ಕೊರಟಗೆರೆ: ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಸಿದ್ದರಬೆಟ್ಟದ ಡಾ.ಬಿ.ಆರ್.ಅಂಬೇಡ್ಕರ್ ಸನಿವಾಸ ಪ್ರೌಢ ಶಾಲೆಯ ವಿದ್ಯಾರ್ಥಿ — ವಿದ್ಯಾರ್ಥಿನಿಯರಿಗೆ ನೇಗಲಾಲ ಗ್ರಾಮದ ಹಳೆ ವಿದ್ಯಾರ್ಥಿನಿಯಾದ ಧನಲಕ್ಷ್ಮಿ ಕೃಷ್ಣಮೂರ್ತಿ ರವರು ಸಮವಸ್ತ್ರ ವಿತರಣೆ ಮಾಡಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಧನಲಕ್ಷ್ಮಿ ಕೃಷ್ಣಮೂರ್ತಿ ರವರು ಬಡ ವಿದ್ಯಾರ್ಥಿ — ವಿದ್ಯಾರ್ಥಿನಿಯರಿಗೆ ಅನುಕೂಲವಾಗಲೆಂದು ಸಮವಸ್ತ್ರ ವಿತರಣೆ ಮಾಡುತ್ತಿದ್ದೇವೆ, ಗ್ರಾಮೀಣ ಭಾಗದ ಮಕ್ಕಳು ಶಿಕ್ಷಣದಿಂದ ಯಾವುದೇ ಕಾರಣಕ್ಕೂ ವಂಚಿತರಾಗಬಾರದು, ಶಾಲೆಯ ಅಭಿವೃದ್ಧಿಗೆ ಮತ್ತು ಮಕ್ಕಳ ಭವಿಷ್ಯಕ್ಕಾಗಿ ಹೆಚ್ಚಿನದಾಗಿ ಸಹಕಾರ ಮಾಡುತ್ತೇವೆ ಎಂದರು.
ನಂತರ ಧನಲಕ್ಷ್ಮಿ ಕೃಷ್ಣಮೂರ್ತಿ ಅವರಿಗೆ ಶಾಲೆಯ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರಾದ ಆರ್ ನಾಗರಾಜ್, ಸಹ ಶಿಕ್ಷಕರಾದ ಎನ್.ಪಿ. ಮಂಜುಳಾ, ಪಿ. ಮುದ್ದಮ್ಮ, ಎಸ್ ಡಿ ಎ ರಂಗನಾಥ್, ಗ್ರಾಮಸ್ಥರಾದ ರಮೇಶ್, ಪತ್ರಕರ್ತರಾದ ಮಂಜುಸ್ವಾಮಿ ಎಂ ಎನ್, ಸುರೇಶ್ ಎನ್ ಎಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


