ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯದ್ಯಂತ ಭೀಮ ಯಾತ್ರೆ ಬಳಗದಿಂದ ಸದಸ್ಯತ್ವಕ್ಕೆ ಚಾಲನೆ ನೀಡಲಾಯಿತು. ತಾಲೂಕಿನ ಹಂಚಿಬರಟ್ಟಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭೀಮ ಯಾತ್ರೆ ಬಳಗ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿತು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಭೀಮ ಯಾತ್ರೆ ಬಳಗದ ಸದಸ್ಯ ಪ್ರಕಾಶ್, ಭೀಮ ಯಾತ್ರೆ ಒಂದು ಸಮಾನತೆಯನ್ನು ಸಾರುತ್ತದೆ ಮತ್ತು ಯಾವುದೇ ರಾಜಕೀಯಕ್ಕೆ ಕಿವಿಕೊಡದೆ ಬಾಬಾ ಸಾಹೇಬರ ಸಮಾನತೆ ಸಂದೇಶಕ್ಕೆ ನಾವು ಬದ್ಧರಾಗಬೇಕೆಂದರು.
ವಕೀಲ ರವಿ ಮಾತನಾಡಿ, ಭೀಮ ಯಾತ್ರೆ ಬಳಗ ಕೇವಲ ಒಂದು ಸಮಾಜಕ್ಕೆ ಸೀಮಿತವಲ್ಲ ಎಲ್ಲ ಜನಾಂಗದ ಒಗ್ಗಟ್ಟಿಗೆ ಸಾಕ್ಷಿಯಾಗಿದೆ. ಈಗಿನ ಸಂದರ್ಭದಲ್ಲಿ ತಾಲೂಕಿನ ಸದಸ್ಯತ್ವ ನಡೆಯುತ್ತಿದೆ ಎಲ್ಲರೂ ಸದಸ್ಯ ಪಡೆದುಕೊಳ್ಳಿ ಎಂದು ಮನವಿ ಮಾಡಿದರು.
ಇದೆ ಸಂದರ್ಭದಲ್ಲಿ ಪ್ರಸನ್ನ, ರಾಘವೇಂದ್ರ, ಪ್ರಕಾಶ್, ಶ್ರೀನಿವಾಸ್, ಜಗದೀಶ್, ಕುಮಾರಸ್ವಾಮಿ ಶಿವಕುಮಾರ್ ಮೊದಲಾದವರಿದ್ದರು. ಕಾರ್ಯಕ್ರಮದಲ್ಲಿ ಭೀಮ ಯಾತ್ರೆಯ ಸದಸ್ಯರಾದ ಶರಣಪ್ಪ ಜಿ. ರವೀಂದ್ರ ಡಿ. ಕುಮಾರಸ್ವಾಮಿ ಮಂಜುನಾಥ ಎಸ್. ರಘು ಆರ್. ಪ್ರಕಾಶ್ ಜೆ. ಪ್ರಸನ್ನ ಕೃಷ್ಣಮೂರ್ತಿ ರುದ್ರಮುನಿ ಶಾಂತಕುಮಾರ್ ಕಣಮೇಶ್ ನರಹರಿ ಜಯಪ್ಪ ಲಕ್ಷ್ಮಣ ಅಭಿ ಭೀಮ ಯಾತ್ರೆ ಎಲ್ಲ ಸದಸ್ಯರು ಭಾಗವಹಿಸಿದ್ದರು.
ವರದಿ: ಮುರುಳಿಧರನ್ ಆರ್. ಚಿತ್ರದುರ್ಗ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz