ತುಮಕೂರು: ಜಿಲ್ಲೆಯ ತುರುವೇಕೆರೆ ತಾಲೂಕು ಮಾಯಸಂದ್ರ ಗ್ರಾಮದಲ್ಲಿ, ಏರ್ಪಡಿಸಿದ್ದ ಕಂದಾಯ ಸಚಿವರ ವಾಸ್ತವ್ಯ ಕಾರ್ಯಕ್ರಮದಲ್ಲಿ ಸಚಿವ ಆರ್. ಅಶೋಕ್ ದಲಿತರ ಮನೆಯ , ರೊಟ್ಟಿ, ಉಪ್ಪಿಟ್ಟು, ಚಿತ್ರಾನ್ನ ಸವಿದರು.
ರಾತ್ರಿ ಮಾಯಸಂದ್ರದ ಟಿ.ಬಿ.ಕ್ರಾಸ್ ನಲ್ಲಿರುವ ಶ್ರೀ ಆದಿ ಚುಂಚನಗಿರಿಯ ಮಠದ ಶಾಖಾಮಠ ಕಲ್ಪತರು ಆಶ್ರಮದಲ್ಲಿ ತಂಗಿದ ಅವರು , ಬೆಳಿಗ್ಗೆ ವಾಯು ವಿಹಾರಕ್ಕೆ ತೆರಳಿದರು. ಈ ವೇಳೆ ರಸ್ತೆ ಬದಿಯಲ್ಲಿನ ಟೀ ಅಂಗಡಿಯಲ್ಲಿ ಟೀ ಕುಡಿದು, 9:30ರ ವೇಳೆಗೆ ಮಾಯಸಂದ್ರದ ,ಬಡ ದಲಿತರಾದ ಜಯಮ್ಮ ಬಿನ್ ಲೇಟ್ ನಾರಾಯಣಪ್ಪ ಅವರ ಮಗ ವಿನೋದ್ ರವರ ಮನೆಗೆ ತೆರಳಿ ಅವರ ಉಭಯ ಕುಶಲೋಪರಿ ,ವಿಚಾರಿಸಿದರು. ಬಳಿಕ ಅವರ ಮನೆಯಲ್ಲಿ ಮಾಡಿದ್ದ ಅಕ್ಕಿ ರೊಟ್ಟಿ ,ಉಚ್ಛಳು ಚಟ್ನಿಯನ್ನು ಅವರ ಅಡುಗೆ ಕೋಣೆಯಿಂದ ಸಚಿವರು ತಾವೇ ,ಬಡಿಸಿಕೊಂಡು ಹಾಲ್ ನಲ್ಲಿ ಊಟಕ್ಕೆ ಕುಳಿತರು. ಉಪ್ಪಿಟ್ಟು, ಚಿತ್ರಾನ್ನ ಹಾಕಿಸಿಕೊಂಡು ಸವಿದರು.
ಸಚಿವರಿಗೆ ಶಾಸಕ ಮಸಾಲ ಜಯರಾಮ್ , ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್, ದಲಿತ ಮುಖಂಡರಾದ ವಿ.ಟಿ.ವೆಂಕಟರಾಮ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ರಾದ ಟಿ.ಕೆ.ಚಿದಾನಂದ್ , ಮಾಯಸಂದ್ರ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಂಗಳಗೌರಮ್ಮ, ಹೊನ್ನಪ್ಪ , ಸದಸ್ಯರಾದ ಅಜಿತ್ ಜೈನ್, ಸಾಥ್ ನೀಡಿದರು.
ಬಳಿಕ ಕುಂದು ಕೊರತೆ ಅರ್ಜಿಯನ್ನು ಸಚಿವರು ಸ್ವೀಕರಿಸಿದರು. ದಲಿತ ಕಾಲೋನಿಯ ಜನರು ಸಚಿವರಿಗೆ ಬೃಹತ್ ಗಾತ್ರದ ಹಾರ ಹಾಕಿ ಝರಿ ಪೇಠ ತೊಡಿಸಿ ಸನ್ಮಾನಿಸಿದರು. ಇದೇ ವೇಳೆ ಇಲ್ಲಿನ ಸಮಸ್ಯೆಗಳ ಬಗ್ಗೆ ಆರ್.ಅಶೋಕ್ ವಿಚಾರಿಸಿ, ಕಾಲನಿಯ ಅಭಿವೃದ್ಧಿಗೆ ನಾನು ಬದ್ಧನಾಗಿದ್ದೇನೆ ಎಂದು ತಿಳಿಸಿದರು.
ವರದಿ: ಸುರೇಶ್ ಬಾಬು, ತುರುವೇಕೆರೆ .
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB