ಹೆಚ್.ಡಿ.ಕೋಟೆ: ತಾಲೂಕಿನ ಚಾ ಕಳ್ಳಿ ಮತ್ತು ಹೆಗ್ಗಡಾಪುರ ಗ್ರಾಮಗಳ ಸರ್ಕಾರಿ ಪಾಠ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಹಾಗೂ ಪೆನ್ನು ಮತ್ತು ಪೆನ್ಸಿಲ್ ಗಳನ್ನು ರಕ್ಷಣಾ ಸೇವಾ ಟ್ರಸ್ಟ್ ಅಧ್ಯಕ್ಷರಾದ ಚಂದ್ರಿಕಾ ದೊರೆಸ್ವಾಮಿ ಹಾಗೂ ಸ್ವಯಂ ನಿವೃತ್ತಿ ಹೊಂದಿದ ಎಎಸ್ಐ ದೊರೆಸ್ವಾಮಿ ವಿತರಣೆ ಮಾಡಿದರು.
ಸಂದರ್ಭದಲ್ಲಿ ಚಂದ್ರಿಕಾ ದೊರೆಸ್ವಾಮಿ ಮಾತನಾಡಿ, ಹೆಚ್.ಡಿ.ಕೋಟೆ ತಾಲೂಕು ಹಿಂದುಳಿದ ತಾಲೂಕು ಎಂದು ಹೆಸರುವಾಸಿಯಾಗಿದೆ ಹಿಂದುಳಿದ ತಾಲೂಕು ಎಂಬ ಹಣೆ ಪಟ್ಟಿಯ ಬಗ್ಗೆ ಕೇವಲ ಸ್ಟೇಜ್ ಮೇಲೆ ಬೂಟಾಟಿಕೆ ಮಾತುಗಳಿಂದ ಆಗಲಿ ವೇದಾಂತದ ಮಾತುಗಳಿಂದ ಆಗಲಿ ಸುಳ್ಳು ಆಶ್ವಾಸನೆ ಭರವಸೆಗಳಿಂದ ಆಗಲಿ ಸಾಧ್ಯವಿಲ್ಲ, ಬದಲಿಗೆ ವಿದ್ಯೆಯಿಂದ , ಬುದ್ಧಿಯಿಂದ ಜ್ಞಾನದಿಂದ ಪ್ರಜ್ಞಾವಂತರಾದ ರೆ ಮಾತ್ರ ಅಭಿವೃದ್ಧಿ ಮತ್ತು ಬದಲಾವಣೆ ಮಾಡಲುಸಾಧ್ಯ ಎಂದು ಅರಿತು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದರು.
ಪೋಲಿಸ್ ಇಲಾಖೆಯಿಂದ ನಿವೃತ್ತ ಹೊಂದಿ ಸಮಾಜಸೇವೆ ಮಾಡಲು ಎಎಸ್ಐ ದೊರೆಸ್ವಾಮಿ ಮಾತನಾಡಿ, ಹೆಚ್.ಡಿ.ಕೋಟೆಯನ್ನು ಬದಲಾವಣೆಯತ್ತ ಕೊಂಡೊಯ್ಯಲು ವಿದ್ಯೆಯಿಂದ ಜ್ಞಾನದಿಂದ ಸಾಧ್ಯ ಎಂದು ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಿ ಸಮಾಜಸೇವೆ ಮಾಡಲು ಪಣತೊಟ್ಟು ನಿಂತಿದ್ದೇನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಎಸ್.ದೊರೆಸ್ವಾಮಿಯವರು ಪಠ್ಯ ಸಾಮಗ್ರಿಗಳನ್ನು ವಿತರಿಸಿದರು.
ಆ ಸಮಯದಲ್ಲಿ ಗ್ರಾಮದ ರವಿ ಗ್ರಾಮ ಪಂಚಾಯಿತಿ ಸದಸ್ಯರು ಶ್ರೀನಿವಾಸ ಕುಮಾರ ಎಸ್.ಡಿ.ಎಂ.ಅಧ್ಯಕ್ಷರಾದ ರಾಜೇಶ್ ಹಾಗೂ ಕೃಷ್ಣಾಜಿ ರಾವ್ ಮತ್ತು ಚಂದ್ರಕುಮಾರ್ ಮುಖ್ಯೋಪಾಧ್ಯಾಯರು ಹಾಗೂ ಸಹ ಶಿಕ್ಷಕಿ ಹಂಸವೇಣಿ ಪದ್ಮಿನಿ ಹಾಗೂ ಅಡುಗೆ ಸಿಬ್ಬಂದಿಯಾದ ಜಯಮ್ಮ, ನಾಗಮ್ಮ, ಭಾಗ್ಯಮ್ಮ, ಮಂಜು, ವೀರನಾಯಕ, ಎಸ್ ಡಿಎಂ ಅಧ್ಯಕ್ಷರಾದ ಬೈರ ನಾಯಕ ಮತ್ತು ಬೆಟ್ಟ ನಾಯಕ ಯಜಮಾನರಾದ ಬೆಟ್ಟ ನಾಯಕ, ರಮೇಶ್ ಚಂದ್ರಶೇಖರ್ ಶ್ರೀಮತಿ ಸುನೀತಾ ರತ್ನಮ್ಮ ಜವರಮ್ಮ ಶಾಲೆಯ ಶಿಕ್ಷಕರಾದ ಜೂಲಿಯಟ್ ವಿಲ್ಮ ಹಾಗೂ ಶರತ್ ಕುಮಾರ್ ರವರು ಉಪಸ್ಥಿತರಿದ್ದರು.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5


