ಚಿತ್ರದುರ್ಗ: ತಾಲೂಕಿನ ಗುಡ್ಡದ ರಂಗವ್ವನಹಳ್ಳಿಯ ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ, ಕೊರೋನಾ ಲಸಿಕೆ ನೀಡಲಾಯಿತು.
ಇದೇ ಸಂದರ್ಭದಲ್ಲಿ ಮಾತನಾಡಿದ ಆರೋಗ್ಯ ಸುರಕ್ಷಾಧಿಕಾರಿ ವೀಣಾ, ವಿಶ್ವಾದ್ಯಂತ ಕೊರೋನ ಒಂದನೇ, ಎರಡನೇ, ಮೂರನೇ ಅಲೆ, ನಾಲ್ಕನೇ ಅಲೆ ಮಾರಕವಾಗಿ ನಿಧಾನಗತಿಯಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ರೋಗನಿರೋಧಕ ಹೆಚ್ಚಿಸಲು ಲಸಿಕೆ ತುಂಬಾ ಅಗತ್ಯ ಎಂದರು.
ಈ ಸಂದರ್ಭದಲ್ಲಿ ನಿರೀಕ್ಷಣ ಅಧಿಕಾರಿಯಾದ ಜ್ಯೋತಿ ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದು , ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರನ್ನು ಒಳಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಇದೇ ಸಂದರ್ಭದಲ್ಲಿ ಮುಖ್ಯ ಶಿಕ್ಷಕರಾದ ಎಂ.ತಿಪ್ಪೇಸ್ವಾಮಿ., ಕೆ. ಸುಫಿಯಾ , ಗಿರಿಜಮ್ಮ, ಜಿ.ವಿ. ನಿರ್ಮಲ, ಎ. ತಸ್ಮಿಯ ಬಿ, ಸೈಲಜ ಕೆ.ಟಿ., ನೇತ್ರಾವತಿ ವಿ, ಚೆನ್ನಕೇಶವ ವಿ.ಹೆಚ್. , ನೇತ್ರಮ್ಮ ಮತ್ತು ಶಾಲಾ ಮಕ್ಕಳು ಗ್ರಾಮಸ್ಥರು ಹಾಜರಿದ್ದರು.
ವರದಿ: ಮುರುಳಿಧರನ್ ಆರ್. ಹಿರಿಯೂರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5


