ಕಲಬುರಗಿ: ಊಟ ಬೇಡಿದ ಮುಗ್ದ ಮಗುವಿನ ಕೈಗೆ ಮಲತಾಯಿ ಬರೆ ಹಾಕಿರುವ ಘಟನೆ ನಡೆದಿದೆ. ಈ ಕೃತ್ಯ ನಾಲವಾರ ಗ್ರಾಮದಲ್ಲಿ ನಡೆದಿದ್ದು, ನಾಲ್ಕು ವರ್ಷದ ಮಗುವಿಗೆ ಮಲತಾಯಿ ಚಿತ್ರಹಿಂಸೆ ನೀಡಿದ್ದಾಳೆ.
ನಾಲ್ಕು ವರ್ಷದ ಮಗುವನ್ನು ಹಗ್ಗದಿಂದ ಮಂಚಕ್ಕೆ ಕಟ್ಟಿ ಹಾಕಿ, ಕೆಂಡದಿಂದ ಕೈಯನ್ನು ಸುಟ್ಟು ಕ್ರೂರತೆ ಮೆರೆದಿದ್ದಾಳೆ. ಇನ್ನು ಎರಡು ದಿನಗಳಿಂದ ಮಗು ಹೊರಗಡೆ ಬಾರದನ್ನು ಗಮನಿಸಿದ ಸ್ಥಳೀಯರು ಮಲತಾಯಿಯನ್ನು ವಿಚಾರಣೆ ಮಾಡಿದ್ದಾಳೆ. ಈ ಸಂದರ್ಭದಲ್ಲಿ ವಿಚಾರ ತಿಳಿದು, ಗ್ರಾಮಸ್ಥರು ಮಗುವನ್ನು ಆಕೆಯ ಕಪಿಮುಷ್ಟಿಯಿಂದ ಬಿಡಿಸಿಕೊಂಡು ಬಂದಿದ್ದಾರೆ.
ಈ ವೇಳೆ ಸ್ಥಳೀಯರ ಜೊತೆ ವಾದಕ್ಕಿಳಿದ ಮಹಿಳೆ, ನಾನು ಸುಡುವುದು ಹೀಗೇ. ನೀವ್ಯಾರು ಕೇಳೋಕೆ ಅಂತ ವಾಗ್ವಾದ ನಡೆಸಿದ್ದಾಳೆ. ಇನ್ನು ಮಗುವಿನ ರೋಧನೆ ಕಂಡು ವಾಡಿ ಪೊಲೀಸ್ ಠಾಣೆಗೆ ಗ್ರಾಮಸ್ಥರು ದೂರು ನೀಡಿದ್ದಾರೆ.
ಮಗುವಿಗೆ ಯಾವುದೇ ಸಮಸ್ಯೆಯಾಗಬಾರದು ಎಂದು ಪುಟ್ಟ ಕಂದಮ್ಮನ ತಂದೆ ತಿಪ್ಪಣ್ಣ ಎರಡನೇ ಮದುವೆಯಾಗಿದ್ದ. ಆದರೆ ಕೆಲಸದ ನಿಮಿತ್ತ ಮಗುವನ್ನು ಈಕೆಯ ಬಳಿ ಬಿಟ್ಟು ಕಳೆದ ಕೆಲ ದಿನಗಳ ಹಿಂದೆ ಪುಣೆಗೆ ತೆರಳಿದ್ದ. ಈ ಬಳಿಕ ಪ್ರತೀ ದಿನ ಮಗುವಿಗೆ ಚಿತ್ರಹಿಂಸೆ ನೀಡಲು ಪ್ರಾರಂಭಿಸಿದ ಈಕೆ, ಮಲತಾಯಿ ಧೋರಣೆಯನ್ನು ಮಗುವಿನ ಮೇಲೆ ತೋರಿಸಿದ್ದಾಳೆ.
ವರದಿ ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB


