ಮಧುಗಿರಿ: ತಾಲೂಕು ಕಸಬಾ ಹೋಬಳಿ ತುಂಗೋಟಿ ಗ್ರಾಮದಲ್ಲಿ ನೆನ್ನೆ ರಾತ್ರಿ ಸುರಿದ ಸುರಿದ ಭಾರೀ ಮಳೆಗೆ ಮನೆಯೊಂದು ಬಿದ್ದ ಕಾರಣ ವೃದ್ಧೆಯೊಬ್ಬರು ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.
ಕೆಂಪು ಸೋಡಮ್ಮ(98) ಮೃತ ಪಟ್ಟ ವೃದ್ಧೆ ಎಂದು ಗುರುತಿಸಲಾಗಿದೆ. ರಾತ್ರಿ ಸುಮಾರು 3 ಗಂಟೆ ಸಮಯಕ್ಕೆ ಮನೆ ಕುಸಿದು ಬಿದ್ದಿದ್ದು, ಈ ವೇಳೆ ಮನೆಯ ಚಪ್ಪಡಿ ಕಲ್ಲುಗಳು ಅಜ್ಜಿಯ ಮೇಲೆ ಬಿದ್ದ ಕಾರಣ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಕ್ಕ ಪಕ್ಕದ ಮನೆಯವರು ಬೆಳಗ್ಗೆ ಸುಮಾರು 5 ಗಂಟೆಯ ವೇಳೆ ಸ್ಥಳಕ್ಕೆ ಹೋಗಿ ನೋಡಿದಾಗ ಅಜ್ಜಿಯು ಮೃತಪಟ್ಟಿರುವುದನ್ನು ಕಂಡು ಬಂದಿತ್ತು. ಕ್ಷಣವೇ ಸಂಬಂಧಪಟ್ಟವರಿಗೆ ಸ್ಥಳೀಯರು ಮಾಹಿತಿ ತಿಳಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy