ಸಿನಿಮಾ ಸೆಟ್‌ನಲ್ಲಿ ಆರೋಗ್ಯಕರ ವಾತಾವರಣವೇ ಇರಲಿಲ್ಲ ಎಂದು ಸ್ಯಾಂಡಲ್‌ವುಡ್ ನಟಿ ಆಶಿತಾ ಮೀಟೂ ಆರೋಪ ಮಾಡಿದ್ದಾರೆ. ‘ಸಿನಿಮಾಗಳಲ್ಲಿ ನಟನೆಗೆ ಅವಕಾಶ ನೀಡಲು ನೀವು ಇದನ್ನು ಮಾಡಿದರೆ ಮಾತ್ರ ಅವಕಾಶ ಕೊಡ್ತೀವಿ. ಇದನ್ನು ಮಾಡಿದ್ರೆ ಮಾತ್ರ ಎಕ್ಸ್ಟ್ರಾ ಅಮೌಂಟ್ ಕೊಡ್ತೀವಿ ಅಂತ ಹೇಳ್ತಾಯಿದ್ದರು’ ಎಂದು ಆಶಿತಾ ಹೇಳಿಕೊಂಡಿದ್ದಾರೆ.
ಖಾಸಗಿ ಸಂದರ್ಶನದಲ್ಲಿ ನಿರ್ದೇಶ ರಘುರಾಮ್ ಅವರೊಂದಿಗೆ ಮಾತನಾಡುವಾಗ ನಟಿ ಆಶಿತಾ ಅವರು ಗಂಭೀರ ಆರೋಪ ಮಾಡಿದ್ದಾರೆ. ನಿರ್ದೇಶ ರಘುರಾಮ್ ಅಶಿತಾ ಸಂದರ್ಶನದ ವೇಳೆ ಸಿನಿಮಾದಿಂದ ದೂರ ಉಳಿಯಲು ಕಾರಣ ಕೇಳಿದ ಸಂದರ್ಭದಲ್ಲಿ ಅಶಿತಾ ಮೀಟೂ ಆರೋಪ ಮಾಡಿದ್ದಾರೆ. ಅಶಿತಾ ತಮ್ಮ ಸಿನಿ ಜರ್ನಿಯನ್ನು ಮೆಲುಕು ಹಾಕುವಾಗ ಹೇಳಿದ ಹೇಳಿಕೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಸ್ಯಾಂಡಲ್‌ವುಡ್ ನಟಿ ಆಶಿತಾ ದೊಡ್ಡ ಆರೋಪವನ್ನು ಮಾಡಿದ್ದಾರೆ. ತಾವು ಸಿನಿಮಾ ಇಂಡಸ್ಟ್ರಿಯಿಂದ ದೂರವಾಗಲು ಕಾರಣವನ್ನು ನೀಡಿದ್ದಾರೆ. ಸ್ಯಾಂಟಲ್‌ವುಡ್‌ನಲ್ಲಿ ಇನ್ನೂ ಕೂಡ ಸುರಕ್ಷಿತತೆ ಇಲ್ಲ. ಸಾಕಷ್ಟು ಸೆಟ್‌ನಲ್ಲಿ ಆರೋಗ್ಯಕರ ವಾತಾವರಣ ಇರಲಿಲ್ಲ. ತಮಗೂ ತೊಂದರೆಯಾಗಿದೆ ಎಂದು ಹೇಳಿದ್ದಾರೆ.
ಆದರೆ ಆಶಿತಾ ಯಾವ ಸಿನಿಮಾ? ಯಾವ ನಿರ್ದೇಶಕರಿಂದ? ಯಾವ ನಟರಿಂದ? ತಮ್ಮೊಂದಿಗೆ ಮುಜುಗರ ತರುವಂತ ಘಟನೆ ನಡೆದಿದೆ ಎಂದು ಹೇಳಿಕೊಂಡಿಲ್ಲ. ಆದರೆ ಆ ರೀತಿ ತಮಗೆ ಆಗಿತ್ತು ಎಂದು ಹೇಳಿಕೊಂಡಿದ್ದಾರೆ. ಅವರು ಬಯಸಿದಂತೆ ಇರಲಿಲ್ಲ ಎಂದು ಆರೋಪ ಮಾಡಿದ್ದಾರೆ. ನಂತರದ ಅವರು ಸಿನಿಮಾದಿಂದ ದೂರ ಸರಿದಿರುವುದಾಗಿ ಹೇಳಿಕೊಂಡಿದ್ದಾರೆ. ಆಶಿತಾ ರೋಡ್ ರೋಮಿಯೋ, ಹಾಟ್ ಬೀಟ್, ತವರಿನ ಸಿರಿ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಇವರ ಹೇಳಿಕೆ ಕೊಂಚ ವೈರಲ್ ಆಗುತ್ತಿದ್ದಂತೆ ನಟಿ ಸ್ಪಷ್ಟನೆ ನೀಡಿ, ಕನ್ನಡ ಚಿತ್ರದಲ್ಲಿ ಮೀಟೂ ಇನ್ನೂ ಜೀವಂತವಾಗಿದೆ. ಆದರೆ ಖುದ್ದು ಅನುಭವವಾಗಿಲ್ಲ. ನನ್ ಜೊತೆ ಆಗಿಲ್ಲ. ಆಗಿರೋದನ್ನು ನಾನು ನೋಡಿದ್ದೇನೆ. ಎಷ್ಟೋ ಸಿನಿಮಾ ಅವಕಾಶ ಬಂದರೂ ನನಗೆ ಅದು ಓದುವ ಸಂದರ್ಭವಾಗಿತ್ತು ಹೀಗಾಗಿ ಸಿನಿಮಾ ಮಾಡಲು ಆಗಲಿಲ್ಲ’ ಎಂದಿದ್ದಾರೆ.
ಎಲ್ಲಾ ಆರ್ಟಿಸ್ಟ್ ಜೊತೆಗೂ ಇದು ನಡೆದಿದೆ ಮತ್ತು ನಡೆಯುತ್ತೆ. ನನಗೆ ಅದು ಆಗಿದೆ ಎಂದು ನಾನು ಹೇಳಿಲ್ಲ. ಆದರೆ ಇದು ಆದರೆ ನಿಮಗೆ ಹೆಚ್ಚು ಸಂಬಳ ಎಂದು ನೇರವಾಗಿ ಕೇಳೋರು ಇದ್ದಾರೆ. ನನಗೂ ಕೇಳಿದ್ದಾರೆ. ಅದನ್ನು ನಾನು ನಿರಾಕರಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


