nammatumakuru

    Subscribe to Updates

    Get the latest creative news from FooBar about art, design and business.

    What's Hot

    ಪತ್ರಕರ್ತನಿಗೆ ಪೊಲೀಸ್ ನೋಟಿಸ್: ಹಿಂಪಡೆಯಲು ಎಸ್ಪಿಗೆ ಮನವಿ

    October 28, 2026

    ಮರೇನಾಯಕನಹಳ್ಳಿಯಲ್ಲಿ ವೈಭವದ ವಾಲ್ಮೀಕಿ ಜಯಂತೋತ್ಸವ:   ಶ್ರೀ ಮಹರ್ಷಿ ವಾಲ್ಮೀಕಿ ಸೇವಾ ಟ್ರಸ್ಟ್ ಉದ್ಘಾಟನೆ; ಕುಂಭ-ಕಳಶ ಮೆರವಣಿಗೆ

    October 28, 2026

    ಮಧ್ಯರಾತ್ರಿ ನಾಯಿಗಳು ವಿಚಿತ್ರವಾಗಿ ಬೊಗಳುವುದೇಕೆ? ದೆವ್ವ ಕಾಣಿಸುತ್ತದೆಯೇ, ಇಲ್ಲಿದೆ ವೈಜ್ಞಾನಿಕ ಕಾರಣ!

    October 28, 2026
    Facebook Twitter Instagram
    ಟ್ರೆಂಡಿಂಗ್
    • ಪತ್ರಕರ್ತನಿಗೆ ಪೊಲೀಸ್ ನೋಟಿಸ್: ಹಿಂಪಡೆಯಲು ಎಸ್ಪಿಗೆ ಮನವಿ
    • ಮರೇನಾಯಕನಹಳ್ಳಿಯಲ್ಲಿ ವೈಭವದ ವಾಲ್ಮೀಕಿ ಜಯಂತೋತ್ಸವ:   ಶ್ರೀ ಮಹರ್ಷಿ ವಾಲ್ಮೀಕಿ ಸೇವಾ ಟ್ರಸ್ಟ್ ಉದ್ಘಾಟನೆ; ಕುಂಭ-ಕಳಶ ಮೆರವಣಿಗೆ
    • ಮಧ್ಯರಾತ್ರಿ ನಾಯಿಗಳು ವಿಚಿತ್ರವಾಗಿ ಬೊಗಳುವುದೇಕೆ? ದೆವ್ವ ಕಾಣಿಸುತ್ತದೆಯೇ, ಇಲ್ಲಿದೆ ವೈಜ್ಞಾನಿಕ ಕಾರಣ!
    • ಭಾರತೀಯ ಷೇರು ಮಾರುಕಟ್ಟೆಗೆ ಭಾರೀ ಹೊಡೆತ: ₹30 ಲಕ್ಷ ಕೋಟಿ ಸಂಪತ್ತು ಕರಗಲು 10 ಕಾರಣಗಳೇನು?
    • ಎಸ್.ಎಸ್. ವೃತ್ತದ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ವೀಕ್ಷಿಸಿದ ಜಿಲ್ಲಾಧಿಕಾರಿ ಶುಭ ಕಲ್ಯಾಣ್
    • ಮಾ.15: ಅಮಾನಿಕೆರೆಯಲ್ಲಿ ಜಲ ಕ್ರೀಡಾ ತರಬೇತಿ ಅಕಾಡೆಮಿ ಆರಂಭ
    • ಪಾವಗಡ: ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ
    • ಎಸ್ ಐಆರ್: ಅಂತಿಮ ಮತದಾರರ ಪಟ್ಟಿ ಪ್ರಕಟ: ಜಿಲ್ಲೆಯಲ್ಲಿ 20.94 ಲಕ್ಷ ಮತದಾರರು
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ತನ್ನ ಲೋಗೋ ಹೊಂದಿದ್ದ ಕ್ಯಾರಿ ಬ್ಯಾಗ್‌ ಗೆ ಗ್ರಾಹಕರಿಂದ 20 ರೂ. ವಸೂಲಿ ಮಾಡಿದ ಐಕಿಯಾ
    ರಾಷ್ಟ್ರೀಯ ಸುದ್ದಿ August 18, 2022

    ತನ್ನ ಲೋಗೋ ಹೊಂದಿದ್ದ ಕ್ಯಾರಿ ಬ್ಯಾಗ್‌ ಗೆ ಗ್ರಾಹಕರಿಂದ 20 ರೂ. ವಸೂಲಿ ಮಾಡಿದ ಐಕಿಯಾ

    By adminAugust 18, 2022No Comments2 Mins Read
    ikeya

    ಕೈ ಚೀಲಕ್ಕೆ 20 ರೂ. ವಸೂಲಿ ಮಾಡಿ ಭಾರೀ ಮುಜುಗರಕ್ಕೀಡಾದ ದೈತ್ಯ ಐಕಿಯಾ! ಐಕಿಯಾ ಲೋಗೋ ಹೊಂದಿರುವ ಕ್ಯಾರಿ ಬ್ಯಾಗ್‌ಗೆ 20 ರೂ. ಶುಲ್ಕ ವಿಧಿಸಿದ್ದ ಹೈದರಾಬಾದ್‌ನ ಐಕಿಯಾ ಮಳಿಗೆಗೆ ಗ್ರಾಹಕ ನ್ಯಾಯಾಲಯ 6,000 ರೂ. ದಂಡ ವಿಧಿಸಿದೆ.

    35 ವರ್ಷ ವಯಸ್ಸಿನ ಸಿಕಂದರಾಬಾದ್‌ನ ಕಾನೂನು ವಿದ್ಯಾರ್ಥಿ ಕೆವಿನ್ ಸುಕೀರ್ತಿ ಅವರು 2020ರ ಜನವರಿಯಲ್ಲಿ ಹೈದರಾಬಾದ್‌ನ ಐಕಿಯಾ ಮಳಿಗೆಗೆ ಭೇಟಿ ನೀಡಿ 1071 ರೂ. ಮೌಲ್ಯದ ವಸ್ತುಗಳನ್ನು ಖರೀದಿಸಿದ್ದರು. ಈ ವೇಳೆ ಐಕಿಯಾ ತನ್ನದೇ ಹೆಸರಿರುವ ಕೈ ಚೀಲವನ್ನು ನೀಡಿ ಅದಕ್ಕೆ 20 ರೂ. ವಸೂಲಿ ಮಾಡಿತ್ತು. ಇದರ ವಿರುದ್ಧ ಕೆವಿನ್‌ ಗ್ರಾಹಕ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 12ರ ಅಡಿಯಲ್ಲಿ ದೂರು ದಾಖಲಿಸಿದ್ದರು.

    ಇದರ ವಿಚಾರಣೆ ನಡೆಸಿದ ನ್ಯಾಯಾಲಯ, ಕ್ಯಾರಿ ಬ್ಯಾಗ್‌ಗೆ 20 ರೂ. ಶುಲ್ಕ ವಿಧಿಸಿದ್ದರಿಂದ ಗ್ರಾಹಕರು “ಸೇವೆಯ ಕೊರತೆಯಿಂದ ಮಾನಸಿಕ ನೋವನ್ನು ಅನುಭವಿಸಿದ್ದಾರೆ.” ಮತ್ತು ಗ್ರಾಹಕರ ವೆಚ್ಚದಲ್ಲಿ ಐಕಿಯಾ ತನ್ನ ಬ್ರ್ಯಾಂಡ್‌ನ ಹೆಸರನ್ನು ಜಾಹೀರಾತು ಮಾಡುವುದು ಅನೈತಿಕ ವ್ಯಾಪಾರ ಅಭ್ಯಾಸವಾಗಿದೆ ಎಂದು ಹೇಳಿದೆ.

    ಈ ಸಂಬಂಧ ರಂಗಾರೆಡ್ಡಿ ಜಿಲ್ಲೆಯ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಕಂಪನಿಯ ಲೋಗೋ ಹೊಂದಿರುವ ಕ್ಯಾರಿ ಬ್ಯಾಗ್‌ಗಳಿಗೆ ಶುಲ್ಕ ವಿಧಿಸದಂತೆ ಐಕಿಯಾಗೆ ಸೂಚಿಸಿದೆ. ಜತೆಗೆ ಬ್ಯಾಗ್‌ಗೆ ವಿಧಿಸಿದ್ದ 20 ರೂ.ಗಳನ್ನು ದೂರುದಾರರಿಗೆ ಮರುಪಾವತಿಸಿ, ಮಾನಸಿಕ ಸಂಕಟಕ್ಕೆ ಪರಿಹಾರವಾಗಿ 1000 ರೂ.ಗಳನ್ನು ಪಾವತಿಸುವಂತೆ ಹೇಳಿದೆ. ಹಾಗೂ ಗ್ರಾಹಕ ಸಂರಕ್ಷಣಾ ಕಾಯ್ದೆಯ ಅರಿವು ಮೂಡಿಸುವ ಸಂಕೇತವಾಗಿ ಗ್ರಾಹಕ ಕಾನೂನು ನೆರವು ಖಾತೆಯಲ್ಲಿ 5000 ರೂ.ಗಳನ್ನು ಠೇವಣಿ ಮಾಡುವಂತೆ ಐಕಿಯಾಗೆ ನಿರ್ದೇಶನ ನೀಡಿದೆ.
    ಆಗಿದ್ದೇನು?

