ಕೊರಟಗೆರೆ: ಪ್ರಿಯದರ್ಶಿನಿ ಫಾರ್ಮಸಿ ಕಾಲೇಜ್ ಆ್ಯಂಡ್ ಪಿ.ಜಿ. ಅವ್ಯವಸ್ಥೆಯ ಆಗರವಾಗಿದ್ದು, ಯಾರೂ ಹೇಳುವವರು ಕೇಳುವವರು ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ. ಕಾಲೇಜಿನ ವಿದ್ಯಾರ್ಥಿಗಳ ವರ್ತನೆಯ ವಿರುದ್ಧ ಸುತ್ತಮುತ್ತಲಿನ ನಿವಾಸಿಗಳು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊರಟಗೆರೆ ಪ್ರಿಯದರ್ಶಿನಿ ಫಾರ್ಮಸಿ ಕಾಲೇಜ್ ಹಾಗೂ ಪಿ.ಜಿ. ಕುರಿತಾಗಿ ನಮ್ಮತುಮಕೂರು ವಾಹಿನಿಯ ಎಕ್ಸ್ ಕ್ಲೂಸಿವ್ ಸ್ಟೋರಿ… ಈ ಕಾಲೇಜಿಗೆ ವಿದ್ಯಾರ್ಥಿಗಳು ಎಕ್ಸಾಂ ಟೈಮ್ ನಲ್ಲಿ ಬಂದ್ರೆ ಸಾಕು. ದಿನ ನಿತ್ಯ ಕಾಲೇಜಿಗೆ ಬರಬೇಕೆಂದಿಲ್ಲ, ಕಾಲೇಜಿಗೆ ಯಾರು ಯಾವಾಗ ಬೇಕಾದ್ರೂ ಬರಬಹುದು, ಹೋಗಬಹುದು. ಕಾಲೇಜಿಗೆ ಕನಿಷ್ಠ ಸೆಕ್ಯೂರಿಟಿ ಗಾರ್ಡ್ ಕೂಡ ಇಲ್ಲ. ಸಿಸಿ ಕ್ಯಾಮರಾಗಳಂತೂ ಇಲ್ವೇ ಇಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕಾಲೇಜಿಗೆ ಗೇಟುಗಳಿವೆ ಆದ್ರೆ, ಕಾಂಪೌಂಡ್ ಇಲ್ಲ. ಈ ಬಗ್ಗೆ ಕೇಳಿದ್ರೆ, ಕಾಲೇಜ್ ಪ್ರಾಂಶುಪಾಲನಿಗೆ ದೊಡ್ಡ ದೊಡ್ಡ ರಾಜಕೀಯ ವ್ಯಕ್ತಿಗಳ ಬೆಂಬಲವಿದೆ ಹಾಗಾಗಿ ಅವರು ಆಡಿದ್ದೇ ಆಟ ಅಂತಾರೆ ಇಲ್ಲಿನ ಜನ.
ಕಾಲೇಜಿನ ಪ್ರಾಂಶುಪಾಲರಿಗೆ ಹೊರ ರಾಜ್ಯದಿಂದ ಬರುವ ವಿದ್ಯಾರ್ಥಿಗಳೇ ಟಾರ್ಗೆಟ್, ಲಕ್ಷ ಲಕ್ಷ ದುಡ್ಡು ಕೊಟ್ರೆ ಸಾಕು ಬಿ ಫಾರ್ಮ್, ಡಿ ಫಾರ್ಮ್ ಸರ್ಟಿಫಿಕೇಟ್ ಕೈಗೆ ಸಿಗುತ್ತೆ ಎನ್ನಲಾಗ್ತಿದೆ.
ಇಲ್ಲಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಒಂದೇ ಪಿ.ಜಿ.ಯಲ್ಲಿ ಇರಬಹುದು. ಮೇಲ್ಭಾಗದಲ್ಲಿರುವ ರೂಂಗಳಲ್ಲಿ ಗಂಡು ಮಕ್ಕಳು, ಕೆಳಭಾಗದಲ್ಲಿರುವ ರೂಂಗಳಲ್ಲಿ ಹೆಣ್ಣುಮಕ್ಕಳು. ಯಾರು ಯಾವಾಗ ಯಾವ ರೂಮಿಗೆ ಬೇಕಾದರೂ ಹೋಗಬಹುದು ಹೇಳುವವರೂ ಇಲ್ಲ ಕೇಳುವವರೂ ಇಲ್ಲದಂತಹ ಸ್ಥಿತಿ ಇಲ್ಲಿದೆ ಅನ್ನೋ ಮಾತು ಕೇಳಿ ಬಂದಿದೆ.
ಪಿಜಿ ಬಳಿಯಲ್ಲಿ ವಿದ್ಯಾರ್ಥಿಗಳು ಗಲಾಟೆ ಮಾಡುತ್ತಿರುತ್ತಾರೆ, ರಾತ್ರಿ 1 ಗಂಟೆಯಾದ್ರೂ ಹೊರಗಡೆ ಸುತ್ತಾಡ್ತಿದ್ದಾರೆ, ಮದ್ಯ ಸೇವಿಸಿ ಬಾಟಲಿಗಳನ್ನು ಎಸೆಯುತ್ತಿದ್ದಾರೆ. ಗುಟ್ಕಾ ಪ್ಯಾಕೇಟ್ ಗಳ ರಾಶಿ ಹೀಗೆ ಸಾಲು ಸಾಲು ದೂರುಗಳನ್ನು ಸ್ಥಳೀಯರು ಹೇಳುತ್ತಿದ್ದಾರೆ.
ಸುಳ್ಳು ಸರ್ಟಿಫಿಕೇಟ್, ಕಾಲೇಜಿನ ಅವ್ಯವಸ್ಥೆಯ ಆರೋಪ
ವಿದ್ಯಾರ್ಥಿಗಳ ಕಾಟದಿಂದ ಬೇಸತ್ತ ಸ್ಥಳೀಯ ವ್ಯಕ್ತಿ
ಇನ್ನೂ, ಪ್ರಿಯದರ್ಶಿನಿ ಕಾಲೇಜಿನ ಸಿಬ್ಬಂದಿ ವರ್ಗವಂತೂ ಯಾರು ಏನಾದ್ರೂ ಮಾಡಿಕೊಳ್ಳಲಿ ಎನ್ನುವಂತಿದ್ದಾರೆ. ವೈದ್ಯಕೀಯ ಶಿಕ್ಷಣ ಸಚಿವರು ಈ ಬಗ್ಗೆ ಏನು ಕ್ರಮಕೈಗೊಳ್ಳುತ್ತಾರೆ ಎನ್ನುವ ಪ್ರಶ್ನೆಗಳನ್ನು ಜನ ಕೇಳುತ್ತಿದ್ದಾರೆ.
ವರದಿ: ಮಂಜುಸ್ವಾಮಿ.ಎಂ.ಎನ್., ಕೊರಟಗೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy