ಬೆಂಗಳೂರು : ಪೂರ್ಣ ಪ್ರಮಾಣ ಮನೆ ಬಿದ್ದವರಿಗೆ 24 ಗಂಟೆ ಒಳಗೆ ಪರಿಹಾರ ಕೊಡ್ತಾ ಇದೀವಿ. ಇಷ್ಟೊಂದು ಪ್ರಮಾಣದಲ್ಲಿ ಯಾರು ಹಣವನ್ನು ಕೊಟ್ಟಿಲ್ಲ ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದರು.
ವಿಧಾನಸಭೆಯಲ್ಲಿ ಮಾತನಾಡಿದ ಅವರು, ನಾವು 2019ರಲ್ಲಿ 46,959 ಮನೆಗಳಿಗೆ 828.67 ರೂ. ಪರಿಹಾರ ಕೊಟ್ಟಿದ್ದೇವೆ. 2019ರಲ್ಲೇ ಬೆಳಗಾವಿಗೆ 120.05 ಕೋಟಿ ರೂ. ಕೊಟ್ಟಿದ್ದೇವೆ. ಇಷ್ಟು ಪ್ರಮಾಣದಲ್ಲಿ ಪರಿಹಾರವನ್ನು 75 ವರ್ಷದಲ್ಲಿ ಯಾರು ಒಂದೇ ಜಿಲ್ಲೆಗೆ ಕೊಟ್ಟಿಲ್ಲ. ಮೂರು ವರ್ಷದಲ್ಲೇ ಬೆಳಗಾವಿಗೆ 1726 ಕೋಟಿ ರೂಪಾಯಿ ನೀಡಿದ್ದೇವೆ ಎಂದರು.
ಬೆಳೆ ಪರಿಹಾರದಲ್ಲಿ ನಮಗೆ ಹೊಲಕ್ಕೆ ಹೋಗಲು ಆಗ್ತಾ ಇಲ್ಲ. ಸರ್ವೇ ಮಾಡಲು ಆಗ್ತಾ ಇಲ್ಲ.ಹನಿಶ್ಚಿತವಾಗಿ ಸರ್ವೇ ಮಾಡ್ಬೇಕು ಅಂದ್ರೆ ಭೂಮಿ ಒಣಗಬೇಕು ಎಂದು ಹೇಳಿದರು.
ಈ ವೇಳೆ ಶಾಸಕ ಶಿವಾನಂದ್ ಮಾತನಾಡಿ , ಮೊದಲನೇ ಕಂತಿನ ಹಣ ಬಿಡುಗಡೆ ಆಗಿದೆ. ಆದರೆ, ಎರಡು ಮತ್ತು ಮೂರನೇ ಕಂತಿನ ಹಣ ಆದಷ್ಟು ಬೇಗ ಬಿಡುಗಡೆ ಮಾಡ್ಬೇಕು ಎಂದು ಮನವಿ ಮಾಡಿದರು. ಯಾರ್ ಯಾರ್ ಮನೆ ಕಟ್ಟಿಕೊಳ್ಳುತ್ತಿದ್ದಾರೆ, ಅವರಿಗೆ ಕಂತುಗಳಲ್ಲಿ ನಿಶ್ಚಿತವಾಗಿ ಹಣ ಬಿಡುಗಡೆ ಮಾಡುತ್ತಿದ್ದೇವೆ. ನಮ್ಮಲ್ಲಿ ಕೊಡಲು ಹಣ ಇದೆ. ಬೆಳಗಾವಿ ಜಿಲ್ಲಾಧಿಕಾರಿ ತಹಶೀಲ್ದಾರ್ ಅಕೌಂಟ್‌ನಲ್ಲಿ ಹಣ ಇದೆ. ಯಾವುದೇ ಕೊರತೆ ಇಲ್ಲ ಎಂದು ಹೇಳಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz