nammatumakuru

    Subscribe to Updates

    Get the latest creative news from FooBar about art, design and business.

    What's Hot

    ಅತ್ಯಾಧುನಿಕ ಜಿಲ್ಲಾಸ್ಪತ್ರೆ 18 ತಿಂಗಳಲ್ಲಿ ಸೇವೆಗೆ ಲಭ್ಯ: ತುಮಕೂರು ಜಿಲ್ಲಾಸ್ಪತ್ರೆ ಕಟ್ಟಡ ತೆರವುಗೊಳಿಸುವ ಕಾಮಗಾರಿಗೆ ಡಿಸಿಎಂ ಚಾಲನೆ

    June 9, 2026

    ಬ್ಯಾಂಕಿಂಗ್ ಪರೀಕ್ಷೆಗೆ ತರಬೇತಿ: ಜೂ.15ರೊಳಗೆ ಹೆಸರು ನೋಂದಾಯಿಸಿ

    June 9, 2026

    ತುಮಕೂರು: ಹಿರಿಯ ನಾಗರಿಕರ ಗುರುತಿನ ಚೀಟಿ ವಿಶೇಷ ಅಭಿಯಾನ

    June 9, 2026
    Facebook Twitter Instagram
    ಟ್ರೆಂಡಿಂಗ್
    • ಅತ್ಯಾಧುನಿಕ ಜಿಲ್ಲಾಸ್ಪತ್ರೆ 18 ತಿಂಗಳಲ್ಲಿ ಸೇವೆಗೆ ಲಭ್ಯ: ತುಮಕೂರು ಜಿಲ್ಲಾಸ್ಪತ್ರೆ ಕಟ್ಟಡ ತೆರವುಗೊಳಿಸುವ ಕಾಮಗಾರಿಗೆ ಡಿಸಿಎಂ ಚಾಲನೆ
    • ಬ್ಯಾಂಕಿಂಗ್ ಪರೀಕ್ಷೆಗೆ ತರಬೇತಿ: ಜೂ.15ರೊಳಗೆ ಹೆಸರು ನೋಂದಾಯಿಸಿ
    • ತುಮಕೂರು: ಹಿರಿಯ ನಾಗರಿಕರ ಗುರುತಿನ ಚೀಟಿ ವಿಶೇಷ ಅಭಿಯಾನ
    • ತುಮಕೂರು: ಜೂ. 13–14ರಂದು ಆಟೋ ಎಕ್ಸ್ ಪೋ
    • ವಿಶ್ವ ವಿಕಲಚೇತನರ ದಿನಾಚರಣೆ: ರಾಷ್ಟ್ರ ಪ್ರಶಸ್ತಿಗೆ ಅರ್ಜಿ ಆಹ್ವಾನ
    • ಕೋಳಿ ಸಾಕಾಣಿಕೆ ತರಬೇತಿಗೆ ಅರ್ಜಿ ಆಹ್ವಾನ: ಜೂ.30 ಕೊನೆಯ ದಿನ
    • ನೀವೂ ಬಿಗ್ ಬಾಸ್ ಮನೆಗೆ ಹೋಗಬೇಕಾ? ಆಡಿಷನ್ ನಲ್ಲಿ ಭಾಗವಹಿಸಲು ಏನು  ಮಾಡಬೇಕು?
    • ಪಾವಗಡ: ಜೂ.25 ರಂದು ಕೆ.ಸೇವಾಲ್ ಪುರದಲ್ಲಿ ಶ್ರೀ ತೊಳಜಸತ್ತಿ (ಲಕ್ಷ್ಮೀ) ದೇವಾಲಯದ 4ನೇ ವರ್ಷದ ವಾರ್ಷಿಕೋತ್ಸವ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಪಕ್ಷ ಬೆಳವಣಿಗೆಗೆ ಕಾರ್ಯಕರ್ತರ ಶ್ರಮ ಅಮೂಲ್ಯ: ಸಚಿವರಾದ ಬಿ.ಸಿ.ನಾಗೇಶ್
    ಮಧುಗಿರಿ October 5, 2022

    ಪಕ್ಷ ಬೆಳವಣಿಗೆಗೆ ಕಾರ್ಯಕರ್ತರ ಶ್ರಮ ಅಮೂಲ್ಯ: ಸಚಿವರಾದ ಬಿ.ಸಿ.ನಾಗೇಶ್

    By adminOctober 5, 2022No Comments2 Mins Read
    madugire

    ಮಧುಗಿರಿ: ಕಳೆದ ಹಲವಾರು ವರ್ಷಗಳಿಂದ ಪಕ್ಷದ ಕಾರ್ಯಕರ್ತರ ಶ್ರಮದಿಂದ ಈ ದೇಶಾದ್ಯಂತ ಇಂದು ಬಿಜೆಪಿ ಪಕ್ಷ ಸಂಘಟನಾತ್ಮಕವಾಗಿ, ರಾಜಕೀಯವಾಗಿ ಬೆಳೆದು ಅಧಿಕಾರದ ಚುಕ್ಕಾಣಿ ಹಿಡಿದಿದೆ, ಸಂಘಟನಾ ಹಾಗೂ ದೇಶದ ಜನರ ಮೇಲೆ ಮೋದಿ ಅವರು ವಿಶ್ವಾಸ ಇಟ್ಕೊಂಡು ದೇಶದಲ್ಲಿ ಪರಿವರ್ತನೆ ಆಗಬೇಕು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.

    ದಿಂದಯಲ್ ಜಿ ಕಂಡ ಅಂತ್ಯೋದಯ ಕಾರ್ಯಕ್ರಮ ಅನುಷ್ಠಾನಗೊಳ್ಳಬೇಕು ಎಂದಾಗ ಜನರು ಸಂಪೂರ್ಣ ಬೆಂಬಲ ಸೂಚಿಸಿ ಅಧಿಕಾರ ಕೊಟ್ಟಿದ್ದಾರೆ. ಹಿಂದೆ ಅಟಲ್ಜಿ ಅವರು ದೇಶದ ಪ್ರಧಾನಿಯಾಗಿದ್ದಾಗ ಈ ದೇಶವನ್ನು ಮುನ್ನಡೆಸಿ ಸಾಲದಲ್ಲಿ ಮುಳುಗಿದ ದೇಶವನ್ನು ಸಾಲ ಮುಕ್ತವಾಗಿ ಮಾಡಿ ದೇಶದ ಎಲ್ಲಾ ರಾಜ್ಯಗಳನ್ನು ಅಭಿವೃದ್ಧಿಪಡಿಸಲು ಚಿಂತೆ ಮಾಡಿದರು. ಅದೇ ರೀತಿ ಮೋದಿಯವರು ಸಹ ದೇಶದ ಜನಸಾಮಾನ್ಯರ ನೆಮ್ಮದಿಗೆ, ಅಭಿವೃದ್ಧಿಗೆ ಸಹಕರಣ ಕೆಲಸ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ. ದೇಶಭಕ್ತರ ಆಧಾರದ ಮೇಲೆ ದೇಶ ಕಟ್ಟಲು ಮುಂದಾಗಿದ್ದು ಆದ್ದರಿಂದ ನಮ್ಮ ಪಕ್ಷವು ಸಂಘಟನೆಗೆ ಹೆಚ್ಚಿನ ಒತ್ತು ನೀಡುತ್ತಿದೆ ಎಂದು ತಿಳಿಸಿದರು.


    Provided by
    Provided by

    ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಕೆ.ಮಂಜುನಾಥ್ ಮಾತನಾಡಿ, ಜಿಲ್ಲೆಯಲ್ಲಿ ಆತ್ಮೀಯವಾಗಿ ಕಾರ್ಯಕರ್ತರಿಗೆ ಹಾಗೂ ಜನಸಾಮಾನ್ಯರಿಗೆ ಗೌರವ ಕೊಡುವ ಏಕೈಕ ವ್ಯಕ್ತಿ ಎಂದರೆ ಅದು ಶಿಕ್ಷಣ ಸಚಿವರಾದ ಬಿ.ಸಿ.ನಾಗೇಶ್ ರವರು. ಹಿಂದುಳಿದ ವರ್ಗದಿಂದ ನಾನು 2008ರಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದಾಗ ಆ ಸಮಯದಲ್ಲಿ ನನಗೆ ಒಂದು ಕಿವಿ ಮಾತು ಹೇಳಿದರು. ಅದು ಏನೆಂದರೆ, ಪಕ್ಷಕ್ಕೆ ಗೌರವ ಕೊಟ್ಟು ಕೆಲಸ ಮಾಡಿದಾಗ ಮಾತ್ರ ಪಕ್ಷದಲ್ಲಿ ಉನ್ನತ ಸ್ಥಾನಕ್ಕೆ ಏರಬಹುದು. ಇವತ್ತು ಆ ಮಾತು ನೂರಕ್ಕೆ ನೂರರಷ್ಟು ಸತ್ಯವಾಗಿದೆ. ನಾನು ಜಿಲ್ಲಾ ಅಧ್ಯಕ್ಷ ಸ್ಥಾನದಲ್ಲಿ ಕೆಲಸ ಮಾಡುತ್ತಿದ್ದೇನೆ. ಜಿಲ್ಲೆಯಲ್ಲಿ ಇಂತಹ ವ್ಯಕ್ತಿ ಇರುವುದೇ ನಮ್ಮ ಪುಣ್ಯ ಇವರ ಮಾರ್ಗದರ್ಶನ ನೆರಳಲ್ಲಿ ಹಲವಾರು ಕಾರ್ಯಕರ್ತರು ಬೆಳೆದು ಉನ್ನತ ಸ್ಥಾನದಲ್ಲಿ ಕೆಲಸ ಮಾಡುತ್ತಿರುವುದು ನಾವು ನೋಡಬಹುದು, ಈ ದಿನ ನಮ್ಮ ಮಧುಗಿರಿ ಮಂಡಲ ಕಚೇರಿಗೆ ಬಂದು ಕಾರ್ಯಕರ್ತರನ್ನು ಕುರಿತು ಮಾತನಾಡಿರುವುದು ನಮ್ಮ ಸೌಭಾಗ್ಯ ಎಂದು ತಿಳಿಸಿದರು.

    ಬಿಜೆಪಿ ಮಂಡಲ ಅಧ್ಯಕ್ಷರಾದ ನರಸಿಂಹಮೂರ್ತಿ ಮಾತನಾಡಿ, ತಾಲೂಕಿನ ಬಿಜೆಪಿ ಮಂಡಲ ಅಧ್ಯಕ್ಷ ಸ್ಥಾನ ಮಾನ ನನಗೆ ಸಿಕ್ಕಿದೆ ಅಂದರೆ ಅದು ನಮ್ಮ ಗುರುಗಳು ಸಚಿವರಾದ ಬಿ ಸಿ ನಾಗೇಶ್ ರವರ ಆದರ್ಶ ಮಾರ್ಗದಿಂದ ಮಾತ್ರ,ಸಚಿವರು ಮಾರಮ್ಮ ತಾಯಿಯ ದರ್ಶನ ಪಡೆದು ಈ ದಿನ ನಮ್ಮ ಮಂಡಲ ಕಚೇರಿಗೆ ಭೇಟಿ ಕೊಟ್ಟಿರುವುದು ತುಂಬಾನೇ ಸಂತೋಷದ ವಿಚಾರ, ಸಚಿವರು ಮುಂದಿನ ದಿನಗಳಲ್ಲಿ ಉನ್ನತ ಸ್ಥಾನಕ್ಕೇರಬೇಕು, ಪಕ್ಷಕ್ಕೆ ಇವರ ಶ್ರಮ ಹೋರಾಟ ನಮ್ಮೆಲ್ಲ ಕಾರ್ಯಕರ್ತರಿಗೆ ಒಂದು ಮಾರ್ಗದರ್ಶನ ಇದ್ದಹಾಗೆ, ಕಾರ್ಯಕರ್ತರು ಇವರ ಮಾರ್ಗದರ್ಶನವನ್ನು ಸದ್ಬಳಕೆ ಮಾಡಿಕೊಳ್ಳಲಿ ಎಂದು ಆಶಿಸಿದರು.

    ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಲಕ್ಷ್ಮೀಪತಿ, ರಾಜ್ಯ ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಸುರೇಶ್ ಬಾಬು, ಮಾಜಿ ಶಾಸಕರಾದ ಗಂಗಹನುಮಯ್ಯ, ರಾಜ್ಯ ಕಾರ್ಯಕಾರಿಣಿ ಸದಸ್ಯ ರುದ್ರೇಶ್.ಎಂ.ವೈ, ಜಿಲ್ಲಾ ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಹನುಮಂತರಾಜು ದುರ್ಗಿ ವೆಂಕಟೇಶ್, ಮಂಡಲ ಒಬಿಸಿ ಮೋರ್ಚಾ ಅಧ್ಯಕ್ಷ ಜಗಧೀಶ ಆಚಾರ್, ಹಿರಿಯ ಮುಖಂಡರಾದ ಡಾ.ವೆಂಕಟರಾಮಯ್ಯ, ಜಿಲ್ಲಾ ಮಾಧ್ಯಮ ಪ್ರಮುಖ್ ಆದಿಶೇಷ ಗುಪ್ತ, ಕಾರ್ಯಾಲಯ ಕಾರ್ಯದರ್ಶಿ ಸುರೇಶ್, ಯುವ ಮೋರ್ಚಾ ಅಧ್ಯಕ್ಷ ಕಾರ್ತಿಕ್ ಆರಾಧ್ಯ, ಪದಾಧಿಕಾರಿಗಳಾದ ತಿಮ್ಮಜ್ಜ, ಡಾ.ವೆಂಕಟರವಣಪ್ಪ, ನಾಗೇಂದ್ರ, ಜಯಣ್ಣ, ದೀಕ್ಷಿತ್ ಹಾಗೂ ಮುಂತಾದವರು ಇದ್ದರು.

    ವರದಿ : ಅಬಿದ್ ಮಧುಗಿರಿ

    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

    admin
    • Website

    Related Posts

    ಬಿತ್ತನೆ ಬೀಜ:  ರೈತರು ಸದುಪಯೋಗ ಮಾಡಿಕೊಳ್ಳಿ: ಶಾಸಕ ಕೆ.ಎನ್.ರಾಜಣ್ಣ ಕರೆ

    June 7, 2026

    ರಾಮಲಿಂಗಾರೆಡ್ಡಿ ರಾಜೀನಾಮೆ ಬಗ್ಗೆ ಕೆ.ಎನ್. ರಾಜಣ್ಣ ಪ್ರತಿಕ್ರಿಯೆ:  ಯಾವ ‘ಟ್ರಬಲ್ ಶೂಟರ್’ ಎಂದು ಪ್ರಶ್ನೆ!

    June 5, 2026

    ಮಿಡಿಗೇಶಿ: ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಕಾರು; ಯುವಕ ಪ್ರಾಣಾಪಾಯದಿಂದ ಪಾರು!

    June 2, 2026

    Comments are closed.

    Our Picks

    ಮಗಳ ಗಂಡನನ್ನೇ ವರಿಸಿದ ಅತ್ತೆ: ಕದ್ದುಮುಚ್ಚಿ ಶುರುವಾದ ಪ್ರೀತಿಗೆ ಬಿತ್ತು ಮದುವೆ ಮುದ್ರೆ!

    June 8, 2026

    ಪೈಲ್ವಾನ್ ಜೊತೆ ಕುಸ್ತಿಯಾಡು ಎಂದು ಹೆಂಡತಿಯನ್ನೇ ಮುಂದೆ ಬಿಟ್ಟ ಖ್ಯಾತ ನಟ: ಮುಂದೇನಾಯ್ತು?

    June 8, 2026

    ಪತ್ನಿಗೆ ರಾಜ್ಯಸಭಾ ಆಫರ್ ನಿರಾಕರಿಸಿದ ಸಿದ್ದರಾಮಯ್ಯ; 3 ಡಿಸಿಎಂ ಹುದ್ದೆಗಾಗಿ ಪಟ್ಟು!

    June 1, 2026

    ದ್ವೇಷ ಭಾಷಣ ಮಸೂದೆಗೆ ಕೇಂದ್ರ ಗೃಹ ಸಚಿವಾಲಯ ಬ್ರೇಕ್: ಕರ್ನಾಟಕ ಸರ್ಕಾರಕ್ಕೆ ಭಾರಿ ಹಿನ್ನಡೆ!

    May 26, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಅತ್ಯಾಧುನಿಕ ಜಿಲ್ಲಾಸ್ಪತ್ರೆ 18 ತಿಂಗಳಲ್ಲಿ ಸೇವೆಗೆ ಲಭ್ಯ: ತುಮಕೂರು ಜಿಲ್ಲಾಸ್ಪತ್ರೆ ಕಟ್ಟಡ ತೆರವುಗೊಳಿಸುವ ಕಾಮಗಾರಿಗೆ ಡಿಸಿಎಂ ಚಾಲನೆ

    June 9, 2026

    ತುಮಕೂರು: ಸಾರ್ವಜನಿಕರ ಬೇಡಿಕೆಯಂತೆ ಆಧುನಿಕ ಸೌಲಭ್ಯಗಳ ಜಿಲ್ಲಾಸ್ಪತ್ರೆ 18 ತಿಂಗಳಲ್ಲಿ ಜನಸೇವೆಗೆ ಸಿಗಲಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್…

    ಬ್ಯಾಂಕಿಂಗ್ ಪರೀಕ್ಷೆಗೆ ತರಬೇತಿ: ಜೂ.15ರೊಳಗೆ ಹೆಸರು ನೋಂದಾಯಿಸಿ

    June 9, 2026

    ತುಮಕೂರು: ಹಿರಿಯ ನಾಗರಿಕರ ಗುರುತಿನ ಚೀಟಿ ವಿಶೇಷ ಅಭಿಯಾನ

    June 9, 2026

    ತುಮಕೂರು: ಜೂ. 13–14ರಂದು ಆಟೋ ಎಕ್ಸ್ ಪೋ

    June 9, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.