nammatumakuru

    Subscribe to Updates

    Get the latest creative news from FooBar about art, design and business.

    What's Hot

    ಶಾಸಕ ಅನಿಲ್ ಚಿಕ್ಕಮಾದು ಅವರಿಗೆ ಸಚಿವ ಸ್ಥಾನ ನೀಡಲು ಒತ್ತಾಯ: ಕಂದೇಗಾಲ ಶಿವರಾಜು ಆಗ್ರಹ

    June 1, 2026

    ಶಾಸಕ ಅನಿಲ್ ಚಿಕ್ಕಮಾದು ಅವರಿಗೆ ಸಚಿವ ಸ್ಥಾನ ನೀಡಲು ಮುಳ್ಳೂರು ಲೋಕೇಶ್ ಒತ್ತಾಯ

    June 1, 2026

    ಸರಗೂರು: ‘ರಾಷ್ಟ್ರೀಯ ಭೀಮಾ ಮಾರ್ಗ ಸಂಘಟನೆ’ಯ ನೂತನ ತಾಲ್ಲೂಕು ಅಧ್ಯಕ್ಷರಾಗಿ ಹಳಿಯೂರು ಮೂರ್ತಿ ಆಯ್ಕೆ

    June 1, 2026
    Facebook Twitter Instagram
    ಟ್ರೆಂಡಿಂಗ್
    • ಶಾಸಕ ಅನಿಲ್ ಚಿಕ್ಕಮಾದು ಅವರಿಗೆ ಸಚಿವ ಸ್ಥಾನ ನೀಡಲು ಒತ್ತಾಯ: ಕಂದೇಗಾಲ ಶಿವರಾಜು ಆಗ್ರಹ
    • ಶಾಸಕ ಅನಿಲ್ ಚಿಕ್ಕಮಾದು ಅವರಿಗೆ ಸಚಿವ ಸ್ಥಾನ ನೀಡಲು ಮುಳ್ಳೂರು ಲೋಕೇಶ್ ಒತ್ತಾಯ
    • ಸರಗೂರು: ‘ರಾಷ್ಟ್ರೀಯ ಭೀಮಾ ಮಾರ್ಗ ಸಂಘಟನೆ’ಯ ನೂತನ ತಾಲ್ಲೂಕು ಅಧ್ಯಕ್ಷರಾಗಿ ಹಳಿಯೂರು ಮೂರ್ತಿ ಆಯ್ಕೆ
    • ಪಾವಗಡ ತಾಲೂಕಿನ ವಸತಿ ಶಾಲೆಗಳಲ್ಲಿ 7, 8, 9ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ
    • ಅಪ್ಪಾಜಿಹಳ್ಳಿಯಲ್ಲಿ ಮಳೆ ಅವಾಂತರ: ಸೇತುವೆ ಇಲ್ಲದೆ ಜೀವದ ಹಂಗು ತೊರೆದು ಜನರ ಸಂಚಾರ!
    • ಮಾವಿನಹಣ್ಣು ಇಷ್ಟ ಪಟ್ಟು ತಿಂತೀರಾ? ಈ ರಹಸ್ಯ ಆರೋಗ್ಯ ಪ್ರಯೋಜನಗಳು ನಿಮಗ ಗೊತ್ತಿರಲೇಬೇಕು!
    • ಸಚಿವರ ಆಯ್ಕೆಯಲ್ಲಿ ಎಚ್ಚರಿಕೆ ಅಗತ್ಯ: ಡಿಕೆಶಿಗೆ ಮಲ್ಲಿಕಾರ್ಜುನ ಖರ್ಗೆ ಸಲಹೆ
    • ಸಚಿವ ಸತೀಶ್ ಜಾರಕಿಹೊಳಿ ವಿರುದ್ಧ ಸುಳ್ಳು ಪೋಸ್ಟ್: ಇಬ್ಬರು ಫೇಸ್‌ ಬುಕ್ ಅಡ್ಮಿನ್‌ ಗಳ ವಿರುದ್ಧ ಎಫ್‌ ಐಆರ್ ದಾಖಲು
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕಾಂಗ್ರೆಸ್ ಯುವಶಕ್ತಿ ಕಾರ್ಯಕ್ರಮ: ಹಸಿವು ಮುಕ್ತ ಭಾರತ ನೀಡಿದ್ದ ಕಾಂಗ್ರೆಸ್: ಬೆಮೆಲ್ ಕಾಂತರಾಜು
    ತುರುವೇಕೆರೆ July 5, 2022

    ಕಾಂಗ್ರೆಸ್ ಯುವಶಕ್ತಿ ಕಾರ್ಯಕ್ರಮ: ಹಸಿವು ಮುಕ್ತ ಭಾರತ ನೀಡಿದ್ದ ಕಾಂಗ್ರೆಸ್: ಬೆಮೆಲ್ ಕಾಂತರಾಜು

    By adminJuly 5, 2022No Comments2 Mins Read
    turuvekere

    ತುಮಕೂರು: ಜಿಲ್ಲೆ ತುರುವೇಕೆರೆ ವಿಧಾನಸಭಾ ಕ್ಷೇತ್ರದ ಸಿ.ಎಸ್.ಪುರ ಗ್ರಾಮದಲ್ಲಿ  ತುರುವೇಕೆರೆ ಬ್ಲಾಕ್ ಕಾಂಗ್ರೆಸ್ ಹಾಗೂ ಸಿ.ಎಸ್.ಪುರದ ಬ್ಲಾಕ್  ಕಾಂಗ್ರೆಸ್ ವತಿಯಿಂದ ಮಾಜಿ ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜು ರವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಯುವಶಕ್ತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

    ಈ ಕಾರ್ಯಕ್ರಮ ಬಾಣಸಂದ್ರದ ಲಕ್ಷ್ಮೀದೇವಮ್ಮ ರವರ ಪ್ರಾರ್ಥನೆಯಿಂದ ಪ್ರಾರಂಭವಾಯಿತು. ತುರುವೇಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್ ಯುವ ಮುಖಂಡರುಗಳನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದರು.


    Provided by
    Provided by

    ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಪ್ರಾರಂಭವಾಯಿತು. ಪ್ರಾಸ್ತಾವಿಕವಾಗಿ  ಯುವ ಮುಖಂಡ ನಂಜಪ್ಪ ಮಾತನಾಡಿ,  ಸ್ವಾತಂತ್ರ ನಂತರ ಹಸಿವು ಮುಕ್ತ ಭಾರತ, ಸಾಕ್ಷರ ಭಾರತ, ನಿರುದ್ಯೋಗ ಸಮಸ್ಯೆಯನ್ನು ಎದುರಿಸಿ ಶಿಕ್ಷಣ ವಂಚಿತರಿಗೆ ಶಿಕ್ಷಣ ದೊರಕಿಸಿ, ಈ ಎಲ್ಲಾ ಕಾರ್ಯಕ್ರಮಗಳು ಕೊಟ್ಟಂತ ಸರ್ಕಾರ ನಮ್ಮ ಕಾಂಗ್ರೆಸ್ ಸರ್ಕಾರ. ಆದ್ದರಿಂದ ಮುಂದಿನ ದಿನಗಳಲ್ಲಿ ನಮ್ಮ ಪಕ್ಷ  ಅಧಿಕಾರಕ್ಕೆ ಬಂದು ಉತ್ತಮ ಯೋಜನೆಗಳನ್ನು ಕೊಡುತ್ತದೆ ಎಂಬ ಆಶಯ ವ್ಯಕ್ತಪಡಿಸಿದರು.

    ರಾಜ್ಯ ಯುವ ಕಾರ್ಯದರ್ಶಿ ಇಲ್ಲಾಯಿ ಸಿಕಂದರ್ ಮಾತನಾಡಿ, ಕೇಂದ್ರ ಸರ್ಕಾರ ಯುವಕರನ್ನ ಓಲೈಸಿ, ಇಲ್ಲಸಲ್ಲದ ಆಸೆಗಳನ್ನು ಹುಟ್ಟಿಸಿ ಅನ್ಯಾಯ ಮಾಡುತ್ತಿದೆ. 2013ರ ಚುನಾವಣೆಯಲ್ಲಿ ಪ್ರತಿವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಸುಳ್ಳು ಭರವಸೆ ನೀಡಿದ್ದರು. ಆದರೆ ಇವರಿಗೆ ಯಾವುದೇ ಉದ್ಯೋಗವನ್ನು ನೀಡದೆ ಪಕೋಡ ಮಾಡುವ ಸ್ಥಿತಿಗೆ ತಂದಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

    ನಂತರ ಕೆಪಿಸಿಸಿ ವಕ್ತಾರ ನಿಕೇತರಾಜ್ ಮೌರ್ಯ ಅವರು ಮಾತನಾಡಿ, ಸಿ,ಎಸ್.ಪುರದಲ್ಲಿ ಕಾಂಗ್ರೆಸ್ ಯುವ ಶಕ್ತಿ ಕಾರ್ಯಕ್ರಮ ಮಾಡುತ್ತಿರುವುದು ರಾಜ್ಯದಲ್ಲೇ ಮೊದಲ ಬಾರಿಗೆ ಇದು ಇತಿಹಾಸವಾಗಲಿದೆ. ಇಂತಹ ಕಾರ್ಯಕ್ರಮ ಮಾಡಿದ ಮೊಬೈಲ್ ಕಾಂತರಾಜ್ ಅವರಿಗೆ ತುಂಬು ಹೃದಯದ ಧನ್ಯವಾದಗಳು ಎಂದರು.

    ಅಧ್ಯಕ್ಷೀಯ ಭಾಷಣ ಮಾಡಿದ ಬೆಮೆಲ್ ಕಾಂತರಾಜು, ನೆಲಮಂಗಲ ನನ್ನ ಜನ್ಮ ಭೂಮಿ , ತುರುವೇಕೆರೆ ನನ್ನ ಕರ್ಮಭೂಮಿ. ನನ್ನ ಕೈಲಾದಷ್ಟು ಸಾಮಾಜಿಕ ಸೇವೆ ಮಾಡಲು ತುರುವೇಕೆರೆ ವಿಧಾನಸಭಾ ಕ್ಷೇತ್ರಕ್ಕೆ ಬಂದಿದ್ದೇನೆ. ನನಗೆ ನನ್ನನ್ನು ಆಶೀರ್ವದಿಸಿ, ಬೇರೆ ಪಕ್ಷಗಳ ಬಗ್ಗೆ ನಾನು ಮಾತನಾಡುವುದಿಲ್ಲ. ಒಂದು ಸಾವಿರ ಜನ ನನ್ನ ಬೆಂಬಲಕ್ಕೆ ನಿಂತಿದ್ದೀರಿ. ನನಗೆ ಯಾವುದೇ ಆಸೆಗಳು ಇಲ್ಲ. ಜನಸೇವೆಯೇ ನನ್ನ ಬದುಕು. ಹಣ ಮಾಡಲು ನಾನು ಇಲ್ಲಿಗೆ ಬಂದಿಲ್ಲ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದ ಚುಕ್ಕಾಣಿ ಹಿಡಿಯಲು ನಾನು ತುರುವೇಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಶ್ರಮಿಸುತ್ತಿದ್ದೇನೆ. ನಿಮ್ಮ ಬೆಂಬಲ ಸಹಕಾರ ಹೀಗೆ ಇರಲಿ. ಎಲ್ಲರಿಗೂ ಧನ್ಯವಾದಗಳು ಎಂದರು.

    ಈ ಕಾರ್ಯಕ್ರಮದಲ್ಲಿ ಗೋಣಿ ತುಮಕೂರು, ಲಕ್ಷ್ಮಿಕಾಂತ್, ನಾಗೇಶ್, ರೇವಣ್ಣ ಟಿ.ಹೆಚ್., ಗುರುದತ್ತ್ ಮಹಿಳಾ ಘಟಕದ ಲಲಿತಮ್ಮ, ಶಶಿಕಲಾ, ನಂಜಪ್ಪ, ವಿಜಯ್,  ವಿನುತಾ,  ಚಂದನ್, ಮನೋಜ್, ಪಾಂಡು,  ಯತೀಶ್, ಪವಿತ್ರ, ಕಾರ್ತಿಕ್ ಮುಂತಾದವರು ಹಾಜರಿದ್ದರು.

    ವರದಿ: ಸುರೇಶ್ ಬಾಬು, ತುರುವೇಕೆರೆ.


