ನಗರದ ಸೇಂಟ್ ಜೋಸೆಫ್ ಕಾನ್ವೆಂಟ್ ಹೈಯರ್ ಪ್ರೈಮರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಮೂವರು ಬಾಲಕಿಯರು ನಾಪತ್ತೆಯಾಗಿರುವ ಘಟನೆ ಪುಲಕೇಶಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸೆಪ್ಟೆಂಬರ್ 6 ರಂದು ಮೂವರು ಬಾಲಕಿಯರು ನಾಪತ್ತೆಯಾಗಿದ್ದು, ಪೋಷಕರು ಪುಲಕೇಶಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಶಕ್ತೇಶ್ವರಿ , ವರುಣಿಕಾ, ನಂದಿನಿ ನಾಪತ್ತೆಯಾಗಿರುವ ಬಾಲಕಿಯರಾಗಿದ್ದಾರೆ.
ಕಾಣೆಯಾಗಿ 9 ದಿನವಾದರೂ ಇನ್ನೂ ಬಾಲಕಿಯರು ಪತ್ತೆಯಾಗಿಲ್ಲ. ಮಕ್ಕಳ ಬಗ್ಗೆ ಕೇಳಿದರೇ ಆಡಳಿತ ಮಂಡಳಿಯವರು ಸರಿಯಾಗಿ ಹೇಳುತ್ತಿಲ್ಲ ಎಂದು ಶಾಲಾ ಆಡಳಿತ ಮಂಡಳಿ ವಿರುದ್ಧ ದೂರು ನೀಡಿದ್ದಾರೆ.
ಮನೆಯಲ್ಲಿ ಸಮಸ್ಯೆ ಎಂದು ಪತ್ರ?ಮನೆಯಲ್ಲಿ ಸಮಸ್ಯೆ ಹಾಗಾಗಿ ಮನೆ ಬಿಟ್ಟು ಹೋಗ್ತಿದ್ದೀವಿ. ಓದಲು ಇಷ್ಟವಿಲ್ಲ ಹಾಗಾಗಿ ಮನೆ ಬಿಟ್ಟು ಹೋಗ್ತಿದ್ದೀವಿ ಎಂದು ಪತ್ರ ಬರೆದಿದ್ದಾರಂತೆ ಬಾಲಕಿಯರು ಎಂಬ ಮಾಹಿತಿ ಸಿಕ್ಕಿದೆ. ಶಕ್ತೀಶ್ವರಿ 9 ನೇ ತರಗತಿ, ವರುಣಿಕ 10 ನೇ ತರಗತಿ, ನಂದಿನಿ 9 ನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿಯರಾಗಿದ್ದಾರೆ.
ಬೆಂಗಳೂರಿನ ಪುಲಕೇಶಿ ನಗರದಿಂದ ನಾಪತ್ತೆಯಾಗಿರುವ ವಿದ್ಯಾರ್ಥಿಗಳ ಪತ್ತೆಗೆ ವಿಶೇಷ ತಂಡವನ್ನು ರಚನೆ ಮಾಡಲಾಗಿದೆ. ತಮಿಳುನಾಡು , ಆಂಧ್ರಪ್ರದೇಶ ಸೇರಿದಂತೆ ವಿವಿಧೆಡೆ ವಿದ್ಯಾರ್ಥಿನಿಯರಿಗಾಗಿ ಹುಡುಕಾಟವನ್ನು ನಡೆಸಲಾಗುತ್ತಿದೆ. ಆದರೆ ಈವರೆಗೂ ವಿದ್ಯಾರ್ಥಿನಿಯರು ಪತ್ತೆಯಾಗದಿರುವುದು ಪೋಷಕರ ಆತಂಕವನ್ನು ಹೆಚ್ಚು ಮಾಡಿದೆ.
ಹಿಂದೆ ಹೈಗ್ರೌಂಡ್ಸ್ ಠಾಣಾ ವ್ಯಾಪ್ತಿಯಲ್ಲಿಯೂ ವಿದ್ಯಾರ್ಥಿನಿಯರಿಬ್ಬರು ಮಾತನಾಡಿಕೊಂಡು ಮನೆಯನ್ನು ಬಿಟ್ಟಿದ್ದರು. ಬಳಿಕ ಹೈಗ್ರೌಂಡ್ಸ್ ಪೊಲೀಸರು ಬಾಲಕಿಯರನ್ನು ಹುಡುಕುವುದರಲ್ಲಿ ಯಶಸ್ವಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಸದ್ಯ ಪುಲಕೇಶಿನಗರ ಪೊಲೀಸರು ನಾಪತ್ತೆಯಾಗಿರುವ ಶಕ್ತೀಶ್ವರಿ , ವರುಣಿಕ, ನಂದಿನಿ ಎಂಬ ವಿದ್ಯಾರ್ಥಿನಿಯರಿಗಾಗಿ ತೀವ್ರವಾದ ಹುಡುಕಾಟವನ್ನು ನಡೆಸುತ್ತಿದ್ದಾರೆ. ಈ ವಿದ್ಯಾರ್ಥಿಯರ ಸುಳಿವು ಸಿಕ್ಕಲ್ಲಿ ಪುಲಕೇಶಿ ನಗರ ಪೊಲೀಸರಿಗೆ ಮಾಹಿತಿ ನೀಡುವಂತೆಯೂ ಕೋರಲಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy