿದ್ದ ಸ್ಪೋರ್ಟ್ ಬೈಕ್ ಮರಕ್ಕೆ ಡಿಕ್ಕಿ ಹೊಡೆದು ಪ್ರೆಸ್ಟೀಜ್ ಕಂಪನಿಯ ಉದ್ಯೋಗಿಯಾಗಿದ್ದ ನಿವೃತ್ತ ಎಸ್ ಪಿ ಗುರುಪ್ರಸಾದ್ ಪುತ್ರ ಹಾಗೂ ಆತನ ಗೆಳತಿ ಇಬ್ಬರು ಸಾವನ್ನಪ್ಪಿದ ದಾರುಣ ಘಟನೆ ನಗರದ ಹೊರವಲಯದ ಸರ್ಜಾಪುರದಲ್ಲಿ ಇಂದು ನಸುಕಿನಲ್ಲಿ ನಡೆದಿದೆ.
ಪ್ರೆಸ್ಟೀಜ್ ಕಂಪನಿಯ ಉದ್ಯೋಗಿಗಳಾದ ಮಾರತ್ ಹಳ್ಳಿಯ ಗಗನ್ ದೀಪ್ ಹಾಗೂ ಆತನ ಗೆಳತಿ ವೈಟ್ ಫೀಲ್ಡ್ ನ ಹೊಂಗಸಂದ್ರದ ಯಶಸ್ವಿನಿಮೃತ ದುರ್ದೈವಿಗಳು.
ಸಿಬಿಐನಲ್ಲಿ ಎಸ್ ಪಿಯಾಗಿದ್ದ ನಿವೃತ್ತರಾಗಿದ್ದ ಗುರುಪ್ರಸಾದ್ ಅವರ ಪುತ್ರರಾಗಿದ್ದ ಗಗನ್ ದೀಪ್ ಹಾಗೂ ಆತನ ಗೆಳತಿ ಇಬ್ಬರು ಸರ್ಜಾಪುರದ ಪ್ರೆಸ್ಟೀಜ್ ಕಂಪನಿಯ ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು.ರಾತ್ರಿ ಪಾಳೆಯಲ್ಲಿ ಕೆಲಸ ಮುಗಿಸಿದ ಇವರಿಬ್ಬರೂ ಮುಂಜಾನೆ ೨.೩೦ರ ವೇಳೆ ಕೆಲಸ ಮುಗಿಸಿಕೊಂಡು ಮನೆಗೆ ಡುಕಾಟಿ ಸ್ಪೋರ್ಟ್ ಬೈಕ್ ನಲ್ಲಿ ವೇಗವಾಗಿ ಹೋಗುತ್ತಿದ್ದರು.
ಮಾರ್ಗ ಮಧ್ಯದ ರಸ್ತೆ ತಿರುವಿನಲ್ಲಿ ಗಗನ್ ದೀಪ್ ಅವರಿಗೆ ನಿಯಂತ್ರಣಕ್ಕೆ ಸಿಗದ ಬೈಕ್, ಮರಕ್ಕೆ ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿದ ಸರ್ಜಾಪುರ ಠಾಣೆ ಸಬ್ ಇನ್ಸ್‌ಪೆಕ್ಟರ್ ಹರೀಶ್ ಅವರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
ವರದಿ ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB