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

    admin
    • Website

    Related Posts

    ತುರುವೇಕೆರೆ: ಜೂ. 4ರಂದು ಉಚಿತ ಯೋಗ,  ಪ್ರಾಣಾಯಾಮ ತರಗತಿಗಳ ಉದ್ಘಾಟನೆ

    May 30, 2026

    ಅಕ್ರಮ ಸಂಬಂಧಕ್ಕೆ ಬಲಿಯಾದ ವಿವಾಹಿತೆ; 4 ತಿಂಗಳ ಬಳಿಕ ಸುಟ್ಟ ಶವದ ನಿಗೂಢತೆ ಭೇದಿಸಿದ ತುರುವೇಕೆರೆ ಪೊಲೀಸ್!

    May 27, 2026

    ತುರುವೇಕೆರೆ: ಹೆಗ್ಗೆರೆಯಲ್ಲಿ ಆರೋಗ್ಯ ತಪಾಸಣಾ ಶಿಬಿರ

    May 9, 2026

    Leave A Reply Cancel Reply

    Our Picks

    ಪತ್ನಿಗೆ ರಾಜ್ಯಸಭಾ ಆಫರ್ ನಿರಾಕರಿಸಿದ ಸಿದ್ದರಾಮಯ್ಯ; 3 ಡಿಸಿಎಂ ಹುದ್ದೆಗಾಗಿ ಪಟ್ಟು!

    June 1, 2026

    ದ್ವೇಷ ಭಾಷಣ ಮಸೂದೆಗೆ ಕೇಂದ್ರ ಗೃಹ ಸಚಿವಾಲಯ ಬ್ರೇಕ್: ಕರ್ನಾಟಕ ಸರ್ಕಾರಕ್ಕೆ ಭಾರಿ ಹಿನ್ನಡೆ!

    May 26, 2026

    ಥಿಯೇಟರ್‌ ಗಳಲ್ಲಿ ಹೊಸ ತಮಿಳು ಸಿನಿಮಾಗಳಿಗೆ ದಿನಕ್ಕೆ 5 ಶೋ ಪ್ರದರ್ಶನ: ಸಿಎಂ ವಿಜಯ್ ಮಹತ್ವದ ಆದೇಶ

    May 26, 2026

    ಬಾಲಕನ ಬಲಿ ಪಡೆದಿದ್ದ ಚಿರತೆ ಕೊನೆಗೂ ಸೆರೆ: 14 ದಿನಗಳ ಕಾರ್ಯಾಚರಣೆ ಬಳಿಕ ಸ್ಥಳೀಯರು ನಿಟ್ಟುಸಿರು

    May 25, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಶಾಸಕ ಅನಿಲ್ ಚಿಕ್ಕಮಾದು ಅವರಿಗೆ ಸಚಿವ ಸ್ಥಾನ ನೀಡಲು ಒತ್ತಾಯ: ಕಂದೇಗಾಲ ಶಿವರಾಜು ಆಗ್ರಹ

    June 1, 2026

    ಸರಗೂರು: “ಹೈಕಮಾಂಡ್ ಕೇಳಿದ್ದರೆ ರಾಜೀನಾಮೆ ನೀಡುತ್ತೇನೆ ಎಂದಿದ್ದ ಸಿದ್ದರಾಮಯ್ಯ ಅವರು, ಇದೀಗ ಹೈಕಮಾಂಡ್ ಸೂಚನೆಯಂತೆ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ…

    ಶಾಸಕ ಅನಿಲ್ ಚಿಕ್ಕಮಾದು ಅವರಿಗೆ ಸಚಿವ ಸ್ಥಾನ ನೀಡಲು ಮುಳ್ಳೂರು ಲೋಕೇಶ್ ಒತ್ತಾಯ

    June 1, 2026

    ಸರಗೂರು: ‘ರಾಷ್ಟ್ರೀಯ ಭೀಮಾ ಮಾರ್ಗ ಸಂಘಟನೆ’ಯ ನೂತನ ತಾಲ್ಲೂಕು ಅಧ್ಯಕ್ಷರಾಗಿ ಹಳಿಯೂರು ಮೂರ್ತಿ ಆಯ್ಕೆ

    June 1, 2026

    ಪಾವಗಡ ತಾಲೂಕಿನ ವಸತಿ ಶಾಲೆಗಳಲ್ಲಿ 7, 8, 9ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ

    June 1, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.