ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿರುವ ನಂದಿಬೆಟ್ಟ ಒಂದು ಸುಂದರ ಪ್ರವಾಸಿ ತಾಣ. ಇಲ್ಲಿ ವೀಕೆಂಡ್ ಬಂದ್ರೆ ಸಾಕು ಪ್ರವಾಸಿಗರ ದಂಡೇ ಇರುತ್ತೆ. ಫ್ಯಾಮಿಲಿ, ಕಾಲೇಜು ಸ್ಟೂಡೆಂಟ್ಸ್, ವಿದೇಶೀಗರು ಇಲ್ಲಿಗೆ ಬರುತ್ತಾರೆ. ಇದೇ ರೀತಿ ಬೆಂಗಳೂರಿನಿಂದ ಯುವಕರಿಬ್ಬರು ನಂದಿಬೆಟ್ಟದಲ್ಲಿನ ಸನ್ ರೈಸ್ ನೋಡುವ ಆಸೆಯಿಂದ ಬಂದ್ರು. ಆದರೆ ಜಾಲಿ ರೈಡ್ ನೆಪದಲ್ಲಿ ಸನ್ ರೈಸ್ ನೋಡುವ ಆಸೆಯಿಂದ ಬಂದ ಯುವಕನೊಬ್ಬ ತನ್ನ ಪ್ರಾಣವನ್ನೇ ಕಳೆದುಕೊಂಡಿರುವ ಘಟನೆ ನಡೆದಿದೆ. ಈ ಘಟನೆಯಲ್ಲಿ ಮತ್ತೋರ್ವ ಯುವಕನಿಗೆ ಗಂಭೀರ ಗಾಯಗಳಾಗಿರುವುದಾಗಿ ವರದಿ ಆಗಿದೆ.
ನಂದಿಬೆಟ್ಟದ ತುದಿಯಿಂದ ಸನ್ ರೈಸ್ ನೋಡುವ ಆಸೆಯಿಂದ ಮಧ್ಯರಾತ್ರಿಯಿಂದಲೇ ನಂದಿಬೆಟ್ಪಕ್ಕೆ ಯುವಕರು ಲಗ್ಗೆ ಇಡ್ತಾರೆ. ಇದೇ ಆಸೆಯಲ್ಲಿ ಬಂದ ಬೆಂಗಳೂರಿನ ಶ್ರೀನಗರದ ಯುವಕ ಬೈಕ್ ಅಪಘಾತದಲ್ಲಿ ತನ್ನ ಪ್ರಾಣವನ್ನ ಕಳೆದುಕೊಂಡಿದ್ದಾನೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಕಣಿವೇಪುರದಲ್ಲಿ ನಿನ್ನೆ ಮುಂಜಾನೆ 5:30ರ ಸಮಯದಲ್ಲಿ ನಡೆದ ಅಪಘಾತದಲ್ಲಿ 26 ವರ್ಷದ ರಾಕೇಶ್ ಸ್ಥಳದಲ್ಲೇ ಪ್ರಾಣ ಕಳೆದು ಕೊಂಡ್ರೆ, ಸುನಿಲ್ ಎಂಬ ಯುವಕ ಗಂಭೀರವಾಗಿ ಗಾಯಾಗೊಂಡು ಚಿಕಿತ್ಸೆಗಾಗಿ ಆಸ್ಪತ್ರೆ ಸೇರಿದ್ದಾನೆ.
ಬೆಂಗಳೂರಿನ ನಿವಾಸಿಗಳಾದ ರಾಕೇಶ್ ಮತ್ತು ಸುನೀಲ್ ನಂದಿಬೆಟ್ಟದಲ್ಲಿನ ಸೂರ್ಯೋದಯ ನೋಡಲು ಬೈಕ್ ನಲ್ಲಿ ಹೊರಟಿದ್ರು. ನಿನ್ನೆ ಮುಂಜಾನೆ 4 ಗಂಟೆಗೆ ಬೆಂಗಳೂರು ಬಿಟ್ಟಿದ್ದ ಅವರು ನಂದಿಬೆಟ್ಟದ ಸನಿಹ ಬಂದಿದ್ರು, ಅತಿವೇಗದಿಂದ ಬಂದ ಬೈಕ್ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಯಿಂದ ರಾಕೇಶ್ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾನೆ. ಮತ್ತೊಬ್ಬ ಸವಾರ ಸುನೀಲ್ ನ ಬೆನ್ನೆಲುಬು ಮುರೆದಿದೆ. ಈ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