    ದೂರುದಾರ ಕೆವಿನ್ ಅವರು ಜನವರಿ 26, 2020ರಂದು ಹೈದರಾಬಾದ್‌ನಲ್ಲಿರುವ ಐಕಿಯಾ ಮಳಿಗೆಗೆ ಭೇಟಿ ನೀಡಿದ್ದರು. ಅವರು 1,071 ರೂ. ಮೌಲ್ಯದ ಕೆಲವು ವಸ್ತುಗಳನ್ನು ಖರೀದಿಸಿದ್ದರು. ತಮ್ಮ ಬಳಿ ಬ್ಯಾಗ್ ಇಲ್ಲದ ಕಾರಣ ಬಿಲ್ಲಿಂಗ್ ಕೌಂಟರ್‌ನಲ್ಲಿದ್ದ ವ್ಯಕ್ತಿ ಬ್ಯಾಗ್ ಬೇಕಾ? ಎಂದು ಕೇಳಿದ್ದ. ‘ವಿಧಿ ಇಲ್ಲದೆ ಕ್ಯಾರಿ ಬ್ಯಾಗ್ ಖರೀದಿಸಬೇಕಾಯಿತು’ ಎಂದು ಕೆವಿನ್‌ ಹೇಳಿದ್ದು, ಬ್ಯಾಗ್‌ನಲ್ಲಿ ಐಕಿಯಾ ಲೊಗೋ ಇರುವುದು ನಂತರ ಗಮನಕ್ಕೆ ಬಂತು. ನಂತರ ಈ ಸಂಬಂಧ ನ್ಯಾಯಾಲಯದ ಮೆಟ್ಟಿಲೇರಿದ ಅವರು, ಲೋಗೋ ಮುದ್ರಿಸಲಾದ ಬ್ಯಾಗ್‌ಗೆ ಶುಲ್ಕ ವಿಧಿಸುವುದು ಅನೈತಿಕ ವ್ಯಾಪಾರ ಅಭ್ಯಾಸ ಎಂದು ವಾದಿಸಿ ಜಯ ಸಾಧಿಸಿದ್ದಾರೆ.

    ಆಯೋಗಕ್ಕೆ ಪ್ರತಿಕ್ರಿಯಿಸಿದ್ದ ಐಕಿಯಾ, ಗ್ರಾಹಕರನ್ನು ಕೇಳಿಯೇ ನಾವು ಶುಲ್ಕ ವಿಧಿಸುತ್ತೇವೆ. ದೂರುದಾರರು 20 ರೂ. ಬ್ಯಾಗ್ ಖರೀದಿಸಲು ಇಚ್ಛೆ ವ್ಯಕ್ತಪಡಿಸಿ, ಒಪ್ಪಿಕೊಂಡಿದ್ದಾರೆ ಎಂದು ವಾದಿಸಿತ್ತು.
    ತಾನು ಇತರ ಉತ್ಪನ್ನಗಳಂತೆಯೇ ಪೇಪರ್‌ ಬ್ಯಾಗ್‌ಗಳನ್ನು ಮಾರಾಟ ಮಾಡುವುದಾಗಿ ಹೇಳಿದ ಐಕಿಯಾ, ಮಳಿಗೆಯಲ್ಲಿರುವ ಹೆಚ್ಚಿನ ವಸ್ತುಗಳು ಮೊದಲೇ ಪ್ಯಾಕ್‌ ಆಗಿರುತ್ತವೆ. ಇವುಗಳನ್ನು ಗ್ರಾಹಕರು ಖರೀದಿಸಿ ಪಾರ್ಕಿಂಗ್ ಸ್ಥಳ ಅಥವಾ ಅಂಗಡಿಯ ನಿರ್ಗಮನದವರೆಗೂ ಕೈಗಾಡಿಯಲ್ಲಿ ಕೊಂಡೊಯ್ಯಬಹುದು ಎಂದು ಹೇಳಿತ್ತು.

    ಆದರೆ ಐಕಿಯಾದ ವಾದವನ್ನು ಒಪ್ಪದ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಆಯುಕ್ತರು “ಕ್ಯಾರಿ ಬ್ಯಾಗ್‌ಗಳಿಗೆ ಶುಲ್ಕ ವಿಧಿಸಲು ಅನುಮತಿ ನೀಡಲು ಸಾಧ್ಯವಿಲ್ಲ. ಅದೂ ಕಂಪನಿಯ ಲೋಗೋವನ್ನು ಹೊಂದಿರುವಾಗ,” ಎಂದು ಜುಲೈ 18, 2022ರ ಆದೇಶದಲ್ಲಿ ಹೇಳಿದ್ದಾರೆ. ಬ್ಯಾಗ್‌ಗಳು ಕಂಪನಿಯ ಲೋಗೋವನ್ನು ಹೊಂದಿರುವುದರಿಂದ, ಪ್ರವೇಶ ದ್ವಾರದಲ್ಲಿ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‌ಗಳಿಗೆ ಶುಲ್ಕ ವಿಧಿಸಲಾಗುತ್ತದೆ ಎಂದು ಹೇಳಿರುವುದು ಅದರ ವಾದಕ್ಕೆ ವಿರುದ್ಧವಾಗಿದೆ ಎಂದು ಆಯೋಗ ಹೇಳಿದೆ.

