ಸರಗೂರು: ತಾಲ್ಲೂಕಿನ ಬಿ ಮಟಕೆರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಂಕವಾಡಿ ಗ್ರಾಮದಲ್ಲಿ ಒಂದು ತಿಂಗಳು ಹಿಂದೆ ನಾಟಿ ಮಾಡಿದ ಭತ್ತವನ್ನು ಕಾಡಾನೆಗಳು ನಾಶಪಡಿಸಿದ್ದು, ಆನೆಗಳನ್ನು ಕಾಡಿಗೆ ಓಡಿಸಲು ಹೋದಾಗ ರೈತರನ್ನು ಹಿಂಬಾಲಿಸಿಕೊಂಡು ಬಂದು ಭೀತಿ ಸೃಷ್ಟಿಸಿರುವ ಘಟನೆ ಬಂಕವಾಡಿ ಗ್ರಾಮದಲ್ಲಿ ನಡೆದಿದೆ.
ತಿಂಗಳುಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿವ ರೈತರು ಯಾವುದೇ ಬೆಳೆಗಳನ್ನು ಬೆಳೆಯಲಾಗದೇ ಕಂಗೆಟ್ಟಿದ್ದಾರೆ.ಈ ನಡುವೆ ಕಾಡಿನಿಂದ ಬರುತ್ತಿರುವ ಆನೆಗಳು ಜಮೀನುಗಳಲ್ಲಿ ಬೆಳೆದಿರುವ ಫಸಳಿಗೆ ಬಂದ ಬೆಳೆಗಳನ್ನು ನಾಶ ಮಾಡುತ್ತಿದ್ದು, ಇದರಿಂದಾಗಿ 2 ರಿಂದ 3 ಲಕ್ಷಾಂತರ ನಷ್ಟವಾಗಿದೆ ಎಂದು ಪ್ರಕಾಶ್ ಗೌಡ ಎಂಬವರು ಅಳಲು ತೋಡಿಕೊಂಡಿದ್ದಾರೆ.
ಆನೆ ದಾಳಿ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದರೆ, ನಾವು ಅಲ್ಲಿದ್ದೇವೆ, ಇಲ್ಲಿದ್ದೇವೆ ಎಂಬ ನೆಪ ಹೇಳಿ ಸಮಸ್ಯೆಗಳಿಂದ ಜಾರಿಕೊಳ್ಳುತ್ತಿದ್ದಾರೆ. ಒತ್ತಡ ಹಾಕಿದರೆ, ಉಡಾಫೆ ಮಾತುಗಳನ್ನಾಡತ್ತಾರೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.
ಮೋಳೆಯೂರು ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಗಳು ಬಂದಿದ್ದ ಸಂದರ್ಭದಲ್ಲಿ ಗ್ರಾಮಸ್ಥರು ಸೇರಿಕೊಂಡು ಮನವಿ ಸಲ್ಲಿಸಿದರು. ಈ ವೇಳೆ ಜಿಲ್ಲಾಧಿಕಾರಿಗಳು ಕಾಡಾನೆಗಳನ್ನು ತಡೆಯಲು ಕಂಬಿಗಳನ್ನು ಅಳವಡಿಸಿಕೊಡಬೇಕೆಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಆದರೆ ಈವರೆಗೂ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಇದರಿಂದಾಗಿ ಸಾರ್ವಜನಿಕರು ಸಂಕಷ್ಟಕ್ಕೀಡಾಗಿದ್ದಾರೆ.
ಈ ಗ್ರಾಮಗಳು ಕಾಡಂಚಿನ ಭಾಗದಲ್ಲಿ ಇದ್ದಾವೆ. ಆದರೆ ಇವರಿಗೆ ಯಾವುದೇ ರಕ್ಷಣೆ ಇಲ್ಲ. ಒಂದು ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು. ಆದರೆ ಅರಣ್ಯ ಸಿಬ್ಬಂದಿ ಕಾಡು ಪ್ರಾಣಿಗಳು ಬರುವ ಸಮಯದಲ್ಲಿ ಕಾಡು ಭಾಗದಲ್ಲಿ ಇರುವುದಿಲ್ಲ. ಕಾಡಾನೆ ಇಳಿಯುವ ಜಾಗದಲ್ಲಿ ರೈಲು ಕಂಬಿಗಳನ್ನು ಮುರಿದು ಹೋಗಿವೆ.ಆನೆಗಳು ಇಳಿಯುವ ಜಾಗದಲ್ಲಿ ಮಣ್ಣನ್ನು ಎತ್ತಿಲ್ಲ ತಾಲ್ಲೂಕಿನ ಶಾಸಕರು ಹಾಗೂ ಅರಣ್ಯ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಅದನ್ನು ಸರಿಪಡಿಸಿ ರೈತರಿಗೆ ನೆರವಾಗಬೇಕು ಎಂದು ರೈತರು ಮತ್ತು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz