nammatumakuru

    Subscribe to Updates

    Get the latest creative news from FooBar about art, design and business.

    What's Hot

    ತಿಪಟೂರಿನಲ್ಲಿ ಹೋಟೆಲ್ ಹಾಗೂ ಡಾಬಾಗಳ ಮೇಲೆ ಜಂಟಿ ದಾಳಿ: ಕಳಪೆ ಆಹಾರ ಪದಾರ್ಥಗಳು ವಶ

    September 12, 2026

    100 ದಿನಗಳ ಆಡಳಿತದಲ್ಲಿ ಯಾವುದೇ ಸಾಧನೆಯಿಲ್ಲ: ಸಿಎಂ ಡಿ.ಕೆ. ಶಿವಕುಮಾರ್ ರಿಯಲ್ ಎಸ್ಟೇಟ್ ಏಜೆಂಟ್ ಥರ ಕಾಣ್ತಾರೆ: ಆರ್.ಅಶೋಕ್ ವಾಗ್ದಾಳಿ

    September 12, 2026

    ಇ.ಡಿ.ಗೆ ದೂರು ನೀಡಿದವರು ಯಾರೆಂದು ನನಗೆ ತಿಳಿದಿದೆ: ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟನೆ

    September 12, 2026
    Facebook Twitter Instagram
    ಟ್ರೆಂಡಿಂಗ್
    • ತಿಪಟೂರಿನಲ್ಲಿ ಹೋಟೆಲ್ ಹಾಗೂ ಡಾಬಾಗಳ ಮೇಲೆ ಜಂಟಿ ದಾಳಿ: ಕಳಪೆ ಆಹಾರ ಪದಾರ್ಥಗಳು ವಶ
    • 100 ದಿನಗಳ ಆಡಳಿತದಲ್ಲಿ ಯಾವುದೇ ಸಾಧನೆಯಿಲ್ಲ: ಸಿಎಂ ಡಿ.ಕೆ. ಶಿವಕುಮಾರ್ ರಿಯಲ್ ಎಸ್ಟೇಟ್ ಏಜೆಂಟ್ ಥರ ಕಾಣ್ತಾರೆ: ಆರ್.ಅಶೋಕ್ ವಾಗ್ದಾಳಿ
    • ಇ.ಡಿ.ಗೆ ದೂರು ನೀಡಿದವರು ಯಾರೆಂದು ನನಗೆ ತಿಳಿದಿದೆ: ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟನೆ
    • ಪಂಚ ಗ್ಯಾರಂಟಿ ಯೋಜನೆಗಳು ನನ್ನ ಅಧ್ಯಕ್ಷತೆಯಲ್ಲೇ ರೂಪುಗೊಂಡವು: ಡಿ.ಕೆ. ಶಿವಕುಮಾರ್
    • 80ರ ದಶಕದ AI ಫೋಟೋ ಟ್ರೆಂಡ್‌: ಸಾರ್ವಜನಿಕರಿಗೆ ಸೈಬರ್ ತಜ್ಞರು, ಪೊಲೀಸರ ಎಚ್ಚರಿಕೆ!
    • ಹಾಸನದಲ್ಲಿ ನೂತನ ಜಿಲ್ಲಾಧಿಕಾರಿ ಕಚೇರಿ ಹಾಗೂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ ಪರಿಶೀಲನೆ
    • ಪಾವಗಡದಲ್ಲಿ ಮರುಕಳಿಸಿದ ನಕ್ಸಲ್ ಭೀತಿ: ದೇವಣ್ಣ ದಳಂ ಹೆಸರಿನಲ್ಲಿ ರೈತನಿಗೆ 5 ಲಕ್ಷ ರೂ. ಬೇಡಿಕೆ!
    • ತುಮಕೂರು ಸ್ಕ್ವೇರ್‌, ಕಾರಂಜಿಗೆ ಡಿಸಿಎಂ ಶಿಲಾನ್ಯಾಸ:  ಎಸ್‌ ಎಸ್‌ ವೃತ್ತದ 4 ದಿಕ್ಕಿನಲ್ಲೂ ಬೃಹತ್‌ ಎಲ್‌ ಇಡಿ ಅಳವಡಿಕೆಗೆ ಚಾಲನೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಬದುಕು ಉಜ್ವಲವಾಗಲು ಶಿಕ್ಷಣವೇ ಮುಖ್ಯ ಅಸ್ತ್ರ: ಶಾಸಕ ಕೆ.ಎನ್‌. ರಾಜಣ್ಣ ಕರೆ
    ಮಧುಗಿರಿ July 19, 2026

    ಬದುಕು ಉಜ್ವಲವಾಗಲು ಶಿಕ್ಷಣವೇ ಮುಖ್ಯ ಅಸ್ತ್ರ: ಶಾಸಕ ಕೆ.ಎನ್‌. ರಾಜಣ್ಣ ಕರೆ

    By adminJuly 19, 2026No Comments2 Mins Read
    madhugiri

    ಮಧುಗಿರಿ: ಪ್ರತಿ ವ್ಯಕ್ತಿಯ ಬದುಕು ಉಜ್ವಲವಾಗಲು ಶಿಕ್ಷಣ ಅತ್ಯಂತ ಪ್ರಮುಖವಾದ ಅಸ್ತ್ರವಾಗಿದೆ ಎಂದು ಶಾಸಕ ಕೆ.ಎನ್. ರಾಜಣ್ಣ ಅಭಿಪ್ರಾಯಪಟ್ಟರು.

    ಪಟ್ಟಣದ ಕನ್ನಡ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ (ಕಸಾಪ) ವತಿಯಿಂದ ಆಯೋಜಿಸಲಾಗಿದ್ದ ಎಸ್‌ ಎಸ್‌ ಎಲ್‌ ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯ ಕನ್ನಡ ಭಾಷೆಯಲ್ಲಿ ಶೇ. 100 ರಷ್ಟು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಶ್ರಮಿಸಿದವರಿಗೆ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕನ್ನಡ ವಿಷಯದಲ್ಲಿ ಶೇ. 100 ರಷ್ಟು ಅಂಕ ಗಳಿಸುವುದು ಸಾಮಾನ್ಯದ ಮಾತಲ್ಲ. ವಿದ್ಯಾರ್ಥಿಗಳು ಸ್ವಚ್ಛ ಹಾಗೂ ವ್ಯಾಕರಣಬದ್ಧವಾಗಿ ಕನ್ನಡ ಬರೆಯುವುದನ್ನು ಮತ್ತು ಮಾತನಾಡುವುದನ್ನು ಕಲಿಯಬೇಕು. ಶಿಕ್ಷಣದ ಜೊತೆಗೆ ಮೌಲ್ಯಯುತ ಜ್ಞಾನ ಹಾಗೂ ಗುರು-ಹಿರಿಯರನ್ನು ಗೌರವಿಸುವ ಗುಣ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

    “ವಿದ್ಯೆ ಯಾರಪ್ಪನ ಸ್ವತ್ತಲ್ಲ, ಅದು ಸಾಧಕರ ಸ್ವತ್ತು. ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದರೆ ಅವರು ದೇಶದ ಆಸ್ತಿಯಾಗುತ್ತಾರೆ, ಇಲ್ಲದಿದ್ದರೆ ಸಮಾಜಕ್ಕೆ ಹೊರೆಯಾಗುತ್ತಾರೆ. ಬೇರೆ ಭಾಷೆಗಳನ್ನು ಕಲಿಯಲು ನಮ್ಮ ಅಭ್ಯಂತರವಿಲ್ಲ, ಆದರೆ ಕನ್ನಡಕ್ಕೆ ನಮ್ಮ ಬದುಕಿನಲ್ಲಿ ಯಾವಾಗಲೂ ಮಾತೃ ಸ್ಥಾನವೇ ಮೀಸಲಿರಬೇಕು.”

    – ಕೆ.ಎನ್. ರಾಜಣ್ಣ, ಶಾಸಕರು

    ಇಂದು ದೇಶದಲ್ಲಿ 140 ಕೋಟಿ ಜನಸಂಖ್ಯೆಯಿದ್ದು, ತೀವ್ರ ಸ್ಪರ್ಧೆಯಿದೆ. ವಿದ್ಯಾರ್ಥಿಗಳು ಎಷ್ಟು ಪರಿಶ್ರಮದಿಂದ ಕಲಿಯುತ್ತಾರೋ ಅಷ್ಟು ಉತ್ತಮ ಸ್ಥಾನ ಮಾನ ಸಿಗಲಿದೆ. ನಮ್ಮ ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಎಲ್ಲ ರೀತಿಯ ಅವಕಾಶಗಳಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

    ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಂಗಪ್ಪ ಮೇಷ್ಟ್ರು ಮಾತನಾಡಿ, ಮೆಟ್ರಿಕ್ ಹಾಗೂ ಪಿಯುಸಿಯಲ್ಲಿ ಕನ್ನಡದಲ್ಲಿ ಪೂರ್ಣ ಅಂಕ ಗಳಿಸಿದ ವಿದ್ಯಾರ್ಥಿಗಳಿಂದಲೇ ಕನ್ನಡದ ಬೇರುಗಳು ಇಂದಿಗೂ ಸಜೀವವಾಗಿವೆ. ಭಾಷಾ ಸೇವೆಯ ವಿಚಾರದಲ್ಲಿ ಶಾಸಕ ಕೆ.ಎನ್. ರಾಜಣ್ಣ (ಕೆಎನ್‌ಆರ್) ಅವರ ಕೊಡುಗೆ ಅಪಾರ ಎಂದು ಶ್ಲಾಘಿಸಿದರು.

    7ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಕೆ.ಪಿ. ನಟರಾಜು ಮಾತನಾಡಿ, ಕೆಪಿಎಸ್ ಶಾಲೆಗಳಿಂದ ಕನ್ನಡ ಕಲಿಕೆಗೆ ಸಮಸ್ಯೆಯಾಗುತ್ತಿದ್ದು, ಕನ್ನಡವನ್ನೇ ಪ್ರಧಾನ ಭಾಷೆಯಾಗಿ ಕಲಿಸಬೇಕಿದೆ. ಉನ್ನತ ಶಿಕ್ಷಣದಲ್ಲಿ ಕನ್ನಡವನ್ನು ನಿರ್ಲಕ್ಷಿಸುತ್ತಿರುವುದರಿಂದ ಶೇ. 35 ರಷ್ಟಿರುವ ಆಂಗ್ಲ ಮಾಧ್ಯಮದ ಮಕ್ಕಳ ಪಾಲಿಗೆ ಉನ್ನತ ಶಿಕ್ಷಣದ ಸೀಟುಗಳು ದಕ್ಕುತ್ತಿವೆ. ಈ ಬಗ್ಗೆ ಸರ್ಕಾರ ಮತ್ತು ರಾಜಕೀಯ ಪಕ್ಷಗಳ ಮೌನ ಆತಂಕಕಾರಿ ಎಂದು ಕಳವಳ ವ್ಯಕ್ತಪಡಿಸಿದರು.

    ಇಂದಿನ ದಿನಗಳಲ್ಲಿ ಅಪಭ್ರಂಶ (ತಪ್ಪುಗಳು) ಇಲ್ಲದೆ ಕನ್ನಡವನ್ನು ಮಾತನಾಡುವ, ಓದುವ ಮತ್ತು ಬರೆಯುವ ಮಕ್ಕಳ ಸಂಖ್ಯೆ ತೀರಾ ವಿರಳವಾಗಿದೆ. ಹಾಗಾಗಿ ಕೇವಲ ‘ಸಿರಿ ಗನ್ನಡಂ ಗೆಲ್ಗೆ’ ಎನ್ನುವುದಕ್ಕಿಂತ, ಭಾಷೆಯನ್ನು ಸರಿಯಾಗಿ ಬಳಸುವ ‘ಸರಿ ಕನ್ನಡಂ ಗೆಲ್ಗೆ’ ಮಾದರಿಯ ಶಿಕ್ಷಣದ ಅಗತ್ಯವಿದೆ. ಕನ್ನಡಿಗರು ಹಾಗೂ ಸರ್ಕಾರ ಕನ್ನಡ ಭಾಷಾ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದು ಹಿರಿಯ ಸಾಹಿತಿ ಪ್ರೊ. ಮಲನ ಮೂರ್ತಿ ಆಶಯ ವ್ಯಕ್ತಪಡಿಸಿದರು.

    ಕಾರ್ಯಕ್ರಮದಲ್ಲಿ ಎಸಿ ಗೊಟೂರು ಶಿವಪ್ಪ, ತಹಶೀಲ್ದಾರ್ ನಂದಿನಿ, ತಾ.ಪಂ ಇಓ ಉತ್ತಮ್, ಎಡಿ ಧನಂಜಯ್, ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ವಿ.ರಮೇಶ್, ಕಸಾಪ ಅಧ್ಯಕ್ಷೆ ಸಹನಾ ನಾಗೇಶ್, ಪದಾಧಿಕಾರಿಗಳಾದ ರಂಗಧಾಮಯ್ಯ, ಶಂಕರನಾರಾಯಣ, ಜಗದೀಶ್, ಮಹಾಲಿಂಗೇಶ್, ಕರಿಯಣ್ಣ, ಕೆ.ನಾರಾಯಣ್, ಪಿ.ಕೆ.ರಂಗಸ್ವಾಮಿ, ಗಂಗಾಧರ್, ವೀಣಾ ಶ್ರೀನಿವಾಸ್, ಉಮಾ ಮಲ್ಲೇಶ್, ಲಲಿತಾಂಬ ಲಕ್ಷ್ಮೀನರಸಯ್ಯ, ಗಾಯತ್ರಿ ನಾರಾಯಣ್ ಸೇರಿದಂತೆ ಹಲವು ಪ್ರಮುಖರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

    ವರದಿ: ಮಂಜುಸ್ವಾಮಿ ಎಂ.ಎನ್.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಮಧುಗಿರಿ: ತಿಂಗಳಲ್ಲಿ ಎರಡು ದಿನ ಪ್ರಜಾ ಸೇವೆ ಅಭಿಯಾನ

    September 6, 2026

    ನಿವೇಶನ ವಿತರಣೆಗೆ ಕ್ರಮ ಕೈಗೊಳ್ಳಿ: ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೆ.ಎನ್.ರಾಜಣ್ಣ ಸೂಚನೆ

    September 4, 2026

    ಮಧುಗಿರಿ: ಸಂಬಳ ಬಿಡುಗಡೆಯಾಗದ ಸಂಕಷ್ಟದಲ್ಲಿ 10 ಗ್ರಾ.ಪಂ. ನೌಕರರು: ಜೀವನ ನಡೆಸಲು ಪರದಾಡುವ ಸ್ಥಿತಿ ನಿರ್ಮಾಣ!

    September 4, 2026

    Leave A Reply Cancel Reply

    Our Picks

    ನೇಪಾಳ ಪ್ರವಾಹ: ತುಮಕೂರು ಮೂಲದ ಇಬ್ಬರು ನಾಪತ್ತೆ

    September 1, 2026

    ನೇಪಾಳದಲ್ಲಿ ಭೀಕರ ಪ್ರವಾಹದ ಅಬ್ಬರ: ಮತ್ತೊಂದು ಜಲಪ್ರಳಯದ ಭೀತಿ ಸೃಷ್ಟಿ

    August 28, 2026

    ಕಾವೇರಿ ನೀರು ವಿವಾದ: ಸುಪ್ರೀಂ ಕೋರ್ಟ್ ವಿಚಾರಣೆ ಬಳಿಕ ಮುಂದಿನ ನಡೆ ಕುರಿತು ನಿರ್ಧಾರ — ಸಚಿವ ರಾಮಲಿಂಗಾರೆಡ್ಡಿ

    August 13, 2026

    ಇತಿಹಾಸದಲ್ಲೇ ಪ್ರಥಮ: 80ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯ ಮೇಲೆ ಮೊಳಗಲಿದೆ ‘ವಂದೇ ಮಾತರಂ’

    August 11, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತಿಪಟೂರು

    ತಿಪಟೂರಿನಲ್ಲಿ ಹೋಟೆಲ್ ಹಾಗೂ ಡಾಬಾಗಳ ಮೇಲೆ ಜಂಟಿ ದಾಳಿ: ಕಳಪೆ ಆಹಾರ ಪದಾರ್ಥಗಳು ವಶ

    September 12, 2026

    ತಿಪಟೂರು: ನಗರದ ವಿವಿಧ ಹೋಟೆಲ್‌ ಗಳು, ಡಾಬಾಗಳು ಮತ್ತು ಬೇಕರಿಗಳ ಮೇಲೆ ನಗರಸಭೆ ಅಧಿಕಾರಿಗಳು ಹಾಗೂ ತಾಲೂಕು ವೈದ್ಯಾಧಿಕಾರಿಗಳು ಜಂಟಿ…

    100 ದಿನಗಳ ಆಡಳಿತದಲ್ಲಿ ಯಾವುದೇ ಸಾಧನೆಯಿಲ್ಲ: ಸಿಎಂ ಡಿ.ಕೆ. ಶಿವಕುಮಾರ್ ರಿಯಲ್ ಎಸ್ಟೇಟ್ ಏಜೆಂಟ್ ಥರ ಕಾಣ್ತಾರೆ: ಆರ್.ಅಶೋಕ್ ವಾಗ್ದಾಳಿ

    September 12, 2026

    ಇ.ಡಿ.ಗೆ ದೂರು ನೀಡಿದವರು ಯಾರೆಂದು ನನಗೆ ತಿಳಿದಿದೆ: ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟನೆ

    September 12, 2026

    ಪಂಚ ಗ್ಯಾರಂಟಿ ಯೋಜನೆಗಳು ನನ್ನ ಅಧ್ಯಕ್ಷತೆಯಲ್ಲೇ ರೂಪುಗೊಂಡವು: ಡಿ.ಕೆ. ಶಿವಕುಮಾರ್

    September 12, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.