    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

    admin
    • Website

    Related Posts

    ಭಾರತೀಯ ಷೇರು ಮಾರುಕಟ್ಟೆಗೆ ಭಾರೀ ಹೊಡೆತ: ₹30 ಲಕ್ಷ ಕೋಟಿ ಸಂಪತ್ತು ಕರಗಲು 10 ಕಾರಣಗಳೇನು?

    October 28, 2026

    ಕ್ರೆಡಿಟ್ ಕಾರ್ಡ್ ಹೊಂದಿರುವ ಪತಿ ಮೃತಪಟ್ಟರೆ ಸಾಲವನ್ನು ಪತ್ನಿ ತೀರಿಸಬೇಕಾ? ಬ್ಯಾಂಕಿಂಗ್ ನಿಯಮಗಳೇನು?

    October 26, 2026

    PM Kisan ಹಣ ಯಾವಾಗ ಬರುತ್ತೆ? ರೈತರು ಈ ಕೆಲಸಗಳನ್ನು ಮಾಡದಿದ್ದರೆ ಕಂತು ಸ್ಥಗಿತವಾಗಬಹುದು!

    October 26, 2026

    Comments are closed.

    Our Picks

    ಭಾರತೀಯ ಷೇರು ಮಾರುಕಟ್ಟೆಗೆ ಭಾರೀ ಹೊಡೆತ: ₹30 ಲಕ್ಷ ಕೋಟಿ ಸಂಪತ್ತು ಕರಗಲು 10 ಕಾರಣಗಳೇನು?

    October 28, 2026

    ಕ್ರೆಡಿಟ್ ಕಾರ್ಡ್ ಹೊಂದಿರುವ ಪತಿ ಮೃತಪಟ್ಟರೆ ಸಾಲವನ್ನು ಪತ್ನಿ ತೀರಿಸಬೇಕಾ? ಬ್ಯಾಂಕಿಂಗ್ ನಿಯಮಗಳೇನು?

    October 26, 2026

    PM Kisan ಹಣ ಯಾವಾಗ ಬರುತ್ತೆ? ರೈತರು ಈ ಕೆಲಸಗಳನ್ನು ಮಾಡದಿದ್ದರೆ ಕಂತು ಸ್ಥಗಿತವಾಗಬಹುದು!

    October 26, 2026

    ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ!  ಹವಾಮಾನ ಇಲಾಖೆಯಿಂದ ಮಹತ್ವದ ಸೂಚನೆ ಇಲ್ಲಿದೆ

    October 24, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಪತ್ರಕರ್ತನಿಗೆ ಪೊಲೀಸ್ ನೋಟಿಸ್: ಹಿಂಪಡೆಯಲು ಎಸ್ಪಿಗೆ ಮನವಿ

    October 28, 2026

    ತುಮಕೂರು : ನಗರದ ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತಕ್ಕೆ ‘ತುಮಕೂರು ಸ್ಕ್ವೇರ್’ ಎಂದು ಮರುನಾಮಕರಣ ಮಾಡುವ ಜಿಲ್ಲಾಡಳಿತದ ನಿರ್ಧಾರದ ಕುರಿತು…

    ಮರೇನಾಯಕನಹಳ್ಳಿಯಲ್ಲಿ ವೈಭವದ ವಾಲ್ಮೀಕಿ ಜಯಂತೋತ್ಸವ:   ಶ್ರೀ ಮಹರ್ಷಿ ವಾಲ್ಮೀಕಿ ಸೇವಾ ಟ್ರಸ್ಟ್ ಉದ್ಘಾಟನೆ; ಕುಂಭ-ಕಳಶ ಮೆರವಣಿಗೆ

    October 28, 2026

    ಮಧ್ಯರಾತ್ರಿ ನಾಯಿಗಳು ವಿಚಿತ್ರವಾಗಿ ಬೊಗಳುವುದೇಕೆ? ದೆವ್ವ ಕಾಣಿಸುತ್ತದೆಯೇ, ಇಲ್ಲಿದೆ ವೈಜ್ಞಾನಿಕ ಕಾರಣ!

    October 28, 2026

    ಭಾರತೀಯ ಷೇರು ಮಾರುಕಟ್ಟೆಗೆ ಭಾರೀ ಹೊಡೆತ: ₹30 ಲಕ್ಷ ಕೋಟಿ ಸಂಪತ್ತು ಕರಗಲು 10 ಕಾರಣಗಳೇನು?

    October 28, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.